ಭಾಲ್ಕಿ: ‘ರಾಜ್ಯದಲ್ಲಿ ವೀರಶೈವ ಲಿಂಗಾಯತ ಮಹಾಸಭೆ ಸಂಘಟಿಸುವಲ್ಲಿ ಖಂಡ್ರೆ ಪರಿವಾರದ ಕೊಡುಗೆ ಅನನ್ಯವಾಗಿದೆ’ ಎಂದು ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ಹೇಳಿದರು.

ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಅಭಿನಂದನಾ ಸಮಾರಂಭದ ನಿಮಿತ್ತ ಮಂಗಳವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಮಹಾಸಭೆ ಸ್ಥಾಪನೆಗೊಂಡು ಸುಮಾರು ವರ್ಷಗಳು ಕಳೆದ ನಂತರ ಭೀಮಣ್ಣ ಖಂಡ್ರೆ ಅವರು ಮಹಾಸಭೆಗೆ ಒಂದು ಅಸ್ತಿತ್ವ ತಂದುಕೊಡುವಲ್ಲಿ ಹಾಗೂ ಮಹಾಸಭೆಯ ಸದಸ್ಯರ ಸಂಖ್ಯೆ ಹೆಚ್ಚಿಸುವಲ್ಲಿ ಅವಿರತವಾಗಿ ಶ್ರಮಪಟ್ಟ ಕಾರ್ಯ ಅವಿಸ್ಮರಣೆಯವಾಗಿದೆ. ಅದೇ ನಿಟ್ಟಿನಲ್ಲಿ ಸಚಿವ ಈಶ್ವರ ಖಂಡ್ರೆ ಅವರು ಕೂಡ ಅವರ ತಂದೆಯವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುತ್ತಿರುವುದು ನಮ್ಮೆಲ್ಲರಿಗೆ ಸಂತಸದ ವಿಷಯವಾಗಿದೆ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಅಭಿನಂದನಾ ಸಮಾರಂಭದ ಸ್ವಾಗತ ಸಮಿತಿ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ಮತ್ತು ಕಾರ್ಯಾಧ್ಯಕ್ಷ ಬಾಬು ವಾಲಿ ಮಾತನಾಡಿ, ‘ಅಂದು ಸಂಜೆ 4 ಗಂಟೆಗೆ ಬೀದರ್ ನಗರದ ಬಸವೇಶ್ವರ ವೃತ್ತದಿಂದ ಮೆರವಣಿಗೆ ಆರಂಭವಾಗಲಿದೆ. ಮೆರವಣಿಗೆಯಲ್ಲಿ ನಾನಾ ಕಲಾತಂಡಗಳು ಭಾಗವಹಿಸಲಿವೆ. ನಂತರದಲ್ಲಿ ಗುಂಪಾ ರಸ್ತೆಯಲ್ಲಿರುವ ಕರ್ನಾಟಕ ಫಾರ್ಮಸಿ ಕಾಲೇಜು ಆವರಣದಲ್ಲಿ ಅಭಿನಂದನಾ ಸಮಾರಂಭ ನಡೆಯಲಿದ್ದು, ಜಿಲ್ಲೆಯ ಮಠಾಧೀಶರು, ಗಣ್ಯರು ಪಾಲ್ಗೊಳ್ಳಲಿದ್ದಾರೆ. ಹೀಗಾಗಿ ಸಮಾರಂಭದಲ್ಲಿ ತಾಲ್ಲೂಕಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಸವ ಭಕ್ತರು, ಅಭಿಮಾನಿಗಳು, ಖಂಡ್ರೆ ಹಿತೈಷಿಗಳು ಭಾಗವಹಿಸಬೇಕು’ ಎಂದು ಮನವಿ ಮಾಡಿದರು.

ನೇತೃತ್ವ ವಹಿಸಿದ್ದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಮಾತನಾಡಿದರು.

ಅಭಿನಂದನಾ ಸಮಿತಿ ಉಪಾಧ್ಯಕ್ಷರಾದ ಆನಂದ ದೇವಪ್ಪ, ಮಡಿವಾಳಪ್ಪ ಮಂಗಲಗಿ, ಕೋಶಾಧ್ಯಕ್ಷ ಜೈರಾಜ ಖಂಡ್ರೆ, ಸಂತೋಷ ಪಾಟೀಲ, ದೀಪಕ ವಾಲಿ, ಮಲ್ಲಿಕಾರ್ಜುನ ಹಲ್ಮಂಡಗೆ, ಸೋಮನಾಥಪ್ಪ ಅಷ್ಟೂರೆ, ಸುಭಾಷ ಕಾರಾಮುಂಗೆ, ಅಶೋಕ ಬಾವುಗೆ, ಜೈರಾಜ ಪಾತ್ರೆ, ವಿಲಾಸ ಬಕ್ಕಾ, ನಂದು ಪಾಟೀಲ, ಯೋಗೇಶ ಸಿರಗಿರೆ, ಧನರಾಜ ಹಂಗರಗೆ, ಬಸವರಾಜ ಭತಮುರ್ಗೆ, ಸಂಗಮೇಶ ವಾಲೆ, ಕಪಿಲ ಕಲ್ಯಾಣೆ, ಶಿವಕುಮಾರ ಕಲ್ಯಾಣಿ, ಮಹಾದೇವ ಸ್ವಾಮಿ ಇದ್ದರು. ದೀಪಕ ಠಮಕೆ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260318-33-1473364720

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.