ಬೀದರ್‌ ಜಿಲ್ಲೆಯಲ್ಲಿ ಅದ್ದೂರಿ ಬಸವ ಜಯಂತಿ ಆಚರಣೆ

ಶನಿವಾರ, ಮೇ 25, 2019
32 °C

ಬೀದರ್‌ ಜಿಲ್ಲೆಯಲ್ಲಿ ಅದ್ದೂರಿ ಬಸವ ಜಯಂತಿ ಆಚರಣೆ

Published:
Updated:
Prajavani

ಬೀದರ್‌: ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಬಸವ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.

ಜಿಲ್ಲಾಧಿಕಾರಿ ಎಚ್‌.ಆರ್. ಮಹಾದೇವ ಉದ್ಘಾಟಿಸಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಗೀತಾ ಚಿದ್ರಿ, ಜಿಲ್ಲಾ ಪಂಚಾಯಿತಿ ಸದಸ್ಯೆ ಶಕುಂತಲಾ ಬೆಲ್ದಾಳೆ, ಅಕ್ಕ ಅನ್ನಪೂರ್ಣ, ಗುರಮ್ಮ ಸಿದ್ದಾರೆಡ್ಡಿ, ಬಸವರಾಜ ಧನ್ನೂರ್, ಕಾಶಪ್ಪ ಧನ್ನೂರ್, ಗುರುನಾಥ ಕೊಳ್ಳೂರ್, ಶಿವಶರಣಪ್ಪ ವಾಲಿ, ಬಾಬು ವಾಲಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ನಂತರ ಬಸವೇಶ್ವರ ವೃತ್ತದಲ್ಲಿನ ಬಸವೇಶ್ವರ ಪುತ್ಥಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಕಾಶೆಂಪೂರ, ಜಿಲ್ಲಾಧಿಕಾರಿ ಮಹಾದೇವ ಇತರರು ಪುಷ್ಪಾರ್ಚನೆ ಮಾಡಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಗೀತಾ, ಬಸವೇಶ್ವರ ಜಯಂತಿ ಉತ್ಸವ ಸಮಿತಿಯ ಅಧ್ಯಕ್ಷ ಕುಶಾಲ್‌ ಪಾಟೀಲ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ ಪಾಟೀಲ ಸೋಲಪುರ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶೈಲೇಂದ್ರ ಬೆಲ್ದಾಳೆ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಇದ್ದರು.

ಜೆಡಿಎಸ್‌ ಕಚೇರಿ:

ಜೆಡಿಎಸ್ ಜಿಲ್ಲಾ ಘಟಕದ ಕಚೇರಿಯಲ್ಲಿ ಬಸವ ಜಯಂತಿ ಆಚರಿಸಲಾಯಿತು.

ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಕಾಶೆಂಪೂರ ಅವರು ಬಸವಣ್ಣನವರ ಭಾವತ್ರಕ್ಕೆ ಪೂಜೆ ಸಲಿಸಿದರು.

ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ ಪಾಟೀಲ ಸೋಲಪುರ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶೋಕ ಕೋಡಗೆ. ರಾಜ್ಯ ಸಂಫಟನಾ ಕಾರ್ಯದರ್ಶಿ ಅಶೋಕುಮಾರ ಕರಂಜಿ. ಅಶೋಕ ಪಾಟೀಲ ಸಂಗೂಳ್ಳಗಿ. ಜಿಲ್ಲಾ ಯವ ಘಟಕ ಅಧ್ಯಕ್ಷ ಬಸವರಾಜ ಪಾಟೀಲ ಹಾರೂರಗೇರಿ. ಸುದರ್ಶನ ಸುಂದರಾಜ, ರಾಜು ಚಿಂತಾಮಣಿ. ಸೂರ್ಯಕಾಂತ ಯದಲಾಪುರ. ಮಾರುತಿ ಬೌದ್ದೆ , ಅಭಿ ಕಾಳೆ, ಮಲ್ಲಪ್ಪ ಮನ್ನಾಎಖ್ಖೆಳ್ಳಿ . ಸೈಯದ್ ಫಾರೂಖಅಲಿ ಇದ್ದರು.

ಹಿರಿಯರ ಯೋಗ ತಂಡ:

ಬೀದರ್‌ನ ಹಿರಿಯರ ಯೋಗ ತಂಡ ಹಾಗೂ ನಗೆ ಕೂಟದ ವತಿಯಿಂದ ಬಸವ ಜಯಂತಿ ಆಚರಿಸಲಾಯಿತು.

ವಕೀಲ ಗಂಗಪ್ಪ ಸಾವಳೆ ಮಾತನಾಡಿ, ‘ಬಸವಣ್ಣ ನವರು ಸಕಲ ಜೀವಾತ್ಮರಿಗೆ ಲೇಸನ್ನು ಬಯಸಿದ್ದಾರೆ. ಅವರು ಹೃದಯ ಹಾಗೂ ಮನಸ್ಸುಗಳನ್ನು ಬೆಸೆಯುವನ್ನು ಮಾಡಿದ್ದಾರೆ’ ಎಂದರು.

ಪಶು ವೈದ್ಯಕೀಯ ಮಹಾವಿದ್ಯಾಲಯದಲ್ಲಿ ನಿವೃತ್ತ ಅಧಿಕಾರಿ ವಿ.ಎಸ್. ಉಪ್ಪಿನ ಮಾತನಾಡಿದರು.

ಡಾ.ವಿ.ವಿ. ಗುತ್ತಿ, ಭೀಮರಾವ್ ನೌಬಾದೆ, ಸರೋಜನಿ - ಗಂಗಾಧರ ಪಾಟೀಲ, ಪುಷ್ಪಾ ರಮೇಶ ಕಪಲಾಪೂರ, ಸುಲೋಚನಾ ತೋರಣ, ಸಂಜುಕುಮಾರ ಶೀಲವಂತ, ವಿವೇಕ ಪಟ್ನೆ, ಹಿರೇಮಠ, ವೀರಶೆಟ್ಟಿ, ವಿಠಲರಾವ್, ಈಶ್ವರ ಕನ್ನೆರಿ, ವಿಜಯಕುಮಾರ ಶಿಕ್ಷಕ, ಮಲ್ಲಿಕಾರ್ಜುನ ಸ್ವಾಮಿ, ನಗೆ ಕೂಟದ ಸಿದ್ಧಯ್ಯ ಕೌಡಿಮಠ, ಚಂದ್ರಪ್ಪಾ ಪಾಟೀಲ, ಬಿ.ಎನ್. ಸ್ವಾಮಿ, ಅಂತೇಶ್ವರ ಶೆಟಕಾರ, ಮಹಾಲಿಂಗಪ್ಪ ಬೆಲದಾಳೆ, ಬಿ.ಎನ್. ಪಾಟೀಲ, ಬಿ. ವಿಸಾಜಿ, ಭೀಮಾಶಂಕರ, ಶಂಕ್ರೆಪ್ಪಾ ಪಾಟೀಲ, ಎಸ್.ಆರ್. ಪಾಟೀಲ, ಬೊದಗೊಂಟೆ ಸಂಗಶೆಟ್ಟಿ, ಗುಂಡಪ್ಪ ಚಿಲ್ಲರ್ಗಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !