ಭಾನುವಾರ, ನವೆಂಬರ್ 28, 2021
19 °C
ಸಾಹಸ ಪ್ರದರ್ಶನ ನೀಡಿದ ಸಿಖ್‌ರ ಅಶ್ವದಳ

ಬೀದರ್‌ ಭೇಟಿ ನೀಡಿದ ಬಾಬಾ ಗಜೇಂದ್ರಸಿಂಗ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ಪಂಜಾಬದ ಅಮೃತಸರದಲ್ಲಿರುವ ಬಾಬಾ ಬಕಾಲಾ ಸಾಹಿಬ್‌ ಗುರುದ್ವಾರದ ಬಾಬಾ ಬಕಾಲಾಸಾಹೇಬ ಮಿಷನ್‌ ಸಂಹಿತಾದ 15ನೇ ಮುಖ್ಯಸ್ಥ ಬಾಬಾ ಗಜೇಂದ್ರಸಿಂಗ್‌ ಭಾನುವಾರ ಇಲ್ಲಿಯ ಗುರುದ್ವಾರಕ್ಕೆ ಭೇಟಿ ನೀಡಿದರು.

ಅಮೃತಸರ್‌ದಿಂದ ಮಹಾರಾಷ್ಟ್ರದ ನಾಂದೇಡ್‌ದ ಗುರುದ್ವಾರಕ್ಕೆ ಬಂದಿದ್ದ ಬಾಬಾ ಗಜೇಂದ್ರಸಿಂಗ್‌ ಅವರು ಭಕ್ತರ ಮನವಿ ಮೇರೆಗೆ ಅಶ್ವದಳದೊಂದಿಗೆ ಇಲ್ಲಿಗೆ ಬಂದಿದ್ದರು. ಭಕ್ತರು ಅವರಿಂದ ಆಶೀರ್ವಾದ ಪಡೆದರು.

ಸಿಖ್‌ರ ಅಶ್ವ ದಳ ಗುರುದ್ವಾರ ಸಮೀಪದ ಮೈದಾನದಲ್ಲಿ ಹಲವು ಸಾಹಸ ಪ್ರದರ್ಶನ ನೀಡಿತು. ಕೆಲ ಯುವಕರು ಜೋಡು ಕುದುರೆ ಮೇಲೆ ನಿಂತು ಸವಾರಿ ಮಾಡಿ ಮೈನವಿರೇಳುವಂತೆ ಮಾಡಿದರೆ, ಇನ್ನು ಕೆಲ ಯುವಕರು ಆರ್ಭಟದೊಂದಿಗೆ ಕತ್ತಿ ವರಸೆ ಪ್ರದರ್ಶನ ನೀಡಿದರು.

ಗುರುದ್ವಾರ ಪ್ರಬಂಧಕ ಕಮಿಟಿ ಪದಾಧಿಕಾರಿಗಳು ಪ್ರದರ್ಶನಕ್ಕೆ ಸಕಲ ವ್ಯವಸ್ಥೆ ಮಾಡಿದ್ದರು. ಸಿಖ್‌ರು ಬಾಬಾ ಗಜೇಂದ್ರಸಿಂಗ್‌ ಅವರ ಆಶೀರ್ವಾದ ಪಡೆದುಕೊಂಡರು. ಆಶ್ವದಳ ಸಂಜೆ ಮತ್ತೆ ನಾಂದೇಡ್‌ಗೆ ಪ್ರಯಾಣ ಬೆಳೆಸಿತು.

ಸಿಖ್‌ ಸಮುದಾಯದ ಪ್ರಮುಖರಾದ ಬಲಬೀರ್‌ ಸಿಂಗ್, ದರ್ಬಾರಾ ಸಿಂಗ್, ಮನಪ್ರೀತ್‌ ಸಿಂಗ್‌ ಬಂಟಿ, ಜಸ್ಪ್ರೀತ್ ಸಿಂಗ್ ಮೊಂಟಿ ಮೊದಲಾದವರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು