15 ದಿನಗಳಲ್ಲಿ ‘ಬಡವರ ಬಂಧು’ ಯೋಜನೆಗೆ ಚಾಲನೆ: ಸಚಿವ ಬಂಡೆಪ್ಪ ಕಾಶೆಂಪುರ ಹೇಳಿಕೆ

7

15 ದಿನಗಳಲ್ಲಿ ‘ಬಡವರ ಬಂಧು’ ಯೋಜನೆಗೆ ಚಾಲನೆ: ಸಚಿವ ಬಂಡೆಪ್ಪ ಕಾಶೆಂಪುರ ಹೇಳಿಕೆ

Published:
Updated:
Deccan Herald

ಬೀದರ್: ‘ಸಣ್ಣ ಹಾಗೂ ಬೀದಿಬದಿ ವ್ಯಾಪಾರಿಗಳಿಗೆ ಆರ್ಥಿಕವಾಗಿ ನೆರವಾಗಲು ರೂಪಿಸಿರುವ ‘ಬಡವರ ಬಂಧು’ ಯೋಜನೆಗೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಇನ್ನು 15 ದಿನಗಳಲ್ಲಿ ಚಾಲನೆ ನೀಡಲಿದ್ದಾರೆ’ ಎಂದು ಸಹಕಾರ ಸಚಿವ ಬಂಡೆಪ್ಪ ಕಾಶೆಂಪುರ ತಿಳಿಸಿದರು.

‘ಯೋಜನೆಯಡಿ ಬೆಂಗಳೂರು ಮಹಾನಗರದಲ್ಲಿ 5 ಸಾವಿರ, ರಾಜ್ಯದ ಇತರೆ ಮಹಾನಗರಗಳಲ್ಲಿ ತಲಾ 3 ಸಾವಿರ ಹಾಗೂ ಜಿಲ್ಲಾ ಮಟ್ಟದಲ್ಲಿ ತಲಾ 1 ಸಾವಿರ ಫಲಾನುಭವಿಗಳು ಸೇರಿ ಒಟ್ಟು 50 ಸಾವಿರ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು. ವ್ಯಾಪಾರಿಗಳಿಗೆ ಕನಿಷ್ಠ ₹ 2 ರಿಂದ 10 ಸಾವಿರ ವರೆಗೆ ಬಡ್ಡಿ ರಹಿತ ಹಾಗೂ ಖಾತರಿ ರಹಿತ ಸಾಲ ಸೌಲಭ್ಯ ಕಲ್ಪಿಸಲಾಗುವುದು’ ಎಂದು ನಗರದಲ್ಲಿ ಗುರುವಾರ ಮಾಧ್ಯಮಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಸಾಲದ ಬಡ್ಡಿಯನ್ನು ಬ್ಯಾಂಕ್‌ಗಳಿಗೆ ರಾಜ್ಯ ಸರ್ಕಾರ ಪಾವತಿಸಲಿದೆ. ₹ 10 ಸಾವಿರ ಸಾಲ ಪಡೆದ ವ್ಯಕ್ತಿ ನಿತ್ಯ ₹ 100 ಪಾವತಿಸಿದರೂ ನೂರು ದಿನಗಳಲ್ಲಿ ಸಾಲ ಮರು ಪಾವತಿಯಾಗಲಿದೆ. ಇದರಿಂದ ವ್ಯಾಪಾರಿಗಳು ಮೀಟರ್‌ ಬಡ್ಡಿಯಿಂದ ದೂರವಿರಲು ಸಾಧ್ಯವಾಗಲಿದೆ’ ಎಂದರು.

‘ಕೆಲವು ಕಡೆ ನಗರಸಭೆ ಸಿಬ್ಬಂದಿ ಸಮೀಕ್ಷೆ ನಡೆಸಿ ಬೀದಿಬದಿ ವ್ಯಾಪಾರಿಗಳಿಗೆ ಗುರುತಿನಚೀಟಿ ಕೊಟ್ಟಿದ್ದಾರೆ. ಬೀದಿ ವ್ಯಾಪಾರಿಗಳ ಸಂಘದ ಮೂಲಕವೂ ಫಲಾನುಭವಿಗಳನ್ನು ಗುರುತಿಸಲು ಸುಲಭವಾಗಲಿದೆ. ಮಾನದಂಡ ಅನುಸರಿಸಿ ಸಾಲ ಒದಗಿಸಲಾಗುವುದು’ ಎಂದು ಹೇಳಿದರು.

‘ಬಡವರ ಬಂಧು’ ಯೋಜನೆ ಅನ್ವಯ ವ್ಯಾಪಾರಿಗಳು ಇರುವ ಸ್ಥಳಕ್ಕೇ ಹೋಗಿ ಸಾಲ ವಿತರಿಸಲಾಗುವುದು. ಈಗಾಗಲೇ ಅಪೆಕ್ಸ್‌ ಬ್ಯಾಂಕ್, ಡಿಸಿಸಿ ಬ್ಯಾಂಕ್‌ ಹಾಗೂ ಸಿಟಿ ಬ್ಯಾಂಕ್‌ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದೇವೆ. ಇದಕ್ಕೆ ಸಂಬಂಧಿಸಿದಂತೆ ಆ್ಯಪ್‌ ಸಹ ಅಭಿವೃದ್ಧಿಪಡಿಸಲಾಗುತ್ತಿದೆ’ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !