ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮನೆ ಮನೆಗೆ ತಿರಂಗಾ ಯಶಸ್ವಿಗೊಳಿಸಿ’

Last Updated 5 ಆಗಸ್ಟ್ 2022, 2:53 IST
ಅಕ್ಷರ ಗಾತ್ರ

ಚಿಟಗುಪ್ಪ: ತಾಲ್ಲೂಕು ಆಡಳಿತ ವತಿಯಿಂದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಮನೆ ಮನೆಗೆ ರಾಷ್ಟ್ರ ಧ್ವಜ ಅಭಿಯನಾದ ಜಾಗೃತಿಗಾಗಿ ಗುರುವಾರ ಸೈಕಲ್‌ ಜಾಥಾ ನಡೆಸಲಾಯಿತು.

ತಹಶೀಲ ಕಚೇರಿಂದ ಆರಂಭವಾದ ಜಾಥಾ ಬಸವರಾಜ್‌ ವೃತ್ತ, ಗಾಂಧಿ ವೃತ್ತ, ನೆಹರೂ ವೃತ್ತ, ಸುಭಾಷ ಚಂದ್ರ ಭೋಸ್‌ ವೃತ್ತ, ಶಿವಾಜಿ ವೃತ್ತದಿಂದ ಪುರಸಭೆ ಕಚೇರಿ ತಲುಪಿತು.

ಸೈಕಲ್‌ ಜಾಥಾ ಚಾಲನೆ ನೀಡದ ಮಾತನಾಡಿದ ತಹಶೀಲ್ದಾರ್ ರವೀಂದ್ರ ದಾಮಾ, ‘ದೇಶದ ಅಖಂಡತೆ ಹಾಗೂ ಏಕತೆ ಬಲಿಷ್ಠ ಗೊಳಿಸಲು ಪ್ರತಿ ಮನೆಯ ಮೇಲೆ ರಾಷ್ಟ್ರ ಧ್ವಜ ಘೋಷ ವಾಕ್ಯ ಅರ್ಥಪೂರ್ಣವಾಗಿದೆ’ ಎಂದರು

ವೃತ್ತ ನಿರೀಕ್ಷಕ ಅಮೂಲ ಕಾಳೆ ಮಾತನಾಡಿ, ‘ಎಲ್ಲರೂ ತಮ್ಮ ಮನೆಗಳ ಮೇಲೆ ರಾಷ್ಟ್ರ ಧ್ವಜ ಹಾರಿಸಿ ಅಭಿಯಾನ ಯಶಸ್ವಿಗೊಳಿಸಬೇಕು’ ಎಂದು ಕೋರಿದರು.

ತಾ.ಪಂ ಇಒ ವೆಂಕಟರಾವ್‌ ಸಿಂಧೆ, ಪುರಸಭೆ ಮುಖ್ಯಾಧಿಕಾರಿ ಹುಸಾಮೋದ್ದೀನ್‌, ಪಿಎಸ್‌ ಐ ಮಹೇಂದ್ರ ಕುಮಾರ್‌, ಕಂದಾಯ ನಿರೀಕ್ಷಕ ಮಹಾರುದ್ರಪ್ಪ, ರಾಜೇಂದ್ರ ಹುಗ್ಗಿ, ಸುಶೀಲ್‌, ಅಬ್ದುಲ್‌, ಸರೋಜನಿ, ಬಸವರಾಜ್‌ ಬಿರಾದಾರ್‌, ನಥಾನಿಯಲ್‌, ವೈಶಾಲಿ, ಇಲಾಯಿ, ವಿಜಯಕುಮಾರ್‌, ಶಾಮರಾವ್‌, ವಿದ್ಯಾರ್ಥಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT