ಬಸವಕಲ್ಯಾಣ: ‘ಮಕ್ಕಳ ಕಲಿಕೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಮೋರಖಂಡಿಯ ಬುದ್ಧ ವಿಹಾರಕ್ಕೆ ಡಿಜಿಟಲ್ ಗ್ರಂಥಾಲಯ ಮಂಜೂರು ಮಾಡಿಸುತ್ತೇನೆ’ ಎಂದು ವಿಧಾನಪರಿಷತ್ ಸದಸ್ಯ ಎಂ.ಜಿ.ಮುಳೆ ಹೇಳಿದರು.

ತಾಲ್ಲೂಕಿನ ಮೋರಖಂಡಿ ಗ್ರಾಮದ ಜೇತವನ ಬುದ್ಧವಿಹಾರದಲ್ಲಿ ಶನಿವಾರ ಆಯೋಜಿಸಿದ್ದ ಜ್ಯೋತಿಬಾ ಫುಲೆ ಜಯಂತಿಯಲ್ಲಿ ಅವರು ಮಾತನಾಡಿದರು.

‘ಜ್ಯೋತಿಬಾ ಫುಲೆಯವರು ಮತ್ತು ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು ಶಿಕ್ಷಣಕ್ಕೆ ಮಹತ್ವ ನೀಡಿದ್ದರು. ಆದ್ದರಿಂದ ಸಂಘಟನೆ, ಸಂಘರ್ಷಕ್ಕಿಂತ ಮೊದಲು ತಮ್ಮ ಮಕ್ಕಳಿಗೆ ಶಿಕ್ಷಣ ನೀಡುವುದು ಅತ್ಯಂತ ಅವಶ್ಯ’ ಎಂದರು.

ಹುಲಸೂರ ತಹಶೀಲ್ದಾರ್ ಶಿವಾನಂದ ಮೇತ್ರೆ ಮಾತನಾಡಿ, ‘ಈ ಬುದ್ಧವಿಹಾರ ಅತ್ಯಂತ ಹಳೆಯದಾಗಿದ್ದು ಸಂವಿಧಾನ ಶಿಲ್ಪಿ ಡಾ.ಬಿ.ಅರ್.ಅಂಬೇಡ್ಕರ್ ಮತ್ತು ಬುದ್ಧನ ತತ್ವ, ಸಂದೇಶದ ಪ್ರಚಾರ ಪ್ರಸಾರ ಕಾರ್ಯದಲ್ಲಿ ತೊಡಗಿಸಿಕೊಂಡಿದೆ’ ಎಂದರು.

ಉಪನ್ಯಾಸಕ ನರಸಿಂಗರೆಡ್ಡಿ ಗದ್ಲೇಗಾಂವ ಮಾತನಾಡಿ, ‘ಬಾಬಾಸಾಹೇಬ್ ಅಂಬೇಡ್ಕರ್ ಅವರು ಜ್ಯೋತಿಬಾ ಫುಲೆ ಅವರನ್ನು ಗುರುವಿನ ರೂಪದಲ್ಲಿ ನೋಡುತ್ತಿದ್ದರು. ಫುಲೆ ಅವರು ಬರೀ ಮಾತನಾಡದೆ ಎಲ್ಲವನ್ನೂ ಕಾರ್ಯರೂಪಕ್ಕೆ ತರುತ್ತಿದ್ದರು. ಅವರ ನಡೆ ನುಡಿ ಒಂದಾಗಿತ್ತು. ಅವರು ಸತ್ಯಶೋಧಕರಾಗಿ ಸಮಾಜಕ್ಕೆ ಮಾರ್ಗದರ್ಶನ ಮಾಡಿದ್ದರು’ ಎಂದರು.

ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ದಿಲೀಪ ಕಾಂಬಳೆ, ಮಾರುತಿ ಶಿಂಧೆ, ಸತೀಶಕುಮಾರ ಸೋನಕಾಂಬಳೆ ಮಾತನಾಡಿದರು.

ಪಿಯುಸಿಯಲ್ಲಿ ಹೆಚ್ಚಿನ ಅಂಕ ಪಡೆದು ಉತ್ತೀರ್ಣರಾದ ಸಮ್ಯಕ್ ರಾಮಜಿ, ಮನಸ್ವಿ ಮಹೇಂದ್ರಕುಮಾರ, ಕುನಾಲ್ ಪಂಡಿತ್, ಪ್ರತೀಕ್ಷಾ ಸುರೇಶ, ಪ್ರಜ್ವಲ್ ರಾಹುಲ್, ವಿಜಯಲಕ್ಷ್ಮಿ ವಿಕಾಸ, ರೂಪಾಲಿ ದಶರಥ, ಧಮ್ಮಶೀಲಾ ರೂಪಚಂದ ಇವರನ್ನು ಸನ್ಮಾನಿಸಲಾಯಿತು.

ಬುದ್ಧ ವಿಹಾರ ಸಮಿತಿ ಅಧ್ಯಕ್ಷ ಅಣ್ಣಾರಾವ್ ಸೋನಕಾಂಬಳೆ, ಅರವಿಂದ, ಅನಿಲ ಕಾಂಬಳೆ, ವಿಶ್ವನಾಥ, ಶೈಲೇಂದ್ರ, ದಶರಥ ರಾಮಾ, ನರಸಿಂಗರಾವ್, ಸಂದೀಪಾನ, ಸುಭಾಷ ಮತ್ತಿತರರು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260417-33-796729478

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.