ಔರಾದ್: ತಾಲ್ಲೂಕಿನ ಎಕಲಾರ ಸರ್ಕಾರಿ ಪ್ರೌಢ ಶಾಲೆಯ ಎಸ್ಎಸ್ಎಸ್ಸಿ ಟಾಪರ್ ವಿದ್ಯಾರ್ಥಿಗಳಿಗೆ ಶಿಕ್ಷಕರು ವಿಮಾನಯಾನ ಪ್ರವಾಸ ಮಾಡಿಸಿದ್ದಾರೆ.

2025–26ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ 93.92 ಅಂಕ ಪಡೆದ ಅಂಕಿತಾ ಸಿದ್ದಪ್ಪ, ಶೇ 93.76 ಅಂಕ ಪಡೆದ ಭಾಗ್ಯವಂತಿ ಅಶೋಕ ಹಾಗೂ ಇಂಗ್ಲಿಷ್ ವಿಷಯದಲ್ಲಿ 97 ಅಂಕ ಪಡೆದ ಓಂಕಾರ ಕಲ್ಲಪ್ಪ ಅವರು ಇಬ್ಬರು ಶಿಕ್ಷಕರ ಜತೆ ಭಾನುವಾರ ಹೈದರಬಾದ್ನಿಂದ ತಿರುಪತಿ ಅವರೆಗೆ ಪ್ರವಾಸ ಕೈಗೊಂಡಿದ್ದಾರೆ.

ಇಂಗ್ಲಿಷ್ ಶಿಕ್ಷಕ ಸತೀಶ್ ಮಜಗೆ ಅವರು ಎಸ್ಎಸ್ಎಸ್ಸಿ ಪರೀಕ್ಷೆಗೂ ಮುನ್ನ ಶಾಲೆಗೆ ಟಾಪರ್ ಬಂದ ಹಾಗೂ ಇಂಗ್ಲಿಷ್ ವಿಷಯದಲ್ಲಿ ಶೇ 95ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ವಿಮಾನಯಾನ ಪ್ರವಾಸ ಮಾಡಿಸುವ ಘೋಷಣೆ ಮಾಡಿದರು.

ಅದರಂತೆ ಮೂವರು ವಿದ್ಯಾರ್ಥಿಗಳನ್ನು ಹೈದರಾಬಾದ್ನಿಂದ ತಿರುಪತಿಗೆ ವಿಮಾನದಲ್ಲಿ ಕರೆದುಕೊಂಡು ಹೋಗಿದ್ದೇವೆ. ಈ ಪ್ರಯಾಣದ ಖರ್ಚು ವೆಚ್ಚವನ್ನು ಶಿಕ್ಷಕ ಸತೀಶ್ ಮಜಗೆ ಅವರೇ ನೋಡಿಕೊಂಡಿದ್ದಾರೆ ಎಂದು ಮಕ್ಕಳ ಜತೆ ಪ್ರವಾಸದಲ್ಲಿರುವ ಶಿಕ್ಷಕ ಸೂರ್ಯಕಾಂತ ನಾಗೂರೆ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಪ್ರತಿಭಾವಂತ ವಿದ್ಯಾರ್ಥಿಗಳ ಸಾಧನೆಯನ್ನು ಗೌರವಿಸುವ ನಿಟ್ಟಿನಲ್ಲಿ ಕೈಗೊಳ್ಳಲಾದ ಈ ವಿಮಾನಯಾನ ಪ್ರವಾಸ ಇತರ ವಿದ್ಯಾರ್ಥಿಗಳಿಗೂ ಪ್ರೇರಣೆಯಾಗಲಿದೆ ಎಂದು ಶಿಕ್ಷಕ ಶಿಕ್ಷಕ ಸತೀಶ್ ಮಜಗೆ ಸಂತಸ ವ್ಯಕ್ತಪಡಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260603-33-2046953725

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.