ಬಸವಕಲ್ಯಾಣ: ‘ಗುರು ಬಸವಣ್ಣನವರು ಮತ್ತು ರಾಷ್ಟ್ರಕವಿ ಕುವೆಂಪು ಮನುಕುಲದ ಉದ್ಧಾರಕರು. ಅವರ ತತ್ವಾದರ್ಶದಂತೆ ಕನ್ನಡ ಸಾಹಿತ್ಯ ವೇದಿಕೆ ಕಾರ್ಯಚಟುವಟಿಕೆಗಳನ್ನು ಆಯೋಜಿಸುತ್ತಿದೆ’ ಎಂದು ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ಕೋಟ್ರೇಶ ಉಪ್ಪಾರ ಹೇಳಿದರು.

ನಗರದ ಪಂಚಾಯತರಾಜ್ ಪದವಿ ಕಾಲೇಜಿನಲ್ಲಿ ಭಾನುವಾರ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಬೀದರ್ ಜಿಲ್ಲಾ ಘಟಕದಿಂದ ನಡೆದ ಪದಗ್ರಹಣ, ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ, ಹಾಗೂ ಸಾಧಕರಿಗೆ ಪ್ರಶಸ್ತಿ ವಿತರಣೆ, ಕವಿಗೋಷ್ಠಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ವೇದಿಕೆ 8 ವರ್ಷಗಳಿಂದ ರಾಜ್ಯದ ಎಲ್ಲ ಜಿಲ್ಲೆ ಹಾಗೂ ಹೊರ ದೇಶಗಳಲ್ಲಿಯೂ ಕಾರ್ಯಗೈಯುತ್ತಿದೆ. 12ನೇ ಶತಮಾನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ತಳಸಮುದಾಯದ ಶರಣೆಯರು ಸಂಘಟಿತರಾಗಿ ವಚನಗಳನ್ನು ಬರೆದರು. ಈ ವಚನಗಳು ಆಗಲೇ ಇಂಗ್ಲೀಷ್ಗೆ ಅನುವಾದ ಆಗಿದಿದ್ದರೆ ಶರಣೆಯರ ಜಯಂತಿಗಳಂದೆ ವಿಶ್ವದಲ್ಲಿ ಮಹಿಳಾ ದಿನಾಚರಣೆ ನಡೆಯುತ್ತಿತ್ತು. ವಚನ ಸಾಹಿತ್ಯ ಮತ್ತು ಜಾನಪದ ಸಾಹಿತ್ಯ ಅನುಭವದಿಂದ ಬಂದುದಾಗಿದ್ದು ಜನರ ಕಷ್ಟಸುಖಗಳ ಧ್ವನಿಯಾಗಿದೆ’ ಎಂದರು.

ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಕಲ್ಯಾಣರಾವ್ ಮದರಗಾಂವಕರ್ ಮಾತನಾಡಿ, ‘ವೇದಿಕೆಯಿಂದ ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಮಹಿಳೆಯರಲ್ಲಿ ಸಾಕಷ್ಟು ಪ್ರತಿಭಾವಂತರಿದ್ದು ಅವರನ್ನು ಪ್ರೋತ್ಸಾಹಿಸಬೇಕಾಗಿದೆ’ ಎಂದರು.

ಶೀತಲ್ ಮಲ್ಲಿಕಾರ್ಜುನ ಖೂಬಾ ಮಾತನಾಡಿ, ‘ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ಪ್ರಗತಿ ಸಾಧಿಸಬೇಕು’ ಎಂದರು.

ಗವಿಮಠದ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು, ತಹಶೀಲ್ದಾರ್ ಶಿವಾನಂದ ಮೇತ್ರೆ, ರೇಖಾ ರಾಜಕುಮಾರ ಹೊಸಮನಿ, ಎಂ.ಜಿ.ದೇಶಪಾಂಡೆ ಮಾತನಾಡಿದರು.

ಸಾಹಿತಿ ವಿಶ್ವನಾಥ ಮುಕ್ತಾ, ಬಸವಣ್ಣಪ್ಪ ನೆಲ್ಲೋಗಿ, ಲಕ್ಷ್ಮಿ ಕಲ್ಯಾಣರಾವ್ ಉಪಸ್ಥಿತರಿದ್ದರು.

ನಿವೃತ್ತ ಉಪನ್ಯಾಸಕಿ ವಿಜಯಲಕ್ಷ್ಮಿ ಗಡ್ಡೆ, ಸರೋಜಾ ಕಾಶಿನಾಥ ಚಂದಾಪುರ, ಜ್ಯೋತಿ ಅಲಶೆಟ್ಟಿ, ಜನಾಬಾಯಿ, ಜ್ಯೋತಿ ಧನ್ನೂರೆ, ಸುಮಿತ್ರಾ ದಾವಣಗಾವೆ, ಅಶ್ವೀನಿ ಶರಣಪ್ಪ, ಆಶಾರಾಣಿ ಬಾವಿದೊಡ್ಡಿ, ಆನಂದಾ ಜಮಾದಾರ, ರೇಖಾ ತಾನಾಜಿರಾವ್ ಕಾಂಬಳೆ, ರೇಖಾ ಹೊಸಮನಿ, ಭಾರತಬಾಯಿ ಖರ್ಗೆ, ಮನಿಷಾ ರೋಳಾ, ವೈಜಯಂತಿ ರೋಳಾ ಇವರಿಗೆ ಕಲ್ಯಾಣ ಸೇವಾರತ್ನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260330-33-1597300524

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.