ಔರಾದ್: ಇಲ್ಲಿಯ ಪಟ್ಟಣ ಪಂಚಾಯಿತಿ ವಾಟರ್ಮ್ಯಾನ್ ಹಾಗೂ ಪೌರ ಕಾರ್ಮಿಕರಿಗೆ ಕಳೆದ 18 ತಿಂಗಳಿಂದ ಗೌರವಧನ ಪಾವತಿಯಾಗದೇ ಇರುವ ವಿಚಾರ ಸೋಮವಾರ ಇಲ್ಲಿ ನಡೆದ ಸಭೆಯಲ್ಲಿ ಭಾರೀ ಚರ್ಚೆ ಹಾಗೂ ಆಕ್ರೋಶಕ್ಕೆ ಕಾರಣವಾಯಿತು.

‘ಪೌರ ಕಾರ್ಮಿಕರಿಗೆ ಗೌರವಧನವೇ ನೀಡದಿದ್ದರೆ ಅವರಿಂದ ಕೆಲಸ ಪಡೆಯುವುದು ಹೇಗೆ ಸಾಧ್ಯ, ಕಸ ವಿಲೇವಾರಿ ವಾಹನಗಳಿಗೆ ಡೀಸೆಲ್ ಹಾಕಲು ಹಣವಿಲ್ಲ ಎಂದರೆ ನಗರ ಸ್ವಚ್ಛತೆ ನಿರ್ವಹಣೆ ಹೇಗೆ ಆಗುತ್ತದೆ’ ಎಂದು ಶಾಸಕ ಪ್ರಭು ಚವಾಣ್ ಗರಂ ಆಗಿ ಅಧಿಕಾರಿಗಳ ವಿರುದ್ಧ ಕಿಡಿ ಕಾರಿದರು.

ಪಟ್ಟಣ ಪಂಚಾಯತಿಗೆ ಬರುತ್ತಿರುವ ತೆರಿಗೆ ಹಣ ಹಾಗೂ ಕಟ್ಟಡಗಳಿಂದ ಸಂಗ್ರಹವಾಗುವ ಆದಾಯ ಎಲ್ಲಿಗೆ ಹೋಗುತ್ತಿದೆ ಎಂಬುದರ ಬಗ್ಗೆ ಅನುಮಾನ ವ್ಯಕ್ತಪಡಿಸಿ ಈ ಬಗ್ಗೆ ತಮಗೆ ಸಮಗ್ರ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಮೊಬೈಲ್ನಲ್ಲಿ ಜಿಲ್ಲಾಧಿಕಾರಿ ಶಿಲ್ಪಾ ಶರ್ಮ ಅವರನ್ನು ಸಂಪರ್ಕಿಸಿ ಔರಾದ್ ಪಟ್ಟಣ ಪಂಚಾಯಿತಿಯಲ್ಲಿ ಅವ್ಯವಸ್ಥೆ ಎದುರಾಗಿದೆ. ಜನರಿಗೆ ಸರ್ಮಪಕ ಕುಡಿಯಲು ನೀರು ಸಿಗುತ್ತಿಲ್ಲ. ಅನುದಾನ ದುರ್ಬಳಕೆ ಆಗುತ್ತಿದೆ. ತಾವು ಖುದ್ದಾಗಿ ಭೇಟಿ ನೀಡಿ ಆಗಿರುವ ಅವ್ಯವಸ್ಥೆ ಸರಿಪಡಿಸುವಂತೆ ಒತ್ತಾಯಿಸಿದರು.

‘₹84 ಕೋಟಿ ಮೊತ್ತದ ಕಾರಂಜಾ ಜಲಾಶಯದಿಂದ ನೀರು ತರುವ ಯೋಜನೆ ಮಂಜೂರಾಗಿ ಮೂರು ವರ್ಷ ಕಳೆದರೂ ಕಾಮಗಾರಿ ಪೂರ್ಣ ಆಗಿಲ್ಲ. ಹಾಲಹಳ್ಳಿ ಬ್ಯಾರೇಜ್ನಲ್ಲೂ ನೀರಿಲ್ಲ. ತೇಗಂಪೂರ ಕೆರೆಯಲ್ಲಿ ನೀರಿದ್ದರೂ ಅದರ ನಿರ್ವಹಣೆ ಇಲ್ಲ. ಈ ಎಲ್ಲ ಕೆಲಸ ಯಾರು ಮಾಡಬೇಕು’ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

‘ನಿಮಗೆ ಇಲ್ಲಿ ಕೆಲಸ ಮಾಡಲು ಮನಸ್ಸು ಇದ್ದರೆ ಚೆನ್ನಾಗಿ ಮಾಡಿ ಇಲ್ಲವೇ ಇಲ್ಲಿಂದ ಬಿಟ್ಟು ಹೋಗಿ’ ಎಂದು ಪಟ್ಟಣ ಪಂಚಾಯಿತಿ ನೌಕರರರಿಗೆ ತಾಕೀತು ಮಾಡಿದರು.

ತಹಶೀಲ್ದಾರ್ ಮಹೇಶ ಪಾಟೀಲ, ತಾಪಂ ಇಒ ಕಿರಣ ಪಾಟೀಲ, ಮುಖ್ಯಾಧಿಕಾರಿ ರವಿ ಸುಕುಮಾರ, ತಾಲ್ಲೂಕು ಆರೋಗ್ಯಾಧಿಕಾರಿ ಅನೀಲಕುಮಾರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260428-33-390069943

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.