ಬಸವಕಲ್ಯಾಣ: ‘ನಗರದಲ್ಲಿ ಜೂನ್ 28 ಕ್ಕೆ ಕನ್ಹೇರಿ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಸಾರಥ್ಯದಲ್ಲಿ ಬಸವಾದಿ ಶಿವಶರಣರ ಬೃಹತ್ ಹಿಂದೂ ಸಮಾವೇಶ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ’ ಎಂದು ಮುಚಳಂಬ ಪ್ರಣವಾನಂದ ಸ್ವಾಮೀಜಿ ತಿಳಿಸಿದರು.

ನಗರದ ಸದಾನಂದಸ್ವಾಮಿ ಮಠದಲ್ಲಿ ಭಾನುವಾರ ನಡೆದ ಪೂರ್ವಸಿದ್ಧತಾ ಸಭೆಯ ಬಳಿಕ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

‘ಕೆಲವರು ಈ ಬಗ್ಗೆ ಅಪಸ್ವರ ತೆಗೆದು ಬಸವಾದಿ ಶಿವಶರಣರನ್ನು ಹಿಂದೂ ಮಹಾಸಾಗರದಿಂದ ದೂರ ಸರಿಸುತ್ತಿದ್ದಾರೆ. ಆದರೆ ಶಿವಶರಣರು ಹಿಂದೂ ವಿಚಾರಗಳಿಂದ ದೂರವಿಲ್ಲ. ಅನೇಕರು ಹಿಂದುತ್ವ ಮರೆಯುತ್ತಿರುವ ಕಾರಣ ಅವರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವ ಸದುದ್ದೇಶದಿಂದ ಈ ಸಮಾವೇಶ ಹಮ್ಮಿಕೊಳ್ಳಲಾಗುತ್ತಿದೆ. ಯಾರ ಪರ ಅಥವಾ ವಿರೋಧಕ್ಕೆ ಮತ್ತು ಪಕ್ಷ ಭೇದಕ್ಕೆ ಆಸ್ಪದವಿಲ್ಲ. ಹಿಂದೂ ಧರ್ಮದ ಬಗ್ಗೆ ಹೆಮ್ಮೆಪಡುವವರು ಕಾರ್ಯಕ್ರಮಕ್ಕೆ ಓಡೋಡಿ ಬರುತ್ತಾರೆ ಎಂಬುದರಲ್ಲಿ ಸಂಶಯವಿಲ್ಲ. ಈ ಬಗ್ಗೆ ಕೂಲಂಕಷ ಚರ್ಚೆಗೆ ಮತ್ತೆ ಜೂನ್ 7 ರಂದು ಸಭೆ ನಡೆಯಲಿದೆ’ ಎಂದರು.

ಶ್ರೀಮದ್ವೀರಶೈವ ಸದ್ಬೋಧನಾ ಸಂಸ್ಥೆ ಅಧ್ಯಕ್ಷ ಡಾ.ಬಸವರಾಜಸ್ವಾಮಿ ತ್ರಿಪುರಾಂತ ಮಾತನಾಡಿ, ‘ಸಮಾವೇಶದಲ್ಲಿ 300 ಮಠಾಧೀಶರು ಭಾಗವಹಿಸುವರು. ಕಾಯಕ, ದಸೋಹ ಮತ್ತು ಕೃಷಿ ಇವು ಸರ್ವಸಮಾನತೆ ಸಾರುವಂಥವು. ಅವುಗಳ ಮಹತ್ವ ಬಿತ್ತರಿಸುವುದಕ್ಕಾಗಿಯೇ ಸಮಾವೇಶ ನಡೆಸಲಾಗುತ್ತಿದೆ’ ಎಂದರು.

ಮುಖಂಡ ಗುಂಡುರೆಡ್ಡಿ ಮಾತನಾಡಿ, ‘ಕನ್ಹೇರಿ ಸ್ವಾಮೀಜಿ ನೇತೃತ್ವದಲ್ಲಿ ಈ ಮೊದಲು ಇತರೆಡೆ ಸಮಾವೇಶಗಳು ನಡೆದಿವೆ. ಜಾತಿಭೇದ ಮರೆತು ಎಲ್ಲರೂ ಪಾಲ್ಗೊಳ್ಳಬೇಕು’ ಎಂದು ವಿನಂತಿಸಿದರು.

ತ್ರಿಪುರಾಂತ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು, ಅಂಬಿಗರ ಚೌಡಯ್ಯ ಜಾಗೃತಿ ಪೀಠಾಧ್ಯಕ್ಷ ರತ್ನಾಕಾಂತ ಸ್ವಾಮೀಜಿ, ಸದ್ಲಾಪುರ ಸಿದ್ದೇಶ್ವರ ಸ್ವಾಮೀಜಿ, ಬಜರಂಗದಳದ ಸಂಚಾಲಕ ರವಿ ನಾವದ್ಗೇಕರ್ ಮತ್ತಿತರರು ಉಪಸ್ಥಿತರಿದ್ದರು. ಸಭೆಯಲ್ಲಿ ವಿವಿಧ ಸಮುದಾಯಗಳ ಮುಖಂಡರು ಅನಿಸಿಕೆ ವ್ಯಕ್ತಪಡಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260601-33-1920886072

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.