ಬಸವಕಲ್ಯಾಣ: ‘ಬಸವಣ್ಣನವರ ಜೊತೆಯಲ್ಲಿ ಇತರೆ ಶರಣ-ಶರಣೆಯರ ಕಾರ್ಯವನ್ನೂ ಸ್ಮರಿಸಬೇಕು. ಲಿಂಗಾಯತರ ಉಪ ಪಂಗಡದವರನ್ನು ಸಹ ಪರಿಗಣಿಸಿ ಗೌರವಿಸಬೇಕು’ ಎಂದು ಬೈಲೂರು ನಿಷ್ಕಲ್ ಮಂಟಪದ ನಿಜಗುಣಪ್ರಭು ಸ್ವಾಮೀಜಿ ಸಲಹೆ ನೀಡಿದರು.

ತಾಲ್ಲೂಕಿನ ಗುಣತೀರ್ಥವಾಡಿ ಕಲ್ಯಾಣ ಮಹಾಮನೆಯಲ್ಲಿ ಶನಿವಾರ ನಡೆದ ಎರಡು ದಿನಗಳ ಶರಣೆ ದಾನಮ್ಮದೇವಿ ಉತ್ಸವ ಮತ್ತು 4 ನೇ ಶರಣ ಸಮಾಗಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಬಸವಣ್ಣನವರ ಪ್ರತಿ ಕಾರ್ಯಕ್ಕೆ ಶರಣ- ಶರಣೆಯರು ಸಹಕಾರ ನೀಡಿದ್ದರು. ಸಮಾನತೆ, ಸೌಹಾರ್ದಕ್ಕಾಗಿ ಅವರು ಕೈಗೊಂಡ ಚಳವಳಿಯಲ್ಲಿ ಭಾಗಿಯಾಗಿ ತ್ಯಾಗ, ಬಲಿದಾನಗೈದರು. ಅವರಿಂದಲೇ ಬಸವಣ್ಣನವರು ಎತ್ತರೆತ್ತರಕ್ಕೆ ಬೆಳೆದರು. ಹೀಗಾಗಿ ಶರಣರಿಗೂ ಸಮಾನ ಗೌರವ ನೀಡುವುದು ಆದ್ಯ ಕರ್ತವ್ಯವಾಗಿದೆ. ಬಸವಪ್ರಭು ಸ್ವಾಮೀಜಿಯವರು ಶರಣೆ ದಾನಮ್ಮದೇವಿ ಉತ್ಸವ ಆಯೋಹಿಸಿರುವುದು ಶ್ಲಾಘನೀಯ’ ಎಂದರು.

ಕಲ್ಯಾಣ ಮಹಾಮನೆಯ ಬಸವಪ್ರಭು ಸ್ವಾಮೀಜಿ ಮಾತನಾಡಿ, ‘ಗುಣತೀರ್ಥವಾಡಿ ಪರಿಸರದಲ್ಲಿ ಶರಣೆ ದಾನಮ್ಮನವರ ತಪೋತಾಣ ಪತ್ತೆ ಹಚ್ಚಿ ವಿವಿಧ ಚಟುವಟಿಕೆ ಹಮ್ಮಿಕೊಳ್ಳಲಾಗುತ್ತಿದೆ. 15 ವರ್ಷಗಳಿಂದ ಪಾದಯಾತ್ರೆ ನಡೆಸಿ ಗುಡ್ಡಾಪುರದಿಂದ ಜ್ಯೋತಿ ತೆಗೆದುಕೊಂಡು ಬರಲಾಗುತ್ತಿದೆ. ಕಲ್ಯಾಣ ಮಹಾಮನೆಯ ಒಂದೂವರೆ ಎಕರೆ ಜಾಗದಲ್ಲಿ ಮೂರ್ತಿ ಸ್ಥಾಪನೆ ಇತ್ಯಾದಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ನಿರ್ಧರಿಸಲಾಗಿದೆ’ ಎಂದರು.

ಕಲಬುರಗಿಯ ಸಾಹಿತಿ ಮಹಾಂತೇಶ ಕುಂಬಾರ ಮಾತನಾಡಿ, ‘ಶರಣೆ ದಾನಮ್ಮನವರು ಕಲ್ಯಾಣದಲ್ಲಿಯೇ ಜನ್ಮಪಡೆದು 12 ನೇ ವಯಸ್ಸಿನಲ್ಲಿ ತಂದೆಯೊಂದಿಗೆ ಬೇರೆಡೆ ವಲಸೆ ಹೋಗಿದ್ದರು. ಪುನಃ ಇಲ್ಲಿಗೆ ಬಂದು ಇದನ್ನು ಕಾರ್ಯಕ್ಷೇತ್ರವಾಗಿಸಿದರು. ಅವರಿಗೆ ಆಯುರ್ವೇದದ ಜ್ಞಾನ ಇದ್ದುದರಿಂದ ಧರ್ಮ ಕಾರ್ಯದೊಂದಿಗೆ ರೋಗಿಗಳನ್ನು ಉಪಚರಿಸುವ ಸೇವೆಯೂ ಕೈಗೊಂಡಿದ್ದರು’ ಎಂದರು.

ಪಂಡಿತ ಬಾಳೂರೆ, ರವಿ ಪಾಪಡೆ, ಸಿದ್ಧಾರ್ಥ ಲಿಂಗಾಯತ, ಮಲ್ಲಿಕಾರ್ಜುನ ಮಾತನಾಡಿದರು.

ಕಲ್ಯಾಣ ಕರ್ನಾಟಕ ಪ್ರತಿಷ್ಠಾನದ ಅಧ್ಯಕ್ಷ ಬಸವಕುಮಾರ ಸಪಾಟೀಲ ಅವರಿಗೆ ‘ಕಲ್ಯಾಣ ರತ್ನ ಪ್ರಶಸ್ತಿ’ ಮೈಸೂರಿನ ಶರಣು ವಿಶ್ವವಚನ ಫೌಂಡೇಶನ್ ಅಧ್ಯಕ್ಷ ವಚನಕುಮಾರ ಸ್ವಾಮಿ ಅವರಿಗೆ ‘ವರದಾನಿ ಶರಣೆ ದಾನಮ್ಮದೇವಿ ಪ್ರಶಸ್ತಿ’ ಹಾಗೂ ಪತ್ರಕರ್ತ ಮಾರ್ತಂಡ ಜೋಶಿ ಅವರಿಗೆ ‘ಪತ್ರಿಕಾ ಧರ್ಮರತ್ನ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಬಸವಪ್ರಭು ಸ್ವಾಮೀಜಿ ಬರೆದ ‘ಜೀವನದರ್ಶನ’ ಗ್ರಂಥ ಬಿಡುಗಡೆ ಮಾಡಲಾಯಿತು.

ಹುಲಸೂರ ಶಿವಾನಂದ ಸ್ವಾಮೀಜಿ, ಮುಖಂಡರಾದ ಸತೀಶಕುಮಾರ ಮುಳೆ, ಯುವರಾಜ ಭೆಂಡೆ, ದಿಲೀಪ ಶಿಂಧೆ, ಸುಭಾಶ್ಚಂದ್ರ ನಾಗರಾಳೆ, ವಿಜಯಕುಮಾರ ಪಾಟೀಲ, ವೈಜನಾಥ ಸಜ್ಜನಶೆಟ್ಟಿ, ನೀಲಕಂಠಪ್ಪ ಪಾಪಡೆ, ಸಂಗಮೇಶ ತೊಗರಖೇಡೆ, ಜಯಪ್ರಕಾಶ ಸದಾನಂದೆ, ನಾಗಶೆಟ್ಟಿ ಪಾಟೀಲ, ಗಿರಿಜಾ ಸಿದ್ದಣ್ಣ, ಸುಮಿತ್ರಾ ದಾವಣಗಾವೆ, ಲಕ್ಷ್ಮಣರಾವ್ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260405-33-595559470

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.