ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶರಣರ ಸತ್ಸಂಗದಿಂದ ಸನ್ಮಾರ್ಗ :ಶಾಸಕ ಬಿ.ನಾರಾಯಣರಾವ್

Last Updated 22 ಜನವರಿ 2020, 12:03 IST
ಅಕ್ಷರ ಗಾತ್ರ

ಬಸವಕಲ್ಯಾಣ: ‘ಸಂತರ, ಶರಣರ ಸತ್ಸಂಗದಿಂದ ಸನ್ಮಾರ್ಗ ದೊರಕುತ್ತದೆ’ ಎಂದು ಶಾಸಕ ಬಿ.ನಾರಾಯಣರಾವ್ ಹೇಳಿದರು.

ತಾಲ್ಲೂಕಿನ ಪ್ರತಾಪುರದಲ್ಲಿ ಸೋಮವಾರ ನಡೆದ ವೀರಭದ್ರೇಶ್ವರ ಜಾತ್ರೆಯ ಧರ್ಮಸಭೆಯಲ್ಲಿ ಅವರು ಮಾತನಾಡಿದರು.

‘ಗ್ರಾಮದ ರಸ್ತೆ ನಿರ್ಮಿಸಲಾಗುವುದು. ಕಲ್ಯಾಣ ಮಂಟಪ ಕಟ್ಟುವುದಕ್ಕಾಗಿ ಅನುದಾನ ಒದಗಿಸಲಾಗುವುದು’ ಎಂದು ಭರವಸೆ ನೀಡಿದರು.

ಹಿರೇನಾಗಾಂವ ಜಯಶಾಂತಲಿಂಗ ಸ್ವಾಮೀಜಿ ಮಾತನಾಡಿ, ‘ಗುರು ಹಿರಿಯರನ್ನು ಗೌರವಿಸಬೇಕು’ ಎಂದರು.

ಶರಣು ಸಲಗರ ಮಾತನಾಡಿ,‘ಯುವ ಜನತೆ ರಾಷ್ಟ್ರಪುರುಷರ ಸಂದೇಶ ಪಾಲಿಸಬೇಕು’ ಎಂದು ಹೇಳಿದರು.

ಕೆಂಪೇನ ಮಠದ ಚನ್ನಮಲ್ಲ ಸ್ವಾಮೀಜಿ ನೇತೃತ್ವ ವಹಿಸಿದ್ದರು. ನೀಲೇಶ ಖೂಬಾ, ದಾವೂದ್ ಮಂಠಾಳ, ವಿಕಾಸ ಪಾಟೀಲ, ಬಾಬುರಾವ ಹಿಂಶೆ, ರತಿಕಾಂತ ಮುರೂಢ, ಸುಭಾಷ ರಗಟೆ, ಸಂತೋಷ ಬಿರಾದಾರ, ದಯಾನಂದ ಬೇಲೂರೆ, ಶಂಕರ ಮದಕಟ್ಟಿ, ಸುಭಾಷ ಕುದ್ರೆ, ಪ್ರದೀಪ ಗಡವಂತೆ, ನಾಗೇಶ ಇಲ್ಲಾಮಲ್ಲೆ ಪಾಲ್ಗೊಂಡಿದ್ದರು. ನವಲಿಂಗಕುಮಾರ ಪಾಟೀಲ, ಗುಂಡಣ್ಣ ಡಿಗ್ಗಿ ಅವರಿಂದ ಹಾಸ್ಯ ಕಾರ್ಯಕ್ರಮ ನಡೆಯಿತು. ಅಂಬರೀಶ ಭೀಮಾಣೆ ನಿರೂಪಿಸಿದರು. ಲೋಕೇಶ ಮೋಳಕೇರೆ ವಂದಿಸಿದರು. ನಂತರ ಪಲ್ಲಕ್ಕಿ ಮೆರವಣಗೆ ಆಯೋಜಿಸಿ ಅಗ್ಗಿ ತುಳಿಯಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT