ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸಿಬಿ ಬಲೆಗೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್

ಕಾಮಗಾರಿ ವಹಿಸಿಕೊಡಲು ₹ 30 ಸಾವಿರ ಲಂಚ ಸ್ವೀಕಾರ
Last Updated 31 ಮಾರ್ಚ್ 2022, 14:32 IST
ಅಕ್ಷರ ಗಾತ್ರ

ಬೀದರ್: ಜಲ ನಿರ್ಮಲ ಯೋಜನೆಯ ₹ 45 ಲಕ್ಷ ವೆಚ್ಚದ ಕಾಮಗಾರಿ ವಹಿಸಿಕೊಡಲು ಪ್ರಥಮ ದರ್ಜೆ ಗುತ್ತಿಗೆದಾರರಿಂದ ₹ 30 ಸಾವಿರ ಲಂಚ ಪಡೆಯುತ್ತಿದ್ದಾಗ ಇಲ್ಲಿಯ ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ನಾಗನಾಥ ಲಕ್ಷ್ಮಣರಾವ್‌ ಬಿರಾದಾರ ಗುರುವಾರ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಜಿಲ್ಲಾ ಪಂಚಾಯಿತಿ ಕಚೇರಿ ಕಟ್ಟಡದಲ್ಲೇ ಚಿಟಗುಪ್ಪ ತಾಲ್ಲೂಕಿನ ನಿರ್ಣಾದ ಪ್ರಥಮ ದರ್ಜೆ ಗುತ್ತಿಗೆದಾರ ಮಚ್ಚೇಂದ್ರ ರೆಡ್ಡಿ ಅವರಿಂದ ಹಣ ಪಡೆಯುತ್ತಿದ್ದಾಗ ನಾಗನಾಥ ಬಿರಾದಾರ ಅವರನ್ನು ಎಸಿಬಿ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡರು.

ಗುತ್ತಿಗೆ ಕಾಮಗಾರಿ ವಹಿಸಿಕೊಡಲು ಸಹಾಯಕ ಕಾರ್ಯನಿರ್ವಾಹಕ ಹಣಕ್ಕಾಗಿ ಪೀಡಿಸುತ್ತಿದ್ದರು. ಹೀಗಾಗಿ ಮಚ್ಚೇಂದ್ರ ರೆಡ್ಡಿ ಅವರು ಎಸಿಬಿಗೆ ಲಿಖಿತ ದೂರು ನೀಡಿದ್ದರು. ಎಸಿಬಿ ಎಸ್‌ಪಿ ಅಮರನಾಥ ರೆಡ್ಡಿ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಹಣಮಂತರಾಯ, ಇನ್‌ಸ್ಪೆಕ್ಟರ್ ಶರಣಬಸಪ್ಪ ಕೋಡಲಾ, ವೆಂಕಟೇಶ ಯಡಹಳ್ಳಿ, ಸಿಬ್ಬಂದಿ ಶ್ರೀಕಾಂತ, ಕುಶಾಲ್, ಅನಿಲ್, ಕಿಶೋರ್ ದಾಳಿಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT