ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸರಳ ಬದುಕಿಗೆ ಬಸವ ತತ್ವ ನೆರವು’

ಪ್ರವಚನ ಸಮಾರೋಪದಲ್ಲಿ ಗಂಗಾಂಬಿಕೆ ಅಕ್ಕ ಹೇಳಿಕೆ
Last Updated 20 ಮೇ 2022, 14:02 IST
ಅಕ್ಷರ ಗಾತ್ರ

ಬೀದರ್: ‘ಬಸವಣ್ಣನವರ ತತ್ವಗಳು ಸರಳ ಬದುಕನ್ನು ಕಲಿಸುತ್ತವೆ’ ಎಂದು ಬಸವ ಸೇವಾ ಪ್ರತಿಷ್ಠಾನದ ಡಾ. ಗಂಗಾಂಬಿಕೆ ಅಕ್ಕ ಹೇಳಿದರು.

ಇಲ್ಲಿಯ ಚನ್ನಬಸವನಗರದಲ್ಲಿ ಬಸವ ಜಯಂತಿ ಹಾಗೂ ಬಸವಣ್ಣನಿಂದ ಬದುಕಿತ್ತೀಲೋಕ ಪ್ರವಚನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ನಮ್ಮ ನಡೆ, ನುಡಿ ಒಂದಾದರೆ ಸುಂದರ ಸಮಾಜ ಕಟ್ಟಬಹುದು ಎಂದರು.

ಸಾನಿಧ್ಯ ವಹಿಸಿದ್ದ ಹುಲಸೂರಿನ ಶಿವಾನಂದ ಸ್ವಾಮೀಜಿ ಮಾತನಾಡಿ,‘ಬಸವಣ್ಣನವರ ವಚನಗಳು ಬದುಕಿಗೆ ದಾರಿದೀಪವಾಗಿವೆ’ ಎಂದು ಹೇಳಿದರು.

ಬಿಡಿಎ ಅಧ್ಯಕ್ಷ ಬಾಬುವಾಲಿ ಕಾರ್ಯಕ್ರಮ ಉದ್ಘಾಟಿಸಿದರು. ಕರ್ನಾಟಕ ಪದವಿಪೂರ್ವ ಕಾಲೇಜು ಪ್ರಾಚಾರ್ಯ ಡಾ. ಬಸವರಾಜ ಬಲ್ಲೂರ ಉಪನ್ಯಾಸ ನೀಡಿದರು. ಕಲಾವಿದರಾದ ಮಲ್ಲಿಕಾರ್ಜುನ ಐನೋಳಿ, ಮಲ್ಲಿಕಾರ್ಜುನ ನಾಗಮಾರಪಳ್ಳಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ, ಡಿವೈಎಸ್‍ಪಿ ಕೆ.ಎಂ. ಸತೀಶ್, ನಗರಸಭೆ ಸದಸ್ಯ ರಾಜಾರಾಮ ಚಿಟ್ಟಾ, ಗಾಂಧಿಗಂಜ್ ಸಿಪಿಐ ಜಿ.ಎಸ್. ಬಿರಾದಾರ, ನಗರಸಭೆ ಎಇಇ ರಾಜಶೇಖರ ಹಿರೇಮಠ, ರೇವಣಸಿದ್ದಯ್ಯ ಸ್ವಾಮಿ, ಅನಿಲ್ ಅಷ್ಟೂರ, ಜಗನ್ನಾಥ ಕೆ. ಪಾಟೀಲ, ಶಿವದತ್ತ ಒಡೆಯರ್, ರಮೇಶ ಕೋರಿ, ರಾಜು ಸ್ವಾಮಿ, ದತ್ತಾತ್ರಿ, ವೀರಶೆಟ್ಟಿ ಔರಾದಕರ್, ಸಂತೋಷ ಕೊಡ್ಡೆ, ರಾಜು ಕಾಜಿ, ಸಂಗ್ರಾಮ ಧತ್ತರ್ಗಿ ಇದ್ದರು.

ಜಗನ್ನಾಥ ಶಿವಯೋಗಿ ನಿರೂಪಿಸಿದರು. ಸುನೀಲ್ ದಳವೆ ಸ್ವಾಗತಿಸಿದರು. ದೇವೇಂದ್ರ ಕರಂಜೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT