ಬಸವಕಲ್ಯಾಣ: ‘ಈಚೆಗೆ ಬಸವ ಜಯಂತಿ ನಿಮಿತ್ತ ನಡೆದ ಬಸವೇಶ್ವರರ ರಥೋತ್ಸವದಲ್ಲಿ ತೇರು ಚಲಿಸುವಾಗ ಸಂಭವಿಸಿದ ಅವಘಡದಲ್ಲಿ ಗಾಯಗೊಂಡಿರುವ ರಿಷಬ್ ಶಿವಾನಂದ ನೇತೆ ಅವರಿಗೆ ದೇವಸ್ಥಾನ ಸಮಿತಿ ಹಾಗೂ ವಿಶ್ವಸ್ಥ ಸಮಿತಿಯಿಂದ ಆಸ್ಪತ್ರೆ ಖರ್ಚಿಗೆ ₹2 ಲಕ್ಷ ಸಹಾಯಧನ ನೀಡಲಾಗಿದೆ’ ಎಂದು ಸಮಿತಿ ಅಧ್ಯಕ್ಷ ಅನಿಲಕುಮಾರ ರಗಟೆ ತಿಳಿಸಿದರು.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾವ್ಯಾರೂ ಉಹಿಸದ ಹಾಗೂ ನಿರೀಕ್ಷಿಸದ ಘಟನೆ ರಥೋತ್ಸವದ ವೇಳೆ ಸಂಭವಿಸಿದೆ. ತೇರು ಚಲಿಸುವಾಗ ಕೆಳಗೆ ಬಿದ್ದಿದ್ದ ಧನರಾಜ ಚಾಕೂರೆ ಅವರ ಕಾಲುಗಳು ಗಾಲಿಯೊಳಗೆ ಸಿಕ್ಕಿಕೊಂಡು ಗಾಯಗೊಂಡರು. ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಇನ್ನೊಬ್ಬರಿಗೆ ತೀವ್ರ ಗಾಯವಾಗಿದೆ. ಇದರಿಂದ ಮನಸ್ಸು ತೀವ್ರ ಘಾಸಿಗೊಂಡಿದೆ’ ಎಂದರು.

‘ಗಾಯಗೊಂಡಿರುವ ರಿಷಬ್ ಹೈದರಾಬಾದ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಿಬ್ಬರ ಕುಟುಂಬಗಳಿಗೆ ದುಃಖ ತಡೆಯುವ ಶಕ್ತಿ ನೀಡಲಿ ಎಂದು ಬಸವೇಶ್ವರರಲ್ಲಿ ಪ್ರಾರ್ಥಿಸುತ್ತೇವೆ. ಇಂಥ ಬಿಕ್ಕಟ್ಟಿನ ಪರಿಸ್ಥಿತಿಯಲ್ಲೂ ಜಾತ್ರೆಯ ಎಲ್ಲ ಚಟುವಟಿಕೆಗಳಿಗೆ ಸಹಕರಿಸಿದ ಸಕಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇವೆ’ ಎಂದಿದ್ದಾರೆ.

ಸನ್ಮಾನ: ತೇರು ಚಲಿಸುವಾಗ ನಡೆದ ಅವಘಡದ ಸಂದರ್ಭದಲ್ಲಿ ತೇರಿನ ಕೆಳಗೆ ಮೂವರು ಬಿದ್ದಿದ್ದರು. ಅವರಲ್ಲಿ ಒಬ್ಬನನ್ನು ಹರಸಾಹಸ ಮಾಡಿ ರಕ್ಷಿಸಿದ ಉಮೇಶ ಕೆವಟಗೆ ಅವರನ್ನು ದೇವಸ್ಥಾನ ಸಮಿತಿ ಮತ್ತು ವಿಸ್ವಸ್ಥ ಸಮಿತಿಯಿಂದ ಸನ್ಮಾನಿಸಲಾಯಿತು.

ಸಮಿತಿ ಅಧ್ಯಕ್ಷ ಅನಿಲಕುಮಾರ ರಗಟೆ, ವಿಶ್ವಸ್ಥ ಸಮಿತಿ ಅಧ್ಯಕ್ಷ ಶಶಿಕಾಂತ ದುರ್ಗೆ, ಪ್ರಮುಖರಾದ ಮಲ್ಲಿಕಾರ್ಜುನ ಕುರಕೋಟೆ, ಜಗನ್ನಾಥ ಖೂಬಾ, ಅಶೋಕ ನಾಗರಾಳೆ, ಬಸವರಾಜ ಬಾಲಿಕಿಲೆ, ಈರಣ್ಣ ಹಲಶೆಟ್ಟೆ, ಬಸವರಾಜ ಕೋರಕೆ, ವಿವೇಕಾನಂದ ಹೊದಲೂರೆ, ಮಲ್ಲಿಕಾರ್ಜುನ ಚಿರಡೆ, ಬಸವರಾಜ ತೊಂಡಾರೆ, ಸುನಿಲ ಹೊಳಕುಂದೆ, ಪುಷ್ಪಾವತಿ ಮಾಮಾ, ಡಾ.ಜಿ.ಎಸ್.ಭುರಳೆ, ನಾಗಯ್ಯ ಸ್ವಾಮಿ, ಸೋಮಶೇಖರ ವಸ್ತ್ರದ್, ಮಲ್ಲಿನಾಥ ಮಂಠಾಳೆ, ರಾಜಕುಮಾರ ಹೊಳಕುಂದೆ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260426-33-1721200005

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.