ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದಾಂತ ಆನಂದವಾಡೆಗೆ ಪ್ರಶಸ್ತಿ

Last Updated 27 ನವೆಂಬರ್ 2022, 16:06 IST
ಅಕ್ಷರ ಗಾತ್ರ

ಭಾಲ್ಕಿ: ತಾಲ್ಲೂಕಿನ ಕುಂಟೆ ಸಿರ್ಸಿ ಗ್ರಾಮದ ವೇದಾಂತ ಅಲ್ಲಮಪ್ರಭು ಆನಂದವಾಡೆ ಇದ್ದ ಐದು ಜನರ ತಂಡ ಯಂಗ್ ಅರ್ಥ್ ಚಾಂಪಿಯನ್ಸ್ ಪ್ರಶಸ್ತಿ ಪಡೆದಿದೆ.

ಈ ತಂಡ ಪ್ಯಾರಿಸ್‌ನಲ್ಲಿರುವ ಯುನೆಸ್ಕೊದ ಪ್ರಧಾನ ಕಚೇರಿಯಲ್ಲಿ ಪ್ರಶಸ್ತಿಯ ಜತೆಗೆ ನಗದನ್ನು ಬಹುಮಾನವಾಗಿ ಪಡೆದಿದೆ.

ಅಸ್ಸಾಂನಲ್ಲಿ ಹವಾಮಾನ ಬದಲಾವಣೆಯ ಪ್ರವಾಹದಿಂದಾಗಿ ಮನೆಗಳು ನಾಶವಾಗಿದ್ದವು. ಹಾಗಾಗಿ, ಈ ವಿದ್ಯಾರ್ಥಿಗಳು ಪ್ರವಾಹದಿಂದ ನಾಶವಾಗದ ಮತ್ತು ಪ್ರವಾಹಕ್ಕೆ ಒಳಗಾಗದ ಮನೆಗಳನ್ನು ವಿನ್ಯಾಸಗೊಳಿಸುವ ಮೂಲಕ ಅಂತರರಾಷ್ಟ್ರೀಯ ಪ್ರಶಸ್ತಿ ಗೆದ್ದಿದ್ದಾರೆ.

ಈ ಸ್ಪರ್ಧೆಯಲ್ಲಿ ವಿಶ್ವದ 500ಕ್ಕೂ ಹೆಚ್ಚು ಕಾಲೇಜು ಹಾಗೂ ವಿಶ್ವದ ಟಾಪ್ 15ರಲ್ಲಿ ಗುರುತಿಸಿಕೊಂಡಿದ್ದ ವಿಶ್ವವಿದ್ಯಾಲಯಗಳ ಮಕ್ಕಳು ಭಾಗವಹಿಸಿದ್ದರು. 2021ರ ಮಾರ್ಚ್ ತಿಂಗಳಲ್ಲಿ ಈಗೀಸ್ (EGiS) ಫೌಂಡೇಶನ್ ವತಿಯಿಂದ ಈ ಸ್ಪರ್ಧೆ ಆಯೋಜನೆ ಮಾಡಲಾಗಿತ್ತು.

ಕೋವಿಡ್ ಹಿನ್ನೆಲೆಯಲ್ಲಿ ಆನ್‌ಲೈನ್ ಮೂಲಕ ಸ್ಪರ್ಧೆ ನಡೆಸಲಾಗಿತ್ತು.

ಸದ್ಯ ಹೈದರಾಬಾದ್‌ನಲ್ಲಿ ವಾಸಿಸುತ್ತಿರುವ ವೇದಾಂತ ಅವರ ತಂದೆ ಅಲ್ಲಮಪ್ರಭು ಮತ್ತು ತಾಯಿ ವಿಜಯಲಕ್ಷ್ಮಿ ಆನಂದವಾಡೆ ವೃತ್ತಿಯಿಂದ ವೈದ್ಯರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT