ಔರಾದ್: ವಿಶ್ವಗುರು ಬಸವಣ್ಣನವರ ಜಯಂತ್ಯುತ್ಸವ ಅಂಗವಾಗಿ ಭಾನುವಾರ ಸಂಜೆ ಪಟ್ಟಣದಲ್ಲಿ ಭವ್ಯ ಬೈಕ್ ರ್ಯಾಲಿ ನಡೆಯಿತು. ರ್ಯಾಲಿಯಲ್ಲಿ ನೂರಾರು ಯುವಕರು ಹಾಗೂ ಬಸವ ಭಕ್ತರು ಉತ್ಸಾಹದಿಂದ ಪಾಲ್ಗೊಂಡರು.

ಪಟ್ಟಣದ ಚನ್ನಬಸವ ಪಟ್ಟದ್ದೇವರ ವೃತ್ತದ ಬಳಿ ಮುಖಂಡ ಸಾಗರ ಪಾಟೀಲ, ಉದ್ಯಮಿ ಪ್ರಕಾಶ ಘುಳೆ ಷಟಸ್ಥಲ ಧ್ವಜಾರೋಹಣ ನೆರವೇರಿಸಿ ರ್ಯಾಲಿಗೆ ಚಾಲನೆ ನೀಡಿದರು.

ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ ಮಾತನಾಡಿ, ‘ಬಸವಣ್ಣನವರ ಸಮಾನತೆ, ಶ್ರೇಷ್ಠ ಮಾನವೀಯ ಮೌಲ್ಯಗಳನ್ನು ಯುವಪೀಳಿಗೆ ಅಳವಡಿಸಿಕೊಳ್ಳುವುದು ಅತ್ಯಂತ ಅಗತ್ಯ’ ಎಂದರು.

ಬಸವಣ್ಣನವರ ಭಾವಚಿತ್ರ ಹಾಗೂ ಧ್ವಜಗಳ ಅಲಂಕಾರಗಳೊಂದಿಗೆ ನೂರಾರು ಬೈಕ್ ಸವಾರರು ಚನ್ನಬಸವ ಪಟ್ಟದ್ದೇವರು ವೃತ್ತ, ಕನ್ನಡಾಂಬೆ ವೃತ್ತ, ತಾಪಂ ಕಚೇರಿ, ಬಸ್ ನಿಲ್ದಾಣ, ಬಸವೇಶ್ವರ ವೃತ್ತ, ದೇಶಮುಖ ಗಲ್ಲಿ, ಬುಟ್ಟೆ ಬಡಾವಣೆ, ಸಾರ್ವಜನಿಕ ಆಸ್ಪತ್ರೆ, ಅಗ್ನಿ ಬಸವಣ್ಣ ಮೂಲಕ ಪ್ರಮುಖ ಬೀದಿಗಳಲ್ಲಿ ಸಂಚರಿಸಿತ್ತು. ರ್ಯಾಲಿಯಲ್ಲಿ ವಚನ ಹಾಗೂ ಬಸವ ಸಂದೇಶ ಮೊಳಗಿತು.

ಮುಖಂಡರಾದ ಬಂಡೆಪ್ಪ ಕಂಟೆ, ರವೀಂದ್ರ ಮೀಸೆ, ಗುಂಡಯ್ಯ ಸ್ವಾಮಿ, ರಘುನಾಥ ಪಾಟೀಲ, ಮಲ್ಲಿಕಾರ್ಜುನ ಹಿಪ್ಪಳಗಾಂವೆ, ಕಲ್ಲಪ್ಪ ದೇಶಮುಖ, ಡಾ. ವೈಜಿನಾಥ ಬುಟ್ಟೆ, ಶರಣಪ್ಪ ಪಾಟೀಲ, ಶರಣಪ್ಪ ನಾಗಲಗಿದ್ದೆ, ಜಗನ್ನಾಥ ಮೂಲಗೆ, ಮಲ್ಲಿಕಾರ್ಜುನ ಟಂಕಸಾಲೆ, ಚಂದ್ರಕಾಂತ ಘುಳೆ, ಡಾ. ಧನರಾಜ ರಾಗಾ, ಶ್ರೀನಿವಾಸ ಖೂಬಾ, ಬಸವರಾಜ ಹಳ್ಳೆ, ಶರಣಪ್ಪ ಚಿಟ್ಮೆ, ರಾಜಕುಮಾರ ನಾಯ್ಕ, ಚೇತನ ಕಪ್ಪೆಕೇರಿ, ಕಿರಣ ಉಪ್ಪೆ, ಅಶೋಕ ಶೆಂಬೆಳ್ಳಿ, ಶಿವಕುಮಾರ ಕಾಂಬಳೆ, ವೀರೇಶ ಅಲಮಾಜೆ, ಬಸವರಾಜ ಶೆಟಕಾರ, ಅಶೋಕ ಅಲಮಾಜೆ, ಬಸವರಾಜ ಚೌಕಂಪಳ್ಳೆ, ಚಂದ್ರಕಾಂತ ಜೋಶಿ, ಬಸವರಾಜ ಮಾನೂರೆ, ಸಂದೀಪ ಪಾಟೀಲ, ಆನಂದ ದ್ಯಾಡೆ, ಶಂಕು ನಿಶ್ಪತೆ, ಸಾಗರ ಚಿದ್ರೆ, ಮಹಾದೇವ ಸಿಂಧೆ, ಅನೀಲ ಮೇತ್ರೆ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260420-33-1976691502

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.