ಬಸವಕಲ್ಯಾಣ: ಡಾ.ಬಾಬು ಜಗಜೀವನರಾಂ ಗ್ರಾಮೀಣ ಮತ್ತು ನಗರ ಚಾರಿಟಬಲ್ ಟ್ರಸ್ಟ್ದಿಂದ ಶನಿವಾರ ನಗರದಲ್ಲಿ ಬಾಬೂಜಿ ಜಯಂತಿ ಅಂಗವಾಗಿ ಭವ್ಯ ಮೆರವಣಿಗೆ ನಡೆಸಲಾಯಿತು.

ಪುಷ್ಪ ಮತ್ತು ವಿದ್ಯುತ್ ದೀಪಗಳಿಂದ ಅಲಂಕೃತವಾದ ರಥದಲ್ಲಿ ಬಾಬೂಜಿ ಅವರ ಮೂರ್ತಿ ಕೊಂಡೊಯ್ಯಲಾಯಿತು. ಹಲಿಗೆ, ಡೊಳ್ಳು ಮತ್ತಿತರೆ ವಾದ್ಯ ಮೇಳದವರು, ಜಾನಪದ ಕಲಾ ತಂಡಗಳವರು ಪಾಲ್ಗೊಂಡಿದ್ದರು. ಎಲ್ಲೆಡೆ ಪಟಾಕಿ ಸಿಡಿಸಲಾಯಿತು. ಕಾರ್ಯಕರ್ತರು ಹಸಿರು ಟೊಪ್ಪಿಗೆ ಮತ್ತು ಕೊರಳ ಪಟ್ಟಿ ಹಾಕಿಕೊಂಡಿದ್ದರು. ಧ್ವನಿವರ್ಧಕದ ಸಂಗೀತಕ್ಕೆ ಯುವಕರು ಉತ್ಸಾಹದಿಂದ ಕುಣಿದರು.

ಕೋಟೆ ಹತ್ತಿರದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ವಿಜಯಸಿಂಗ್ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಡಾ.ಬಾಬು ಜಗಜೀವನರಾಂ ಗ್ರಾಮೀಣ ಮತ್ತು ನಗರ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಸಂಜೀವಕುಮಾರ ಸಂಗನೂರೆ, ಪ್ರಮುಖರಾದ ಅರ್ಜುನ ಕನಕ, ಮನೋಹರ ಮೈಸೆ, ಸಾವಿತ್ರಿ ಸಲಗರ, ಯುವರಾಜ ಸೂರ್ಯವಂಶಿ, ಅಶೋಕ ಢಗಳೆ, ಅಶೋಕ ಸಂಗನೂರೆ, ದಿಗಂಬರ ಜಲ್ದೆ, ಶಿರೋಮಣಿ ನೀಲನೋರ್, ಮನೋಜ ತಂಬುರ್ಜೆ, ಕಿರಣ ಲಾಡೆ, ರಾಜೀವ ಮುಜನಾಯಕ, ಅರ್ಜುನ ಸಂಗನೂರೆ, ಮಲ್ಲಿಕಾರ್ಜುನ ಭೆಂಡೆ, ಕಾಶಿನಾಥ ಲಾಡೆ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260427-33-996024127

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.