ಔರಾದ್: ಪಟ್ಟಣದಲ್ಲಿ ₹3 ಕೋಟಿ ಮೊತ್ತದ ಡಾ.ಬಿ.ಆರ್. ಅಂಬೇಡ್ಕರ್ ಸಮುದಾಯ ಭವನದ ನಿರ್ಮಾಣ ಕಾಮಗಾರಿಗೆ ಶಾಸಕ ಪ್ರಭು ಚವಾಣ್ ಈಚೆಗೆ ಭೂಮಿ ಪೂಜೆ ನೆರವೇರಿಸಿದರು.

‘ಇಲ್ಲಿ ಸುಂದರ ಹಾಗೂ ಭವ್ಯ ಡಾ. ಅಂಬೇಡ್ಕರ್ ಭವನ ನಿರ್ಮಾಣ ಆಗಬೇಕು ಎಂಬುದು ಬಹು ವರ್ಷಗಳ ಬೇಡಿಕೆ ಇತ್ತು. ಇದಕ್ಕಾಗಿ ಹಿಂದೆ ಅನುದಾನ ನೀಡಲಾಗಿತ್ತು. ಆದರೆ ಜಾಗ ಸಮಸ್ಯೆಯಿಂದ ವಿಳಂಬ ಆಗಿತ್ತು. ಈಗ ಕಾಲ ಕೂಡಿ ಬಂದಿದ್ದು, ಸುಸಜ್ಜಿತ ಭವನ ನಿರ್ಮಾಣವಾಗಲಿದೆ’ ಎಂದು ಹೇಳಿದರು.

‘ಈ ಭವನ ಡಾ. ಅಂಬೇಡ್ಕರ್ ಅವರ ಚಿಂತನೆಗೆ ವೇದಿಕೆಯಾಗಲಿದೆ. ಸಮಾಜ ಬಾಂಧವರು ಸಭೆ-ಸಮಾರಂಭಗಳು, ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲು ಅನುಕೂಲ ಆಗುವ ರೀತಿಯಲ್ಲಿ ಕಟ್ಟಡವನ್ನು ವಿನ್ಯಾಸಗೊಳಿಸಲಾಗಿದೆ. ಅಗತ್ಯ ಬಿದ್ದರೆ ಹೆಚ್ಚಿನ ಅನುದಾನ ನೀಡಲಾಗುವುದು’ ಎಂದು ತಿಳಿಸಿದರು.

‘ಈ ಭವನ ಕ್ರಿಯಾ ಯೋಜನೆ ಪ್ರಕಾರ ನಡೆಯಬೇಕು. ಕಾಮಗಾರಿಗೆ ಬಳಸುವ ಸಾಧನೆ, ಸಲಕರಣೆ ಗುಣಮಟ್ಟದಿಂದ ಕೂಡಿರಬೇಕು. ಯಾವುದೇ ರೀತಿ ಲೋಪ ಆಗದಂತೆ ನೋಡಿಕೊಳ್ಳಬೇಕು’ ಎಂದು ಗುತ್ತಿಗೆದಾರರಿಗೆ ಸೂಚನೆ ನೀಡಿದರು.

ಮುಖಂಡ ಶಿವರಾಜ ಅಲ್ಮಾಜೆ, ಅರಹಂತ ಸಾವಳೆ, ಸಂಜು ವಡೆಯರ್, ಸೂರ್ಯಕಾಂತ ಸಿಂಗೆ, ಸೂರ್ಯಕಾಂತ ಅಲ್ಮಾಜೆ, ಬಾಬುರಾವ ತಾರೆ, ಯಾದು ಮೇತ್ರೆ, ಅಶೋಕರಾವ ಮೇತ್ರೆ, ಸುಜಿತ ರಾಠೋಡ್, ಬಸವರಾಜ ಹಳ್ಳೆ, ರತ್ನದೀಪ ಕಸ್ತೂರೆ ಮತ್ತಿತರರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260325-33-585083671

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.