ಔರಾದ್: ಬಸ್ ಸಮಯಕ್ಕೆ ಬಾರದೆ ವೈದ್ಯಕೀಯ ಚಿಕಿತ್ಸೆ ಪಡೆಯಲು ವಿಳಂಬವಾದ ಹಿನ್ನೆಲೆಯಲ್ಲಿ ನಿವೃತ್ತ ಸರ್ಕಾರಿ ನೌಕರರೊಬ್ಬರಿಗೆ ₹5 ಸಾವಿರ ಪರಿಹಾರ ನೀಡುವಂತೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಜಿಲ್ಲಾ ಗ್ರಾಹಕರ ಆಯೋಗ ಮೇ 26ರಂದು ಆದೇಶ ಮಾಡಿದೆ.

ಔರಾದ್ ಪಟ್ಟಣದ ನಿವೃತ್ತ ಸರ್ಕಾರಿ ನೌಕರ ವಿಜಯಕುಮಾರ ಗಾದಗೆ ಅವರು 2024ರ ಜೂನ್ 30ರಂದು ಅನಾರೋಗ್ಯದ ಕಾರಣ ಚಿಕಿತ್ಸೆಗಾಗಿ ಮಹಾರಾಷ್ಟ್ರದ ಉದಗೀರ್ಗೆ ತೆರಳಲು ಬೆಳಿಗ್ಗೆ 11 ಗಂಟೆಗೆ ಬಸ್ ನಿಲ್ದಾಣಕ್ಕೆ ಬಂದಿದ್ದರು. ಆದರೆ ನಿಗದಿತ ಸಮಯಕ್ಕೆ ಬಸ್ ಆಗಮಿಸದೆ ಸುಮಾರು ಎರಡು ಗಂಟೆಗಳ ತಡವಾಗಿ ಬಂದ ಕಾರಣ ಅವರು ಆಸ್ಪತ್ರೆಗೆ ಸಮಯಕ್ಕೆ ತಲುಪಲು ಸಾಧ್ಯವಾಗಲಿಲ್ಲ. ಪರಿಣಾಮ ವೈದ್ಯ ಕೀಯ ತಪಾಸಣೆ ತಪ್ಪಿಹೋಗಿ ಆರೋಗ್ಯ ಸಮಸ್ಯೆ ಮತ್ತಷ್ಟು ಉಲ್ಬಣಗೊಂಡಿದ್ದು, ಹೆಚ್ಚುವರಿ ವೆಚ್ಚವನ್ನೂ ಭರಿಸಬೇಕಾಯಿತು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಕೆಕೆಆರ್ಟಿಸಿ ಔರಾದ್ ಘಟಕ ವ್ಯವಸ್ಥಾಪಕ, ಸಂಚಾರ ನಿಯಂತ್ರಕ ಹಾಗೂ ವಿಭಾಗೀಯ ನಿಯಂತ್ರಕರ ವಿರುದ್ಧ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಲಾಗಿತ್ತು.

ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಗ್ರಾಹಕರ ಆಯೋಗ, ಸಾರಿಗೆ ಸಂಸ್ಥೆಯ ಸೇವೆಯಲ್ಲಿ ನ್ಯೂನತೆ ಕಂಡುಬಂದಿದೆ ಎಂದು ಅಭಿಪ್ರಾಯಪಟ್ಟಿದ್ದು, ದೂರುದಾರರಿಗೆ ಮಾನಸಿಕ ಸಂಕಟ ಮತ್ತು ಕುರುಕುಳಕ್ಕೆ ₹2 ಸಾವಿರ ಹಾಗೂ ಪ್ರಕರಣದ ವೆಚ್ಚಕ್ಕಾಗಿ ₹3 ಸಾವಿರ ಸೇರಿದಂತೆ ಒಟ್ಟು ₹5 ಸಾವಿರ ಪರಿಹಾರ ಪಾವತಿಸಲು ಆದೇಶಿಸಿದೆ.

ಇದಲ್ಲದೆ, ಆದೇಶ ಹೊರಡಿಸಿದ ದಿನಾಂಕದಿಂದ 45 ದಿನಗಳೊಳಗೆ ಪರಿಹಾರ ಮೊತ್ತವನ್ನು ಪಾವತಿಸದಿದ್ದಲ್ಲಿ ವಾರ್ಷಿಕ ಶೇ 9 ಬಡ್ಡಿಯೊಂದಿಗೆ ಹಣ ಪಾವತಿಸಬೇಕೆಂದು ಆಯೋಗ ಸ್ಪಷ್ಟಪಡಿಸಿದೆ.

ಸಾರ್ವಜನಿಕ ಸಾರಿಗೆ ಸೇವೆಗಳ ಗುಣಮಟ್ಟ ಮತ್ತು ಪ್ರಯಾಣಿಕರ ಹಕ್ಕುಗಳ ಕುರಿತು ಈ ತೀರ್ಪು ಮಹತ್ವದ್ದಾಗಿದೆ. ಬಸ್ ಸೇವೆಯಲ್ಲಿನ ವಿಳಂಬವೂ ಗ್ರಾಹಕರ ಹಕ್ಕು ಉಲ್ಲಂಘನೆಯಾಗಬಹುದು ಎಂಬುದನ್ನು ಈ ಆದೇಶ ಸ್ಪಷ್ಟಪಡಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260531-33-2103763785

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.