ಔರಾದ್: ಕಾರ್ಮಿಕರ ಹಿತದೃಷ್ಟಿಯಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಎಲ್ಲ ಯೋಜನೆಗಳನ್ನು ಅರ್ಹರಿಗೆ ತಲುಪಿಸುವಂತೆ ಶಾಸಕ ಪ್ರಭು ಚವಾಣ್ ಸೂಚಿಸಿದರು.

ಇಲ್ಲಿಯ ಶಾಸಕರ ಕಚೇರಿ ಆವರಣದಲ್ಲಿ ಶುಕ್ರವಾರ ಕಾರ್ಮಿಕ ಇಲಾಖೆ ಹಾಗೂ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಸುರಕ್ಷತಾ ಕಿಟ್ ವಿತರಿಸಿ ಅವರು ಮಾತನಾಡಿದರು.

‘ಕಾರ್ಮಿಕರಿಗೆ ಪಿಂಚಣಿ, ದುರ್ಬಲತೆ ಪಿಂಚಣಿ, ಟೂಲ್ಕಿಟ್, ಹೆರಿಗೆ, ಅಂತ್ಯಕ್ರಿಯೆ, ಶಿಕ್ಷಣ, ವೈದ್ಯಕೀಯ, ಅಪಘಾತ, ಮದುವೆ ಹಾಗೂ ತಾಯಿ-ಮಗು ಸಹಾಯಧನ ಸೇರಿದಂತೆ ಹಲವು ಯೋಜನೆಗಳಿದ್ದು, ಪ್ರತಿಯೊಬ್ಬರೂ ಕಾರ್ಮಿಕ ಕಾರ್ಡ್ ಪಡೆದು ಸೌಲಭ್ಯಗಳನ್ನು ಬಳಸಿಕೊಳ್ಳಬೇಕು’ ಎಂದರು.

ಕಾರ್ಮಿಕ ನಿರೀಕ್ಷಕ ರಾಹುಲ್ ಬಿ. ರತ್ನಾಕರ ಅವರು ಕಾರ್ಮಿಕ ಕಾರ್ಡ್ ಮತ್ತು ಅದರ ನವೀಕರಣದ ಮಹತ್ವ ತಿಳಿಸಿದರು.

ಸುರೇಶಕುಮಾರ ಅವರು ಆರ್ಪಿಎಲ್ ತರಬೇತಿ ಕುರಿತು ಮಾಹಿತಿ ನೀಡಿದರು.

ತಹಶೀಲ್ದಾರ್ ಮಹೇಶ ಪಾಟೀಲ, ಮುಖಂಡರಾದ ಧೊಂಡಿಬಾ ನರೋಟೆ, ಶಿವರಾಜ ಅಲ್ಮಾಜೆ, ರಾಮ ನರೋಟೆ, ಶಿವಾಜಿರಾವ ಕಾಳೆ, ಶ್ರೀಮಂತ ಪಾಟೀಲ, ಕೇರಬಾ ಪವಾರ, ಶ್ರೀನಿವಾಸ ಖೂಬಾ, ಬಸವರಾಜ ಹಳ್ಳೆ, ಸುನೀಲಕುಮಾರ ವಾಘಮಾರೆ ಹಾಗೂ ಔರಾದ್ ಕಮಲನಗರ ತಾಲ್ಲೂಕಿನ ಕಾರ್ಮಿಕರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ 434 ಆರ್ಪಿಎಲ್ ಪ್ರಮಾಣ ಪತ್ರ ಹಾಗೂ 400 ಕಾರ್ಮಿಕರಿಗೆ ಸುರಕ್ಷತಾ ಕಿಟ್ ವಿತರಿಸಲಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260328-33-1927145713

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.