ಬಸವಕಲ್ಯಾಣ: ಅರಣ್ಯ ಇಲಾಖೆಯವರು ಗುರುವಾರ ನಗರದ ಮುಖ್ಯ ರಸ್ತೆಯಲ್ಲಿನ ಒಣಗಿದ ಹಾಗೂ ರಸ್ತೆಗೆ ವಾಲಿದ ಕೊಂಬೆಗಳನ್ನು ಕಡಿದಿದ್ದಾರೆ.

ಪ್ರಜಾವಾಣಿಯಲ್ಲಿ ಮೇ 6 ರಂದು `ಒಣಗಿದ ಕೊಂಬೆಗಳಿಂದ ಅಪಾಯ ಸಾಧ್ಯತೆ' ಎಂಬ ಶೀರ್ಷಿಕೆ ಅಡಿಯಲ್ಲಿ ವಿಶೇಷ ವರದಿ ಪ್ರಕಟಿಸಲಾಗಿತ್ತು. ಇದರಿಂದ ಎಚ್ಚೆತ್ತುಕೊಂಡಿರುವ ಅರಣ್ಯ ಇಲಾಖೆಯವರು ಕೊಂಬೆಗಳನ್ನು ಕಡಿಯುವ ಕಾರ್ಯ ಆರಂಭಿಸಿದ್ದಾರೆ.

ನಗರಸಭೆ ಆಯುಕ್ತ ರಾಜೀವ ಬಣಕಾರ್ ಸಹ ಪತ್ರಿಕೆಯಲ್ಲಿನ ವರದಿಯನ್ನು ಉಲ್ಲೇಖಿಸಿ ಅರಣ್ಯಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ‘ಗಾಳಿ, ಮಳೆಗೆ ಕೊಂಬೆಗಳು ಜನರ ಮೇಲೆ ಬಿದ್ದರೆ ಅನಾಹುತ ಸಂಭವಿಸಬಹುದು ಆದ್ದರಿಂದ ಶೀಘ್ರದಲ್ಲಿ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು’ ಎಂದು ಅವರು ಸೂಚಿಸಿದ್ದಾರೆ.

‘ವಲಯ ಅರಣ್ಯಾಧಿಕಾರಿಗಳ ಸಲಹೆ ಮೇರೆಗೆ ನಗರದ ತ್ರಿಪುರಾಂತ ಮೌನೇಶ್ವರ ದೇವಸ್ಥಾನದ ಪ್ರವೇಶ ದ್ವಾರದ ಎದುರಿನ ರಸ್ತೆಗೆ ವಾಲಿದ ಮರಗಳ ಕೊಂಬೆ ಕಡಿದಿದ್ದೇವೆ’ ಎಂದು ಇಲಾಖೆ ಸಿಬ್ಬಂದಿ ಶಿವಕುಮಾರ ತಿಳಿಸಿದ್ದಾರೆ.

‘ಇತರೆಡೆ ಇರುವ ಮರಗಳ ಒಣಗಿದ ಕೊಂಬೆಗಳನ್ನು ಸಹ ಕಡಿಯಲಾಗುತ್ತದೆ’ ಎಂದು ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260508-33-1105861265

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.