ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಮನಾಬಾದ್: ಬಸವೇಶ್ವರ ಮೂರ್ತಿ ಮೆರವಣಿಗೆ

Last Updated 5 ಮೇ 2022, 2:51 IST
ಅಕ್ಷರ ಗಾತ್ರ

ಹುಮನಾಬಾದ್: 12ನೇ ಶತಮಾನದ ಅನುಭವ ಮಂಟಪ ಎಲ್ಲಾ ಜಾತಿ ಜನಾಂಗದವರ ಪ್ರಮುಖ ಸಭೆಯಾಗಿತ್ತು ಎಂದು ಶಾಸಕ ರಾಜಶೇಖರ ಪಾಟೀಲ ಹೇಳಿದರು.

ಇಲ್ಲಿನ ಬಸವೇಶ್ವರ ವೃತ್ತದಲ್ಲಿ ತಾಲ್ಲೂಕು ಆಡಳಿತ ಹಾಗೂ ಬಸವ ಜಯಂತಿ ಉತ್ಸವ ಸಮಿತಿಯಿಂದ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.‌

ಜನರಲ್ಲಿ ಬೇರೂರಿದ್ದ ಜಾತಿ ಪದ್ದತಿಯನ್ನು ಹೂಗಲಾಡಿಸಿ, ಎಲ್ಲರೂ ಸಮಾನರಾಗಿ ಬದುಕಬೇಕೆಂದು ಬಸವೇಶ್ವರರ ಆಶಯವಾಗಿತ್ತು.‌ ಹೀಗಾಗಿ, ಬಸವಣ್ಣ ಮತ್ತು ಅಂಬೇಡ್ಕರ್ ಅವರನ್ನು ಒಂದು ಜಾತಿಗೆ ಸೀಮಿತ ಮಾಡಬಾರದು.‌ ಪ್ರತಿಯೊಬ್ಬರು ಸಹ ಅವರ ತತ್ವ ಆದರ್ಶಗಳನ್ನು ಅಳವಡಿಸಿಕೊಂಡು ಆದರ್ಶ ಜೀವನ ಸಾಗಿಸಬೇಕು ಎಂದರು.

ಹಿರೇಮಠ ಸಂಸ್ಥಾನದ ಪೀಠಾಧಿಪತಿ ರೇಣುಕಾ ವೀರಗಂಗಾಧರ ಶಿವಾಚಾರ್ಯರು ಆಶೀರ್ವಚನ ನೀಡಿದರು. ಬಾಬು ಪೂಜಾರಿ ವಿಶೇಷ ಉಪನ್ಯಾಸ ನೀಡಿದರು.‌

ವಿಧಾನ ಪರಿಷತ್ ಸದಸ್ಯರಾದ ಡಾ.ಚಂದ್ರಶೇಖರ ಪಾಟೀಲ, ಭೀಮರಾವ್ ಪಾಟೀಲ, ಟಿಎಪಿಸಿಎಂಎಸ್ ಅಧ್ಯಕ್ಷ ಅಭಿಷೇಕ್ ಪಾಟೀಲ, ಪುರಸಭೆ ಅಧ್ಯಕ್ಷೆ ಕಸ್ತೂರಿಬಾಯಿ ಪರಸನೂರ್, ಉಪಾಧ್ಯಕ್ಷೆ ಸತ್ಯವಂತಿ ಮಠಪತಿ, ತಹಶೀಲ್ದಾರ್ ಡಾ. ಪ್ರದೀಕುಮಾರ್ ಹಿರೇಮಠ, ಡಿವೈಎಸ್ಪಿ ಸೋಮಲಿಂಗ ಕುಂಬಾರ್, ತಾ.ಪಂ ಇಒ ಮುರುಗೇಪ್ಪ ವಸ್ತ್ರದ್, ಸಿಪಿಐ ಶರಣಬಸಪ್ಪ ಕೊಡ್ಲಾ, ಡಾ.ಗೋವಿಂದ್, ಶಿಕ್ಷಣಾಧಿಕಾರಿ ಶಿವಗುಂಡಪ್ಪ, ಪ್ರಮುಖರಾದ ಜಿಪಂ ಮಾಜಿ ಉಪಾಧ್ಯಕ್ಷ ಲಕ್ಷ್ಮಣರಾವ್ ಬುಳ್ಳ್, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಮಲ್ಲಿಕಾರ್ಜುನ ಮಾಶೆಟ್ಟಿ, ದತ್ತಕುಮಾರ ಚಿದ್ರಿ, ಪ್ರಕಾಶ್ ಬತಲಿ, ಸಚಿನ್ ಮಠಪತಿ ಇತರರು ಇದ್ದರು.

ಬಸವ ಜಯಂತಿ ಅಂಗವಾಗಿ ಇಲ್ಲಿಯ ವೀರಭದ್ರೇಶ್ವರ ಅಗ್ನಿ ಕುಂಡದ ಬಳಿ ಶಾಸಕ ರಾಜಶೇಖರ ಅವರು ಬಸವೇಶ್ವರ ಮೂರ್ತಿ‌ಗೆ ಪೂಜೆ ಸಲ್ಲಿಸಿ ‌ಮೆರವಣಿಗೆಗೆ ಚಾಲನೆ ನೀಡಿದರು.‌

ಮೆರವಣಿಗೆಯು ಅಂಬೇಡ್ಕರ್ ವೃತ್ತ‌, ಸರ್ದಾರ್ ವಲ್ಲಭಭಾಯಿ ಪಟೇಲ್, ರಾಮಮಂದಿರ ಮೂಲಕ ಬಸವೇಶ್ವರ ವೃತ್ತದ ವರೆಗೆ ಸಾಗಿತು. ಡಿಜೆ, ಅಲಂಕೃತ ವಿದ್ಯುತ್ ದೀಪಗಳು‌, ಪಟಾಕಿ ಸಿಡಿಸುವುದು ಗಮನ ಸೆಳೆಯಿತು. ಶಾಸಕ ರಾಜಶೇಖರ ಪಾಟೀಲ, ಡಾ.‌ಚಂದ್ರಶೇಖರ ಪಾಟೀಲ, ಭೀಮರಾವ್ ಪಾಟೀಲ ಸೇರಿದಂತೆ ಬಸವ ಅಭಿಮಾನಿಗಳೂಂದಿಗೆ ‘ಬಸವಣ್ಣ ಬಾರೋ ಬಸವಣ್ಣ’ ಗೀತೆಗೆ ಹೆಜ್ಜೆ ಹಾಕಿದರು.

‘ಬಸವತತ್ವದ ಅನುಷ್ಠಾನ ಅತ್ಯಗತ್ಯ’

ಭಾಲ್ಕಿ: ದೇಶದಲ್ಲಿ ಶಾಂತಿ, ಸುವ್ಯವಸ್ಥೆ ನೆಲೆಸಲು ಹಾಗೂ ಆರ್ಥಿಕ, ಸಾಮಾಜಿಕವಾಗಿ ಪ್ರಗತಿ ಸಾಧಿಸಲು ರಾಷ್ಟದ ಎಲ್ಲೆಡೆ ಬಸವತತ್ವದ ಅನುಷ್ಠಾನ ಅತ್ಯಗತ್ಯ ಎಂದು ಸಿದ್ದಗಂಗಾ ಸ್ಮಾರಕ ಸೇವಾ ಸಮಿತಿ ಹಳೆ ವಿದ್ಯಾರ್ಥಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶಿವಕುಮಾರ ಪಾಟೀಲ ಹೇಳಿದರು.

ತಾಲ್ಲೂಕಿನ ತೇಗಂಪೂರ ಗ್ರಾಮದಲ್ಲಿ ಸಿದ್ದಗಂಗಾ ಸ್ಮಾರಕ ಸೇವಾ ಸಮಿತಿ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಮಾಜದಲ್ಲಿನ ಜಾತೀಯತೆ, ಅಸಮಾನತೆ, ಬಡತನ, ದಾರಿದ್ರ್ಯವನ್ನು ತೊಲಗಿಸಲು 900 ವರ್ಷಗಳ ಹಿಂದೆಯೇ ಬಸವಣ್ಣವನರು ಶ್ರಮಿಸಿದ್ದರು. ಅವರ ವಚನಗಳಲ್ಲಿನ ತತ್ವಗಳನ್ನು ಪ್ರತಿಯೊಬ್ಬರು ಚಾಚೂ ತಪ್ಪದೇ ಪಾಲಿಸಿದ್ದಲ್ಲಿ ಸಮಾಜ ಮಾದರಿ ಪಥದಲ್ಲಿ ಚಲಿಸಲು ಸಾಧ್ಯ ಎಂದು ತಿಳಿಸಿದರು.

ರಾಜ್ಯದಲ್ಲಿ ಮಠ ಮಂದಿರಗಳಿಂದ ಬಸವ ಪರಂಪರೆ ಉಳಿದಿದೆ. ಮಠ, ಮಂದಿರಗಳು ಇಲ್ಲವಾಗಿದ್ದರೆ ಬಸವ ತತ್ವಗಳು ಮರೆಯಾಗುತ್ತಿದ್ದವು. ಬಸವ ತತ್ವಗಳು ಎಲ್ಲ ಸಮಾಜಕ್ಕೂ ಆದರ್ಶಪ್ರಾಯವಾಗಿದ್ದು, ಪ್ರತಿಯೊಬ್ಬರೂ ಪಾಲನೆ ಮಾಡಬೇಕಿದೆ ಎಂದರು.

ಹಲಬರ್ಗಾ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಸಾವಿತ್ರಿಬಾಯಿ ಪಾಟೀಲ, ಸದಸ್ಯರಾದ ಅಂಜನಾ ಪಾಟೀಲ, ಕಾವೇರಿ ಪಾಟೀಲ, ಸಿದ್ದಗಂಗಾ ಮಠದ ಹಳೆಯ ವಿದ್ಯಾರ್ಥಿಗಳಾದ ಸುಭಾಶ ಪಾಟೀಲ, ರಾಜು ಕುಂಬಾರ, ರೇವಣು ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT