ಔರಾದ್: ‘ಕ್ಷೇತ್ರದ ಎಲ್ಲ ಗ್ರಾಮಗಳ ಪರಿಶಿಷ್ಟ ಜಾತಿಯ ಓಣಿಗಳು ಹಾಗೂ ತಾಂಡಾಗಳಲ್ಲಿ ಸಮುದಾಯ ಭವನಗಳನ್ನು ನಿರ್ಮಿಸಲಾಗುವುದು’ ಎಂದು ಶಾಸಕ ಪ್ರಭು ಚವಾಣ್ ಹೇಳಿದರು.

ತಾಲ್ಲೂಕಿನ ಬೋಂತಿಯಲ್ಲಿ ಘಮಸುಬಾಯಿ ತಾಂಡಾದಲ್ಲಿ ಶನಿವಾರ ಸಂಜೆ ನಡೆದ ಸಮಾಜದ ಚಿಂತನ-ಮಂಥನ ಸಭೆಯಲ್ಲಿ ಅವರು ಮಾತನಾಡಿದರು.

‘ಪರಿಶಿಷ್ಟ ಸಮುದಾಯ ವಾಸಿಸುವ ಪ್ರತಿಯೊಂದು ಗ್ರಾಮದಲ್ಲೂ ಸಮುದಾಯ ಭವನ ನಿರ್ಮಾಣ ಮಾಡುವ ಬೇಡಿಕೆ ಇದ್ದು, ಶೀಘ್ರದಲ್ಲಿ ಅದಕ್ಕೆ ಸ್ಪಂದನೆ ಸಿಗಲಿದೆ. ತಾವು ಕೂಡ ದಲಿತ ಸಮುದಾಯದವರಾಗಿದ್ದು, ನಮ್ಮ ಸಮುದಾಯ ಅಭಿವೃದ್ಧಿಗೆ ಸದಾ ಬದ್ಧ’ ಎಂದು ಹೇಳಿದರು.

‘ಪರಿಶಿಷ್ಟ ಜಾತಿ ವಿದ್ಯಾರ್ಥಿಗಳು ಐಎಎಸ್, ಐಪಿಎಸ್, ಕೆಎಎಸ್ ಅಧಿಕಾರಿಗಳಾಗಿ, ವೈದ್ಯರು ಮತ್ತು ಎಂಜಿನಿಯರ್ಗಳಾಗಿ ಹೊರಬರಬೇಕು ಎಂಬುದು ನನ್ನ ಕನಸಾಗಿದೆ. ಪಾಲಕರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು ಹಾಗೂ ವಿದ್ಯಾರ್ಥಿಗಳು ಉನ್ನತ ಗುರಿಗಳನ್ನು ಹೊಂದಿ ಅಧ್ಯಯನ ಮಾಡಬೇಕು’ ಎಂದು ಸಲಹೆ ನೀಡಿದರು.

ಮುಖಂಡ ಅರಹಂತ ಸಾವಳೆ, ಸೂರ್ಯಕಾಂತ ಸಿಂಗೆ ಔರಾದ್ ಪಟ್ಟಣದಲ್ಲಿ ಡಾ. ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣ ಆಗುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.

ಬಾಲಾಜಿ ಕಾಳೆಕರ್, ನಾರಾಯಣ ವಾಘಮಾರೆ, ಪ್ರಕಾಶ ಭಂಗಾರೆ, ಸಂಜುಕುಮಾರ ಡೊಂಗ್ರೆ, ಸಂತೋಷ ಜೊನ್ನಿಕೇರಿ, ಸಿದ್ಧಾರ್ಥ ರಾಜುರೆ, ಸಂತೋಷ ಕಾಂಬಳೆ, ಶಿವರಾಜ ಝುಲಾಂಡೆ, ಸೋಪಾನರಾವ ಡೊಂಗ್ರೆ, ರಮೇಶ ಶೆಳಕೆ, ತುಳಸಿರಾಮ ಬೇಂದ್ರೆ, ಸುಧಾಮ ಭಾಸ್ಕರ್, ದಿಲೀಪ ಸೋಮವಂಶಿ, ಕಿರಣ ಮಾರ್ತಾಂಡ್, ಹರಿ ಮದನೂರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260323-33-994041855

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.