ಬಸವಕಲ್ಯಾಣ: ‘ಇವನಮ್ಮವ ಎಂದು ಎಲ್ಲರನ್ನೂ ಅಪ್ಪಿಕೊಳ್ಳುವ ಸಮಾನತೆ, ಸೌಹಾರ್ದ ಸಾರುವ ಬಸವತತ್ವದ ಉಳಿವಿಗಾಗಿ ನಿರಂತರವಾಗಿ ಹೋರಾಟ ಕೈಗೊಳ್ಳಲಾಗುತ್ತದೆ’ ಎಂದು ಸಾಮಾಜಿಕ ಸಮತಾ ವೇದಿಕೆ ತಾಲ್ಲೂಕು ಘಟಕದ ಅಧ್ಯಕ್ಷ ಆಕಾಶ ಖಂಡಾಳೆ ಹೇಳಿದರು.

ಶಹಾಪುರನಲ್ಲಿ ನಡೆಯಲಿರುವ ಬಸವಾದಿ ಶಿವಶರಣರ ಹಿಂದೂ ಸಮಾವೇಶಕ್ಕೆ ಪರ್ಯಾಯವಾಗಿ ಹಮ್ಮಿಕೊಂಡಿರುವ ಬಸವಾದಿ ಶರಣರ ಜಾಗೃತಿ ಸಮಾವೇಶದ ನಿಮಿತ್ತ ಶುಕ್ರವಾರ ನಡೆದ ಬಸವಜ್ಯೋತಿ ಯಾತ್ರೆಯಲ್ಲಿ ಅವರು ಮಾತನಾಡಿದರು.

‘ಬಸವತತ್ವ ಜಾತಿ, ಧರ್ಮ ಎನ್ನದೇ ಎಲ್ಲರನ್ನೂ ಒಗ್ಗೂಡಿಸುತ್ತದೆ. ವಿಷಮತೆ ಬಿತ್ತುವುದಿಲ್ಲ. ಯಾವುದೇ ಸಮಾವೇಶ, ಸಮಾರಂಭಗಳಿಗೆ ಯಾರ ವಿರೋಧವೂ ಇಲ್ಲ. ಸಂವಿಧಾನಾತ್ಮಕವಾಗಿ ಎಲ್ಲರಿಗೂ ತಮ್ಮ ಧರ್ಮಾಚರಣೆ ಕೈಗೊಳ್ಳಲು ಹಕ್ಕಿದೆ. ಆದರೆ ಬಸವಣ್ಣನವರ ಭಾವಚಿತ್ರ ಎದುರಿಗಿಟ್ಟುಕೊಂಡು ಅವರಿಗೆ ಒಪ್ಪಿಗೆಯಾಗದ ಅಸತ್ಯವಾದ ಮತ್ತು ಕಾಲ್ಪನಿಕವಾದ ತತ್ವ, ಸಿದ್ಧಾಂತ ಪ್ರತಿಪಾದಿಸುವುದಕ್ಕೆ ವಿರೋಧವಿದೆ. ಇಂಥ ಕಾರ್ಯಕ್ರಮ ರೂಪಿಸುತ್ತಿರುವ ಕನೇರಿ ಸ್ವಾಮೀಜಿಯವರ ಹಿಂದೆ ಯಾವ ಶಕ್ತಿಯಿದೆ ಎಂಬುದು ಎಲ್ಲರಿಗೂ ಗೊತ್ತಿದೆ’ ಎಂದರು.

ರಾಷ್ಟ್ರೀಯ ಬದವದಳದ ತಾಲ್ಲೂಕು ಘಟಕದ ಅಧ್ಯಕ್ಷ ರವಿ ಕೊಳಕೂರ್ ಮಾತನಾಡಿ, ‘ವರ್ಣಾಶ್ರಮ ಧರ್ಮವನ್ನು ಬಸವಾದಿ ಶರಣರು ವಿರೋಧಿಸಿದ್ದರು. ಆದರೂ ಕೆಲವರು ಬಸವಾನುಯಾಯಿಗಳ ಮುಖವಾಡ ಹಾಕಿಕೊಂಡು ಇಂಥ ಅಸಮಾನತೆಯ ತತ್ವ ಬಿತ್ತುವುದಕ್ಕೆ ಪ್ರಯತ್ನಿಸುತ್ತಿದ್ದಾರೆ. ಇಂಥದಕ್ಕೆ ಎಲ್ಲರೂ ಪ್ರಬಲವಾಗಿ ವಿರೋಧಿಸುವ ಅಗತ್ಯವಿದೆ’ ಎಂದರು.

ಬಸವ ಮಹಾಮನೆಯ ಸಿದ್ದರಾಮೇಶ್ವರ ಸ್ವಾಮೀಜಿ ಮಾತನಾಡಿ, ‘ವೈದಿಕ ಶಕ್ತಿಯ ಕರಾಳ ಸಂಚನ್ನು ಹತ್ತಿಕ್ಕುವುದು ಮತ್ತು ಶರಣರ ನೈಜ ಸಿದ್ಧಾಂತವನ್ನು ಎತ್ತಿ ಹಿಡಿಯುವ ಅಗತ್ಯವಿದೆ’ ಎಂದರು.

ರೈತ ಮುಖಂಡ ಮಡೋಳಪ್ಪ ಪಾಟೀಲ, ಶರಣಪ್ಪ ಪರೆಪ್ಪ, ನಿವೃತ್ತ ಉಪನ್ಯಾಸಕಿ ವಿಜಯಲಕ್ಷ್ಮಿ ಗಡ್ಡೆ, ಇಂದುಮತಿ ಚಿಟಗುಪ್ಪ, ಕಲ್ಯಾಣಮ್ಮ, ಜಯಶ್ರೀ ಮೆಂಡೋಳೆ, ಶ್ರೀದೇವಿ ಚಿವಡೆ, ಅನಸೂಯಾ ರಾಠೋಡ, ಅಂಬುಬಾಯಿ ಮತ್ತಿತರರು ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-33-1543206184

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.