ಬಸವಕಲ್ಯಾಣ: ‘ಬಸವಾದಿ ಶರಣರ ನಾಡಿನಲ್ಲಿ ಗೋಹತ್ಯೆ ಆಗಕೂಡದು. ಅದನ್ನು ತಡೆಯುವುದಕ್ಕೆ ಯಾವುದೇ ತ್ಯಾಗಕ್ಕೂ ನಾನು ಸಿದ್ಧನಿದ್ದೇನೆ’ ಎಂದು ಶಾಸಕ ಶರಣು ಸಲಗರ ಹೇಳಿದರು.

ಶನಿವಾರ ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಹಂಚಿಕೊಂಡಿರುವ ಅವರು, ‘ನಾನೊಬ್ಬ ಶಾಸಕ ಎನಿಸಿಕೊಳ್ಳುವುದಕ್ಕಿಂತ ಗೋರಕ್ಷಕ ಎನಿಸಿಕೊಳ್ಳಲು ಇಷ್ಟಪಡುತ್ತೇನೆ. ಗೋರಕ್ಷಣೆ ಎಲ್ಲಕ್ಕಿಂತ ಪವಿತ್ರ ಕಾರ್ಯ’ ಎಂದಿದ್ದಾರೆ.

‘ಬಕ್ರೀದ್ ಹಬ್ಬಕ್ಕೆ ಲಕ್ಷಾಂತರ ಗೋವುಗಳ ಹತ್ಯೆ ನಡೆಯುತ್ತದೆ. ಕುರಾನ್ನಲ್ಲಿ ಗೋಹತ್ಯೆ ಮಾಡಲು ಹೇಳಿಲ್ಲ. ರಾಜ್ಯ ಸರ್ಕಾರ ಗೋಹತ್ಯೆ ನಿಷೇಧ ಕಾನೂನು ಜಾರಿಗೊಳಿಸಿದ್ದರೂ ಈ ಪದ್ಧತಿ ನಿಲ್ಲುತ್ತಿಲ್ಲ. ನಾನು ಈ ಕಾರ್ಯದಲ್ಲಿ ತೊಡಗಿಸಿಕೊಂಡಾಗ ನನ್ನ ಮೇಲೆಯೇ ಪ್ರಕರಣ ದಾಖಲಾಗಿದೆ. ಇದು ನ್ಯಾಯವೇ’ ಎಂದು ಪ್ರಶ್ನಿಸಿದ್ದಾರೆ.

‘ಮೊದಲು ಹಿಂದೂಗಳಿಂದ ಗೋವುಗಳ ಮಾರಾಟ ತಡೆಯಿರಿ ಎಂದು ಕೆಲವರು ನನಗೆ ಸಲಹೆ ನೀಡಿದ್ದಾರೆ. ಆದ್ದರಿಂದ ಜೀವನಪರ್ಯಂತ ಆಕಳು, ಎತ್ತುಗಳನ್ನು ದುಡಿಸಿಕೊಂಡು ಮುಪ್ಪಾದಾಗ ಅವುಗಳ ಮಾರಾಟ ಮಾಡುವುದು ಸರಿಯಲ್ಲ. ಅವುಗಳ ಸಂರಕ್ಷಣೆ ಮಾಡಬೇಕು’ ಎಂದು ರೈತರಲ್ಲಿ ವಿನಂತಿಸಿದ್ದಾರೆ.

ಗೋವಿನ ತಿಪ್ಪೆ ಗೊಬ್ಬರ ಜಮೀನಿಗೆ ಫಲವತ್ತತೆ ನೀಡುತ್ತದೆ. ಬಕ್ರೀದ್ ಹಬ್ಬಕ್ಕೆ ಯಾವುದೇ ಕಾರಣಕ್ಕೂ ಗೋಹತ್ಯೆ ಆಗದಂತೆ ಸಂಬಂಧಿತರು ಕ್ರಮ ಕೈಗೊಳ್ಳಬೇಕು' ಎಂದು ಅವರು ಒತ್ತಾಯಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260524-33-2098951955

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.