ಬಸವಕಲ್ಯಾಣ: ‘ವಿವಿಧ ರೀತಿಯ ಸಾಹಿತ್ಯ ರಚಿಸಿರುವ ಬಸವರಾಜ ಐನೋಳಿ ಅವರ ಬದುಕಿನ ವಿವಿಧ ಮಗ್ಗಲುಗಳ ಚಿತ್ರಣ ಮೃದುವಚನ ಗ್ರಂಥದಲ್ಲಿದೆ’ ಎಂದು ಬೆಂಗಳೂರಿನ ಸಾಹಿತಿ ರಾಜಶೇಖರ ಮಠಪತಿ ಹೇಳಿದರು.

ತಾಲ್ಲೂಕಿನ ಹಾರಕೂಡ ಹಿರೇಮಠದಲ್ಲಿ ಶುಕ್ರವಾರ ಅಯೋಜಿಸಿದ್ದ ಅಭಿನಂದನಾ ಗ್ರಂಥ ‘ಮೃದುವಚನ’ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಹಾರಕೂಡ ಮಠವು ಎಲ್ಲ ರಂಗದವರಿಗೆ ಅರಳಲು ಪೂರಕ ವಾತಾವರಣ ನಿರ್ಮಿಸಿಕೊಡುವ ಬೃಂದಾವನದಂತಿದೆ. ಚನ್ನವೀರ ಶಿವಾಚಾರ್ಯರು ಇಡೀ ಸಮಾಜದ ಉನ್ನತಿಗಾಗಿ ಸತತವಾಗಿ ಶ್ರಮಿಸುತ್ತಿದ್ದಾರೆ. ಶಿಕ್ಷಕರಾಗಿ, ಸಾಹಿತಿಯಾಗಿ ಬಸವರಾಜ ಐನೋಳಿ ಅವರು ಕಾರ್ಯಗೈದಿದ್ದು ಶ್ರಮಜೀವಿಯಾದ ಇವರ ಅಭಿನಂದನಾ ಗ್ರಂಥ ಮಠದಿಂದ ಪ್ರಕಟಿಸುತ್ತಿರುವುದು ಅತ್ಯುತ್ತಮ ಕಾರ್ಯ’ ಎಂದರು.

ಗ್ರಂಥದ ಸಂಪಾದಕ ಗವಿಸಿದ್ದಪ್ಪ ಪಾಟೀಲ ಮಾತನಾಡಿ, ‘ಐನೋಳಿ ಅವರ ಪ್ರತಿ ಕಾರ್ಯವನ್ನು ಗಮನಿಸಿದ್ದೇನೆ. ಉತ್ತಮ ವ್ಯಕ್ತಿತ್ವವಿರುವ ಇವರ ಬಗ್ಗೆ ಗ್ರಂಥ ಪ್ರಕಟಿಸಿದರೆ ಸಮಾಜಕ್ಕೆ ಪ್ರೇರಣೆ ದೊರಕಬಹುದು ಎನ್ನುವುದು ನನ್ನ ಅಭಿಪ್ರಾಯ’ ಎಂದರು.

ಸಾನ್ನಿಧ್ಯವಹಿಸಿದ್ದ ಚನ್ನವೀರ ಶಿವಾಚಾರ್ಯರು ಬಸವರಾಜ ಐನೋಳಿ ದಂಪತಿಗಳಿಗೆ ಚಿನ್ನದ ಉಂಗುರವಿಟ್ಟು ವಿಶೇಷವಾಗಿ ಸನ್ಮಾನಿಸಿದರು. ಮಲ್ಲಿನಾಥ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು.

ಬಿ.ಕೆ.ಹಿರೇಮಠ, ಮೇಘರಾಜ ನಾಗರಾಳೆ, ಸುಭಾಶ್ಚಂದ್ರ ನಾಗರಾಳೆ, ಸಿದ್ರಾಮಪ್ಪ ಗುದಗೆ, ವಿಜಯಕುಮಾರ ಸಂಗೋಳಗೆ, ಅಂಬಾರಾಯ ಉಗಾಜಿ ಉಪಸ್ಥಿತರಿದ್ದರು. ಕಾರ್ತಿಕಸ್ವಾಮಿ ಯಲ್ಲದಗುಂಡಿ, ರೇವಣಸಿದ್ದಯ್ಯ ಸ್ವಾಮಿ, ಶರಣಪ್ಪ ಜಮಾದಾರ ಸುಂಠಾಣ ಸಂಗೀತ ಪ್ರಸ್ತುತಪಡಿಸಿದರು.

ವಿದ್ಯಾಶ್ರೀ ಕಲ್ಲೂರು ಭರತನಾಟ್ಯ ಪ್ರದರ್ಶಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-33-1912057186

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.