ಬೀದರ್: ‘ಬಸವಧರ್ಮ ಜೀವಪರ, ಪ್ರಗತಿಪರವಾದ ಧರ್ಮ’ ಎಂದು ಕಲಬುರಗಿಯ ಪಿಡಿಎ ಎಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕ ಸಂಜಯ್ ಮಾಕಾಲ್ ತಿಳಿಸಿದರು.

ನಗರದ ಬಸವಗಿರಿಯ ಲಿಂಗಾಯತ ಮಹಾ ಮಠದಲ್ಲಿ ಬುಧವಾರ ಸಂಜೆ ನಡೆದ ಮಾಸಿಕ ಶರಣ ಸಂಗಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಕಲ ಜೀವಿಗಳಿಗೆ ಲೇಸನ್ನೇ ಬಯಸುವ ಬಸವ ಧರ್ಮ ಪ್ರಗತಿಪರ ಧರ್ಮವಾಗಿದೆ. ಪ್ರಪಂಚದ ಎಲ್ಲ ಧರ್ಮಗಳು ಜೀವ, ಜಗತ್ತು, ಈಶ್ವರ ಈ ಮೂರರ ಸಂಬಂಧ ತಿಳಿಸುತ್ತವೆ. ದೇವರು ಬಹುತೇಕ ಧರ್ಮಗಳ ಕೇಂದ್ರ ಬಿಂದು. ಆದರೆ, ಬಸವ ಧರ್ಮದಲ್ಲಿ ಜೀವಿಯೇ ಕೇಂದ್ರಬಿಂದು. ಬಸವಣ್ಣನವರು ಪ್ರತಿಪಾದಿಸಿದ್ದು ಜೀವಪರ ಧರ್ಮ ಎಂದು ನುಡಿದರು.

ಮನುಕುಲ ಸೌಖ್ಯವಾಗಿರಲು ಎಲ್ಲರೂ ಕಾಯಕ ಮಾಡಲೇಬೇಕು. ಇದರಲ್ಲಿ ಯಾರಿಗೂ ವಿನಾಯಿತಿ ಇಲ್ಲ. ಪ್ರತಿಯೊಬ್ಬರೂ ದುಡಿದು ಉಂಡರೆ ದೇಶದ ಪ್ರಗತಿ ಸಾಧ್ಯ ಎಂದು ಹೇಳಿದರು.

1945ರ ಮಹಾ ಯುದ್ಧದಲ್ಲಿ ಜಪಾನ್ ಅಣುಬಾಂಬ್ ದಾಳಿಗೆ ತುತ್ತಾಗಿತ್ತು. ಆ ದೇಶದ ಜನರು ಕಾಯಕದಿಂದ ಕೆಲವೇ ವರ್ಷಗಳಲ್ಲಿ ತಮ್ಮ ದೇಶವನ್ನು ಮತ್ತೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಎದ್ದು ನಿಲ್ಲಿಸಿದರು. ಅಂತೆಯೇ ಬಸವಾದಿ ಪ್ರಮಥರು ಕಾಯಕದಲ್ಲೇ ದೇವರನ್ನು ಕಂಡರು. ಕಾಯಕವೇ ಕೈಲಾಸವೆಂದರು ಎಂದು ತಿಳಿಸಿದರು.

ಸಾನ್ನಿಧ್ಯ ವಹಿಸಿದ್ದ ಪ್ರಭುದೇವ ಸ್ವಾಮೀಜಿ ಮಾತನಾಡಿ, ಹಸಿದವರಿಗೆ ಅನ್ನವನಿಕ್ಕುವುದೇ ನಿಜವಾದ ಧರ್ಮ. ಹಸಿದವರ ಮೂಲಕ ದೇವರು ಉಣ್ಣುತ್ತಾನೆ. ಜಗತ್ತಿನಲ್ಲಿ ಯಾರೂ ಹಸಿವಿನಿಂದ ಬಳಲಬಾರದೆಂಬುದು ಬಸವಾದಿ ಶರಣರ ಆಶಯವಾಗಿತ್ತು ಎಂದರು.

ಶರಣರು ಜೀವಕಾರುಣ್ಯ ಉಳ್ಳವರಾಗಿದ್ದರು. ದೀನರು, ಶೋಷಿತರು, ಕೆಳಗೆ ಬಿದ್ದವರಲ್ಲಿ ದೇವರನ್ನು ಕಂಡರು. ಬಸವಣ್ಣನವರು ಅಂತರಂಗ ಶುದ್ಧಿಗೆ ಮಹತ್ವ ನೀಡಿದರು. ಬದುಕಿನಲ್ಲಿ ಉಡುವ ಬಟ್ಟೆಗಿಂತ ನಡೆವ ಬಟ್ಟೆ ಮುಖ್ಯ. ನಡೆ-ನುಡಿ ಸರಿಯಾಗಿದ್ದರೆ ಜೀವನ ಆನಂದಮಯ. ಅದಕ್ಕಾಗಿ ಹಿಡಿದ ಆಚಾರ ಕೊನೆ ಮುಟ್ಟಿಸಬೇಕು. ಅರಿವು-ಆಚಾರಗಳ ಬುನಾದಿ ಮೇಲೆ ಬದುಕು ಕಟ್ಟಿಕೊಳ್ಳಬೇಕು ಎಂದು ಹೇಳಿದರು.

ಮಲ್ಲಮ್ಮ ಚಂದ್ರಶೇಖರ ಹೆಬ್ಬಾಳೆ, ಪ್ರಕಾಶ ಮಠಪತಿ ಹಾಗೂ ಮಾಣಿಕಪ್ಪ ಗೋರನಾಳೆ ಅವರನ್ನು ಸನ್ಮಾನಿಸಲಾಯಿತು. ಉದ್ಯಮಿ ಚಂದ್ರಶೇಖರ ಹೆಬ್ಬಾಳೆ ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಸಾಹಿತಿ ರಮೇಶ ಮಠಪತಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಚನ್ನಬಸವ ಹಂಗರಗಿ ಅಧ್ಯಕ್ಷತೆ ವಹಿಸಿದ್ದರು. ನೀಲಮ್ಮನ ಬಳಗದ ಜಗದೇವಿ ಶಾಂತಕುಮಾರ ಪನಸಾಲೆ ಸಮ್ಮುಖ ವಹಿಸಿದ್ದರು. ಶ್ಯಾಮಲಾ ಎಲಿ, ಸಿದ್ದಮ್ಮ ಮಠಪತಿ ವಚನ ಗಾಯನ ಮಾಡಿದರು. ವನಿತಾ ಚಂದ್ರಕಾಂತ ಸೋಶೆಟ್ಟಿ ಭಕ್ತಿ ದಾಸೋಹಗೈದರು. ಶಿಲ್ಪಾ ಮಜಗೆ ಸ್ವಾಗತಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.