ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಔರಾದ್: 38 ಆಶಾ ಕಾರ್ಯಕರ್ತೆಯರಿಗೆ ನೆರವು

ತಲಾ ₹ 500 ವಿತರಿಸಿ ಮಾದರಿ ಜನ್ಮದಿನ ಆಚರಿಸಿದ ಧನರಾಜ ಮುಸ್ತಾಪುರ
Last Updated 11 ಜೂನ್ 2021, 2:23 IST
ಅಕ್ಷರ ಗಾತ್ರ

ಔರಾದ್: ದಲಿತ ಸಂಘರ್ಷ ಸಮಿತಿ ತಾಲ್ಲೂಕು ಘಟಕದ ಸಂಚಾಲಕ ಧನರಾಜ ಮುಸ್ತಾಪುರ ಅವರು ತಮ್ಮ ಜನ್ಮದಿನದಂದು ಆಶಾ ಕಾರ್ಯಕರ್ತೆಯರಿಗೆ ಆರ್ಥಿಕ ನೆರವು ನೀಡಿದ್ದಾರೆ.

ಹೆಡಗಾಪುರ ಹಾಗೂ ಸಂತಪುರ ವ್ಯಾಪ್ತಿಯಲ್ಲಿ ಬರುವ 38 ಆಶಾ ಕಾರ್ಯಕರ್ತೆಯರಿಗೆ ತಲಾ ₹500 ನಗದು ನೀಡಿ ಶಾಲು ಹೊದಿಸಿ ಗೌರವಿಸಿದರು.

ಈ ವೇಳೆ ಮಾತನಾಡಿದ ಜಾನಪದ ಪರಿಷತ್ ತಾಲ್ಲೂಕು ಅಧ್ಯಕ್ಷ ಸಂಜೀವಕುಮಾರ ಜುಮ್ಮಾ, ‘ಈ ಕೋವಿಡ್‍ನಲ್ಲಿ ವೈದ್ಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತರ ಶ್ರಮ ಬಹಳಷ್ಟಿದೆ. ಅಂತವರನ್ನು ಗುರುತಿಸಿ ಗೌರವಿಸುವ ಮೂಲಕ ಧನರಾಜ ಮುಸ್ತಾಪುರ ಮಾದರಿ ಕೆಲಸ ಮಾಡಿದ್ದಾರೆ’ ಎಂದು ಹೇಳಿದರು.

ಪಿಎಸ್‍ಐ ಸಿದ್ದಲಿಂಗ ಮಾತನಾಡಿ, ‘ಇಂತಹ ಸಂಕಷ್ಟದ ಸಮಯದಲ್ಲಿ ಜನರ ನೆರವಿಗೆ ಬರುವವರು ನಿಜವಾದ ಮಾನವೀಯ ಗುಣ ಹೊಂದಿರುವವರು. ಧನರಾಜ ಮುಸ್ತಾಪುರ ಜನಪರ
ಕಾಳಜಿ ಮೆಚ್ಚುವಂತಹದ್ದು’ ಎಂದು ತಿಳಿಸಿದರು.

ಡಾ. ಚಂದ್ರಶೇಖರ್ ಅಮಲಾಪುರೆ ಮಾತನಾಡಿ, ‘ವೈದ್ಯರಿಗೆ ರೋಗಿಗಳೇ ದೇವರು. ನಮ್ಮ ವೈದ್ಯ ಸಿಬ್ಬಂದಿ ತಮ್ಮ ಜೀವದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ. ಸಮಾಜ ಈ ರೀತಿ ಅವರನ್ನು ಗೌರವಿಸಿದರೆ ಇನ್ನು ಹೆಚ್ಚಿನ ಕೆಲಸ ಮಾಡಲು ಅನುಕೂಲವಾಗಲಿದೆ’ ಎಂದು ಹೇಳಿದರು.

ಸಹಾಯಕ ಕೃಷಿ ನಿರ್ದೇಶಕ ಅಬ್ದುಲ್ ಮಾಜೀದ್, ಪಿಎಸ್‍ಐ ರೇಣುಕಾ, ಸೋಮನಾಥ ಕಾಳಗೆ, ಗಣಪತಿ ಶೆಂಬೆಳ್ಳಿ, ತುಕಾರಾಮ ಹಸನ್ಮುಖಿ, ಸತೀಶ ವಗ್ಗೆ, ಸುಭಾಷ ಲಾಧಾ, ಯವನಕುಮಾರ, ಗುರುನಾಥ, ಕಿರಣಕುಮಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT