ದೇವರ ದರ್ಶನಕ್ಕೆ ಬಂದ ಭಕ್ತರು
ಅಹಮ್ಮದ್ ಶಾ ವಲಿ ಬಹಮನಿ ಸಮಾಧಿ ಇರುವ ಗುಮ್ಮಟವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಿರುವುದು
ಅಹಮ್ಮದ್ ಶಾ ವಲಿ ಬಹಮನಿ ಸಮಾಧಿಗೆ ಭಕ್ತರು ಚಾದರ್ ಸಮರ್ಪಿಸಿದರು
–ಪ್ರಜಾವಾಣಿ ಚಿತ್ರಗಳು: ಲೋಕೇಶ್ ವಿ. ಬಿರಾದಾರ
ಭಕ್ತರು ಸಾಲು ದೀಪಗಳನ್ನು ಬೆಳಗಿಸಿದರು

ಅಷ್ಟೂರಿನಲ್ಲಿ ಹಿಂದೂಗಳು ಅಲ್ಲಮಪ್ರಭು ದೇವರ ಜಾತ್ರೆ ಆಚರಿಸಿದರೆ ಮುಸ್ಲಿಮರು ಸಂದಲ್ ಆಚರಿಸುತ್ತಾರೆ. ಈ ಗ್ರಾಮ ಎರಡು ಧರ್ಮಗಳ ಧಾರ್ಮಿಕ ಸಾಮರಸ್ಯಕ್ಕೆ ಜೀವಂತ ಸಾಕ್ಷಿ.
–ರಾಜಶೇಖರ್ ಪಾಟೀಲ್ ಅಷ್ಟೂರ್ ಮುಖಂಡ
ಅನೇಕ ವರ್ಷಗಳಿಂದ ಹಿಂದೂ ಮತ್ತು ಮುಸ್ಲಿಮರು ಅಷ್ಟೂರಿನಲ್ಲಿ ಜಾತ್ರೆ ಆಚರಿಸಿಕೊಂಡು ಬರುತ್ತಿದ್ದೇವೆ. ನಮ್ಮಲ್ಲಿ ಯಾವುದೇ ಭೇದಭಾವ ಇಲ್ಲ. ಎಲ್ಲರೂ ದೇವರ ಮಕ್ಕಳೆಂಬುದಕ್ಕೆ ಸಾಕ್ಷಿ.
–ಮುಹಮ್ಮದ್ ಅಬ್ದುಲ್ ಮುಖಂಡ