ಔರಾದ್: ತಾಲ್ಲೂಕಿನ ಚಿಕ್ಲಿ (ಜೆ) ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾದ 12 ಅಡಿ ಎತ್ತರದ ಅಶ್ವಾರೂಢ ಶಿವಾಜಿ ಪ್ರತಿಮೆಯನ್ನು ಶುಕ್ರವಾರ ರಾತ್ರಿ ಅನಾವರಣ ಮಾಡಲಾಯಿತು.

ಸಂಸದ ಸಾಗರ್ ಖಂಡ್ರೆ ನೂತನ ಪ್ರತಿಮೆ ಅನಾವರಣಗೊಳಿಸಿ, ‘ಶಿವಾಜಿ ಮಹಾರಾಜರ ದೇಶಭಕ್ತಿ ಇಂದಿನ ಯುವಕರಿಗೆ ಆದರ್ಶವಾಗಬೇಕು’ ಎಂದರು.

ಸಾನ್ನಿಧ್ಯ ವಹಿಸಿದ ಚಂದ್ರಶೇಖರ ಮಹಾರಾಜ ಮಾತನಾಡಿ, ‘ಚಿಕ್ಲಿಯಲ್ಲಿ ಶಿವಾಜಿ ಪ್ರತಿಮೆ ಆಗುವ ಮೂಲಕ ಇಲ್ಲಿ ಸದಾ ಅವರ ಆದರ್ಶ ಜಾಗೃತವಾಗಿರುತ್ತವೆ’ ಎಂದು ಹೇಳಿದರು.

ಹಿರಿಯ ಕಾಂಗ್ರೆಸ್ ಮುಖಂಡ ಭೀಮಸೇನರಾವ ಶಿಂಧೆ ಮಾತನಾಡಿ, ‘ಇದು ಕೇವಲ ಶಿವಾಜಿ ಪ್ರತಿಮೆ ಅಲ್ಲ, ಶೌರ್ಯದ ಸಂಕೇತ’ ಎಂದರು.

ಮುಖಂಡ ಕಿರಣ ಪಾಟೀಲ ಮಾತನಾಡಿ, ‘ಸಂಸದ ಸಾಗರ್ ಖಂಡ್ರೆ, ಮುಖಂಡ ಭೀಮಸೇನರಾವ ಸಿಂಧೆ ಅವರ ಸಹಕಾರದಿಂದ ₹25 ಲಕ್ಷ ವೆಚ್ಚದಲ್ಲಿ ದೊಡ್ಡ ಶಿವಾಜಿ ಪ್ರತಿಮೆ ನಿರ್ಮಾಣ ಮಾಡಲಾಗಿದೆ’ ಎಂದರು.

ತರುಣ ನಾಗಮಾರಪಳ್ಳಿ, ಪ್ರೇರಣಾತಾಯಿ, ಸತೀಶ ವಾಸರೆ ಮಾತನಾಡಿದರು.

ತಹಶೀಲ್ದಾರ್ ಮಹೇಶ ಪಾಟೀಲ, ತಾ.ಪಂ. ಇಒ ಕಿರಣ ಪಾಟೀಲ, ಅಮರ ಜಾಧವ, ಜ್ಞಾನೋಬಾ ಪಾಟೀಲ, ಕಿಶನ ಪಾಟೀಲ ಜಂಬಗಿ, ಈಶ್ವರಸಿಂಗ್ ಠಾಕೂರ್, ವೆಂಕಟರಾವ ಪಾಟೀಲ, ಸುಭಾಷ ಪಾಟೀಲ, ಸತೀಶ ಪಾಟೀಲ, ವಿಶಾಲ ಪಾಟೀಲ, ಪವನ ಪಾಟೀಲ, ಸಾಯಿನಾಥ ಪಾಟೀಲ, ಭಾನುದಾಸ ಪಾಟೀಲ, ರಮೇಶ ಪಾಟೀಲ ಸೇರಿದಂತೆ ಅನೇಕರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260323-33-1596657859

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.