ಬಸವಕಲ್ಯಾಣ: ‘ನಗರದ 108 ಅಡಿ ಎತ್ತರದ ಬಸವಣ್ಣನವರ ಮೂರ್ತಿ ಎದುರಲ್ಲಿ ಈಚೆಗೆ ಆರ್.ಎಸ್.ಎಸ್ ಗೀತೆ ಹಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದರಾ ಮೇಶ್ವರ ಸ್ವಾಮೀಜಿ ಅವರನ್ನು ಬಸವಮಹಾಮನೆಯ ಬಸವಧರ್ಮ ಪೀಠದಿಂದ ಉಚ್ಚಾಟಿಸಬೇಕು ಎಂಬುದು ಅತಿರೇಕದ ಮಾತುಗಳು. ಸಂಬಂಧವಿಲ್ಲದ ಹೇಳಿಕೆಯಾಗಿದ್ದು ಕಾನೂನು ಕ್ರಮಕ್ಕೆ ಎಡೆಮಾಡಿಕೊಡುವಂಥದ್ದು’ ಎಂದು ಪೀಠದ ಸಿದ್ದರಾಮೇಶ್ವರ ಸ್ವಾಮೀಜಿ ಹೇಳಿದ್ದಾರೆ.

ಈ ಕುರಿತು ಪ್ರಕಟಣೆಯಲ್ಲಿ ತಿಳಿಸಿರುವ ಅವರು, ‘ಗುರು ಬಸವಣ್ಣನವರು ಇವನಾರವ ಎನ್ನದೆ ಇವ ನಮ್ಮವ ಎಂದವರು. ಆದ್ದರಿಂದ ಮೂರ್ತಿಯ ದರ್ಶನಕ್ಕಾಗಲಿ, ಬಸವ ಮಹಾಮನೆ ಆವರಣದಲ್ಲಿನ ಯಾವುದೇ ಸ್ಥಳ ವೀಕ್ಷಣೆಗಾಗಲಿ ಪಕ್ಷ, ಜಾತಿ, ಧರ್ಮ, ಸಮುದಾಯದ ಆಧಾರದಲ್ಲಿ ಯಾರಿಗೂ ನಿರ್ಬಂಧಿಸಿಲ್ಲ. ಎಲ್ಲರೂ ಇಲ್ಲಿಗೆ ಬಂದು ಶರಣ ಸಂಸ್ಕೃತಿ ಕಲಿಯಲಿ, ಸಮತಾವಾದದ ಪ್ರೇರಣೆ ಪಡೆಯಲಿ ಎಂಬ ಸದುದ್ದೇಶದಿಂದ ಎಲ್ಲರಿಗೂ ಇಲ್ಲಿ ಮುಕ್ತ ಅವಕಾಶ ನೀಡಲಾಗಿದೆ. ಇದು ಸಾರ್ವಜನಿಕ ಪ್ರೇಕ್ಷಣಿಯ ತಾಣವಾಗಿದೆ' ಎಂದಿದ್ದಾರೆ.

‘ವಿಶ್ವಭಾತೃತ್ವದ ಸಂದೇಶ ಸಾರಿದ ಈ ಪುಣ್ಯ ನೆಲದಲ್ಲಿ ಭೇದಭಾವ ಮಾಡುವುದು ತಪ್ಪಾಗುತ್ತದೆ. ಬದುಕಿರಿ ಮತ್ತು ಎಲ್ಲರನ್ನೂ ಬದುಕಿಸಿರಿ ಎಂಬುದೇ ಬಸವ ಸಂದೇಶವಾಗಿದೆ. ಬಸವಣ್ಣನವರನ್ನು ಕೇವಲ ಒಂದು ಜಾತಿಗೆ ಸೀಮಿತಗೊಳಿಸುವ ಕೆಲವರು ಇಂಥವರು ಬರಲಿ, ಅಂಥವರಿಗೆ ಅವಕಾಶ ಬೇಡ ಎಂದು ಉಪದೇಶಿಸುವುದು ಸರಿಯಲ್ಲ. ಇದರಿಂದ ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ಆಗುತ್ತದೆ. ಇದು ಬಸವಣ್ಣನವರ ತತ್ವ, ಸಿದ್ಧಾಂತ, ಸಂದೇಶಗಳಿಗೆ ಚ್ಯುತಿ ತರುವಂಥ ವರ್ತನೆಯಾಗಿದೆ. ಇಂಥ ಸಂಕುಚಿತ ಮನೋಭಾವನೆ ಸಮಾಜದ ಸ್ವಾಸ್ಥ್ಯ ಕದಡುವುದಕ್ಕೆ ದಾರಿ ಮಾಡಿಕೊಡುತ್ತದೆ. ಆದ್ದರಿಂದ ಇಂಥ ಆರೋಪ ಖಂಡನೀಯವಾಗಿದೆ' ಎಂದಿದ್ದಾರೆ.

ಬಿಜೆಯಿಂದ ಈಚೆಗೆ ಆಯೋಜಿಸಿದ್ದ ಜಿಲ್ಲಾ ಮಟ್ಟದ ಪ್ರಶಿಕ್ಷಣ ವರ್ಗದಲ್ಲಿ ಪಾಲ್ಗೊಂಡವರು 108 ಅಡಿ ಮೂರ್ತಿ ಎದುರಲ್ಲಿ ಆರ್.ಎಸ್.ಎಸ್ ಗೀತೆ ಹಾಡಿದ್ದರು. ಈ ಬಗ್ಗೆ ವಿವಾದ ಉಂಟಾಗಿದ್ದು ಸಿದ್ದರಾಮೇಶ್ವರ ಸ್ವಾಮೀಜಿ ಅವರು ಇಲ್ಲಿ ಇಂಥ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಆದ್ದರಿಂದ ಅವರನ್ನು ಬಸವಧರ್ಮ ಪೀಠದಿಂದ ಉಚ್ಚಾಟಿಸಬೇಕು ಎಂದು ಲಿಂಗಾಯತ ಧರ್ಮ ಮಹಾಸಭಾ ರಾಷ್ಟ್ರೀಯ ಉಪಾಧ್ಯಕ್ಷ ಶಿವರಾಜ ಪಾಟೀಲ ಅತಿವಾಳ ಹೇಳಿಕೆ ನೀಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260522-33-145195949

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.