ಬಸವಕಲ್ಯಾಣ: ಅಪೂರ್ಣ ಕಾಮಗಾರಿ ಮತ್ತು ಅನುದಾನದ ಕೊರತೆಯ ಕಾರಣ ತಾಲ್ಲೂಕಿನ ಧನ್ನೂರ (ಕೆ) ಗ್ರಾಮದ ₹7.50 ಕೋಟಿ ವೆಚ್ಚದ ರೈತ ಭವನ ಹಾಳಾಗುವ ಹಂತಕ್ಕೆ ತಲುಪಿದೆ.

ಕರ್ನಾಟಕ ನೀರಾವರಿ ನಿಗಮದಿಂದ 2021ನೇ ಸಾಲಿನಲ್ಲಿ ಭವನ ನಿರ್ಮಾಣಕ್ಕೆ ಅನುದಾನ ನೀಡಲಾಗಿದೆ. ರೈತ ಕುಟುಂಬಗಳ ಮದುವೆ ಹಾಗೂ ಇತರೆ ಕಾರ್ಯಕ್ರಮಗಳಿಗಾಗಿ 2,000 ಆಸನಗಳ ಸಾಮರ್ಥ್ಯದ ಬೃಹತ್ ಭವನ ನಿರ್ಮಿಸಲಾಗುತ್ತಿದೆ. ಎರಡು ಅಂತಸ್ತುಗಳ ಈ ಕಟ್ಟಡದಲ್ಲಿ ಕೆಳ ಭಾಗದಲ್ಲಿ ಅಡುಗೆ ಮತ್ತು ಊಟದ ವ್ಯವಸ್ಥೆ ಮಾಡಲಾಗಿದೆ. ಮೇಲ್ಭಾಗದಲ್ಲಿ ವೇದಿಕೆ ಹಾಗೂ ಜನರಿಗೆ ಕುಳಿತುಕೊಳ್ಳುವುದಕ್ಕೆ ವ್ಯವಸ್ಥೆ ಇದೆ. ವಾಸದ ಕೊಠಡಿಗಳನ್ನು ಸಹ ಇಲ್ಲಿ ನಿರ್ಮಿಸಲಾಗಿದೆ.

ಪೂರ್ವಾಭಿಮುಖವಾಗಿ ಇರುವ ಈ ಕಟ್ಟಡದ ಎದುರಲ್ಲಿ ಮುಖ್ಯ ರಸ್ತೆಯಿಂದ ಬರುವುದಕ್ಕೆ ಅಗಲವಾದ ಉತ್ತಮ ರಸ್ತೆ ಇದೆ. ಸಭಾ ಭವನದೊಳಗೆ ಹೋಗುವುದಕ್ಕೆ ಎದುರಲ್ಲಿ ಎತ್ತರದ ಮಹಾದ್ವಾರ ಮತ್ತು ಮೆಟ್ಟಿಲುಗಳಿವೆ. ದೂರದಿಂದ ನೋಡಿದಾಗ ಎಲ್ಲ ಕೆಲಸ ಮುಗಿದಿರಬೇಕು ಎಂದೆನಿಸುತ್ತದೆ. ಆದರೆ, ಒಳಗೆ ಪ್ರವೇಶಿಸಿದಾಗ ಮಾತ್ರ ಎಲ್ಲವೂ ಅಸ್ತವ್ಯಸ್ತವಾಗಿದೆ.

ಪ್ರವೇಶ ದ್ವಾರದ ಎದುರು ಹಾಗೂ ಸುತ್ತಲು ಹುಲ್ಲು, ಮುಳ್ಳುಕಂಟೆಗಳು ಬೆಳೆದಿದ್ದರಿಂದ ಜನರು ಬಹಿರ್ದೆಸೆಗೆ ಬರುವಂತಾಗಿದೆ. ಊಟದ ಭವನದಲ್ಲಿ ಅರ್ಧದಷ್ಟು ಕೆಲಸ ಹಾಗೆಯೇ ಉಳಿದಿದ್ದು ಅಲ್ಲಲ್ಲಿ ಮಣ್ಣು ಹರಡಿದೆ. ಕಳ್ಳ ಕಾಕರ, ದುಶ್ಚಟ ಮಾಡುವವರ ಅಡಗು ತಾಣವಾಗಿ ಪರಿವರ್ತಿತವಾಗಿದೆ. ಭವನದೊಳಗೆ ವಿದ್ಯುತ್ ಸಂಪರ್ಕ ಇಲ್ಲ. ಪೀಠೋಪಕರಣಗಳನ್ನು ಅಳವಡಿಸಿಲ್ಲ. ಆವರಣಗೋಡೆಯೂ ಕಟ್ಟಿಲ್ಲ.

‘ನಾನು ಅಹವಾಲು ಸ್ವೀಕರಿಸಲು ಗ್ರಾಮಕ್ಕೆ ಹೋದಾಗ ಭವನಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರನ್ನು ಹಾಗೂ ಇತರೆ ಸಂಬಂಧಿತರನ್ನು ಮೊಬೈಲ್ ಮೂಲಕ ಸಂಪರ್ಕಿಸಿ ಕೆಲಸ ಪೂರ್ಣಗೊಳಿಸಲು ಕೇಳಿಕೊಂಡಿದ್ದೇನೆ. ಈ ಭವನದಿಂದ ಸುತ್ತಲಿನ 12 ಗ್ರಾಮಗಳ ಜನರಿಗೆ ವಿವಿಧ ಕೌಟುಂಬಿಕ ಕಾರ್ಯಕ್ರಮ ಆಯೋಜಿಸುವುದಕ್ಕೆ ಅನುಕೂಲ ಆಗುತ್ತದೆ ಎಂದು ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದೇನೆ. ಕಟ್ಟಡದ ಎದುರಿನ ರಸ್ತೆಯಲ್ಲಿ ಸಸಿಗಳನ್ನು ನೆಟ್ಟು ಪರಿಸರದ ಸೌಂದರ್ಯ ಹೆಚ್ಚಿಸುವುದಕ್ಕೆ ನನ್ನ ಅನುದಾನದಲ್ಲಿ ಹಣ ಒದಗಿಸುತ್ತೇನೆ ಎಂದು ಕೂಡ ಗ್ರಾಮಸ್ಥರಿಗೆ ಭರವಸೆ ನೀಡಿದ್ದೇನೆ’ ಎಂದು ಶಾಸಕ ಶರಣು ಸಲಗರ ಹೇಳಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260411-33-300790089

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.