ಬಸವಕಲ್ಯಾಣ: ‘ಮನೆಯಲ್ಲಿ ಗ್ರಂಥಾಲಯವಿದ್ದರೆ ಓದುವ ಹವ್ಯಾಸ ಸಹಜವಾಗಿಯೇ ಬೆಳೆಯುತ್ತದೆ’ ಎಂದು ಸಾಹಿತಿ ಗವಿಸಿದ್ದಪ್ಪ ಪಾಟೀಲ ಅಭಿಪ್ರಾಯಪಟ್ಟರು.

ನಗರದ ತ್ರಿಪುರಾಂತ ಶರಣ ಉರಿಲಿಂಗ ಪೆದ್ದಿ ಮಠದ ಪಂಚಾಕ್ಷರಿ ಸ್ವಾಮೀಜಿ ಅವರ ನಿವಾಸದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ಜಿಲ್ಲಾ ಜಾಗೃತಿ ಸಮಿತಿ ವತಿಯಿಂದ ಬುಧವಾರ ನಡೆದ ‘ಮನೆಗೊಂದು ಗ್ರಂಥಾಲಯ’ ಅನುಷ್ಠಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರಾಚಾರ್ಯ ಭೀಮಾಶಂಕರ ಬಿರಾದಾರ ಮಾತನಾಡಿ, ‘ಸಾಕ್ಷರತಾ ಪ್ರಮಾಣ ಅಧಿಕಗೊಂಡರೂ ಓದುವ ಹವ್ಯಾಸ ಮಾತ್ರ ಕಡಿಮೆ ಆಗುತ್ತಿದೆ. ಓದದೆ ಮಾತನಾಡುವುದೇ ಹೆಚ್ಚಾಗಿದೆ’ ಎಂದರು.

ನೇತೃತ್ವ ವಹಿಸಿದ್ದ ಪಂಚಾಕ್ಷರಿ ಸ್ವಾಮೀಜಿ ಮಾತನಾಡಿ, ‘ಮಠದಲ್ಲಿ ಮೊದಲಿನಿಂದಲೂ ಗ್ರಂಥಾಲಯವಿದೆ ಎಂದು ಹೆಮ್ಮೆಯಿಂದ ಹೇಳಬೇಕೆನಿಸುತ್ತದೆ. ಮನೆಗೊಂದು ಗ್ರಂಥಾಲಯ ಯೋಜನೆಯಿಂದ ಓದುಗರು ಹೆಚ್ಚುವುದು ನಿಶ್ಚಿತ’ ಎಂದರು. ಮನೆಗೊಂದು ಗ್ರಂಥಾಲಯ ಜಾಗೃತಿ ಸಮಿತಿ ಜಿಲ್ಲಾ ಸಂಚಾಲಕ ಬಾಲಾಜಿ ಕುಂಬಾರ, ನಿವೃತ್ತ ಪ್ರಾಧ್ಯಾಪಕ ನಾರಾಯಣ ರೋಳೇಕರ್, ಪೀರಪ್ಪ ಸಜ್ಜನ್ ಮಾತನಾಡಿದರು. ಸಮಿತಿ ಸದಸ್ಯ ವೀರಶೆಟ್ಟಿ ಪಾಟೀಲ ಗ್ರಂಥಾಲಯ ಕುರಿತು ಕವನ ವಾಚಿಸಿದರು. ಪಿ.ಎಚ್.ಡಿ ಪದವಿ ಪಡೆದ ಸಂಜೀವಕುಮಾರ ನಡುಕರ್ ಅವರನ್ನು ಸನ್ಮಾನಿಸಲಾಯಿತು.

ಮಹಾಲಿಂಗ ದೇವರು, ರಾಷ್ಟ್ರೀಯ ಬಸವದಳದ ತಾಲ್ಲೂಕು ಅಧ್ಯಕ್ಷ ರವೀಂದ್ರ ಕೊಳಕೂರ್, ನಿವೃತ್ತ ಪ್ರಾಚಾರ್ಯ ನಾಗೇಂದ್ರ ಢೋಲೆ, ಸಂದೀಪ ಮುಕಿಂದೆ, ಸಿದ್ದಪ್ಪ ಹೊಸಮನಿ, ನಾಗಪ್ಪ ನಿಣ್ಣೆ, ಶ್ರೀಪತಿ ಬೇಲೂರು, ಸುಮಿತ್ ಖೇಳಗಿ, ರಾಮಜಿ ಸಕ್ಪಾಲ್, ಗುರುನಾಥ ವಾಘ್ಮಾರೆ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260508-33-1815731900

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.