ಅಷ್ಟೂರು (ಜನವಾಡ): ‘ಭಾವೈಕ್ಯದ ತಾಣವಾದ ಅಷ್ಟೂರಿನ ಗುಮ್ಮಟಗಳನ್ನು ವಿಶ್ವದ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಬೇಕು’ ಎಂದು ಬೇಮಳಖೇಡದ ರಾಜಶೇಖರ ಶಿವಾಚಾರ್ಯ ಹೇಳಿದರು.

ಅಲ್ಲಮಪ್ರಭು ದೇವರ ಜಾತ್ರೆ ನಿಮಿತ್ತ ಅಷ್ಟೂರಿನ ಗುಮ್ಮಟಗಳ ಪರಿಸರದಲ್ಲಿ ಗುರುವಾರ ನಡೆದ ಪ್ರವಚನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಜಿಲ್ಲೆ ತನ್ನ ಐತಿಹಾಸಿಕ ತಾಣಗಳಿಂದ ದೇಶದ ಗಮನ ಸೆಳೆದಿದೆ. ಇದರ ಇತಿಹಾಸ ರಾಮಾಯಣ ಕಾಲಕ್ಕಿಂತಲೂ ಹಳೆಯದಾಗಿದೆ. ದ್ವಾಪರಯುಗದಲ್ಲಿ ಕುಂತಲ ದೇಶವೆಂದು ಹೆಸರಾಗಿತ್ತು’ ಎಂದು ತಿಳಿಸಿದರು.

ಮಾಡ್ಯಾಳದ ಸೋಮಶೇಖರ ಶಿವರಾಜ ಒಡೆಯರ್, ಶ್ರೀಮಂತ ಧರ್ಮಣ್ಣ ಒಡೆಯರ್, ಶರಣ ಶಂಕರಲಿಂಗ ಮಹಾರಾಜ ಸಾನಿಧ್ಯ ವಹಿಸಿದ್ದರು. ಪಿಕೆಪಿಎಸ್ ಅಧ್ಯಕ್ಷ ಶಿವಕುಮಾರ ಪಾಟೀಲ, ಉಪಾಧ್ಯಕ್ಷ ಸಂಜುಕುಮಾರ, ಕಾರ್ಯನಿರ್ವಹಣಾಧಿಕಾರಿ ಜಯರಾಜ ಇದ್ದರು. ಶಶಿಕುಮಾರ ಪಾಟೀಲ ಸ್ವಾಗತಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.