ಬಸವಕಲ್ಯಾಣ: ನಗರಕ್ಕೆ ಸಮೀಪದ ಶಿವಪುರ ಗ್ರಾಮದ ಕೆರೆ ದಂಡೆಯಲ್ಲಿನ ಓಣಿಗಳಲ್ಲಿ ಮತ್ತು ಇತರೆ ಕೆಲ ಕಡೆ ಚರಂಡಿಗಳಿಲ್ಲ. ಹೊಲಸು ನೀರು ರಸ್ತೆಗಳಲ್ಲಿ ಹರಡಿ ಕೆಸರು ಮಯವಾಗಿರುತ್ತದೆ. ಮಳೆ ಬಂದಾಗ ಮನೆ ಅಂಗಳಗಳಲ್ಲಿ ಮಿನಿ ಕೆರೆಗಳು ಸೃಷ್ಟಿ ಆಗುತ್ತವೆ.

ನಾರಾಯಣಪುರ ಪಂಚಾಯಿತಿ ವ್ಯಾಪ್ತಿಯಲ್ಲಿ ಶಿವಪುರ ಗ್ರಾಮವಿದೆ. ನಾರಾಯಣಪುರ ಮತ್ತು ಶಿವಪುರವನ್ನು ಬಸವಕಲ್ಯಾಣ ನಗರಸಭೆ ವ್ಯಾಪ್ತಿಗೆ ಒಳಪಡಿಸಬೇಕು ಎಂಬುದು ಅನೇಕ ದಿನಗಳ ಬೇಡಿಕೆ ಇದ್ದರೂ ಅದು ಈಡೇರಿಲ್ಲ. ಶಿವಪುರದ ಐತಿಹಾಸಿಕ ಸಿದ್ದೇಶ್ವರ ದೇವಸ್ಥಾನ ಮತ್ತು ಕೆರೆ ಬಸವಕಲ್ಯಾಣ ಅಭಿವೃದ್ಧಿ ಮಂಡಳಿ ಅಧೀನಕ್ಕೆ ತೆಗೆದುಕೊಂಡು ಜೀರ್ಣೋದ್ಧಾರ ಕೈಗೊಳ್ಳಬೇಕು ಎಂದು ಹಲವಾರು ಸಲ ಮನವಿ ಸಲ್ಲಿಸಿದ್ದರೂ ನಿರ್ಲಕ್ಷಿಸಲಾಗಿದೆ.

ವಾಲ್ಮೀಕಿ ವೃತ್ತದ ದಕ್ಷಿಣಕ್ಕಿರುವ ಓಣಿ ಸಾಕಷ್ಟು ಹದಗೆಟ್ಟಿದೆ. ಈ ವೃತ್ತದಿಂದ ಒಳ ಹೋಗಲು ಕಚ್ಚಾ ರಸ್ತೆಯಿದೆ. ಚರಂಡಿಗಳು ಸಹ ಇಲ್ಲ. ಹೀಗಾಗಿ ಮನೆ ಬಳಕೆಯ ನೀರು ರಸ್ತೆಗೆ ಬಂದು ಸಂಗ್ರಹಗೊಂಡು ದುರ್ನಾತ ಬೀರುತ್ತಿದೆ. ಸೊಳ್ಳೆ ಮತ್ತು ನೊಣಗಳ ಕಾಟ ಹೆಚ್ಚಿದೆ. ಮಕ್ಕಳು ಮತ್ತು ಮಹಿಳೆಯರು ನಡೆದುಕೊಂಡು ಹೋಗುವಾಗ ಕಾಲು ಜಾರಿ ಬಿದ್ದಿದ್ದರಿಂದ ಮೈಯೆಲ್ಲ ಕೆಸರು ಆಗುವುದರ ಜೊತೆಗೆ ಗಾಯಗಳಾಗಿವೆ.

ಶಾಲೆ ಹತ್ತಿರದಿಂದ ಹೋಗುವ ರಸ್ತೆಯಲ್ಲೂ ಒಂದೇ ಭಾಗದಲ್ಲಿ ಚರಂಡಿ ಇದೆ. ಬಸವೇಶ್ವರ ವೃತ್ತದಿಂದ ಉತ್ತರ ಭಾಗದ ಓಣಿಗಳಿಗೆ ಹೋಗುವ ರಸ್ತೆಯಲ್ಲೂ ಯಾವಾಗಲೂ ನೀರು ಹರಡಿರುತ್ತದೆ. ಗ್ರಾಮ ಪಂಚಾಯಿತಿಯಿಂದ ಅಭಿವೃದ್ಧಿ ಕೈಗೊಳ್ಳಬೇಕು ಎಂದು ಆಗ್ರಹಿಸಿ ಗ್ರಾಮ ಪಂಚಾಯಿತಿ ಪಿಡಿಒ ಮತ್ತು ಕಾರ್ಯದರ್ಶಿಗೆ ಅನೇಕ ಸಲ ಒತ್ತಾಯಿಸಿದ್ದರೂ ಲಕ್ಷ ವಹಿಸಿಲ್ಲ ಎಂದು ಗ್ರಾಮಸ್ಥರಾದ ವಿಜಯಕುಮಾರ ಪಾಟೀಲ ದೂರಿದ್ದಾರೆ.

ನಗರದಿಂದ ಇಲ್ಲಿಗೆ ಬರುವುದಕ್ಕೆ ಕಿರಿದಾಗಿರುವ ಮತ್ತು ಎತ್ತರದ ರಸ್ತೆಯಿದೆ. ಸಂಬಂಧಿತ ಇಲಾಖೆಯವರು ಈ ರಸ್ತೆಯಲ್ಲಿನ ತಗ್ಗುಗಳನ್ನು ತುಂಬಿದ್ದಾರಾದರೂ ಕಾಟಾಚಾರದ ಕೆಲಸ ನಡೆದಿದೆ. ಈ ರಸ್ತೆ ಅಗಲಗೊಳಿಸಬೇಕು ಎಂದು ಕೇಳಿಕೊಂಡರೂ ಸಂಬಂಧಿತರು ಕಿವಿಗೆ ಹಾಕಿಕೊಳ್ಳುತ್ತಿಲ್ಲ. ಕೆರೆಯೊಳಗಿನ ಸ್ಮಶಾನಭೂಮಿಗೆ ತಂತಿಬೇಲಿ ಹಾಕಿಸಬೇಕು ಎಂದರೂ ಯಾರೂ ಸ್ಪಂದಿಸುತ್ತಿಲ್ಲ ಎಂದು ಗ್ರಾಮಸ್ಥರು ಹೇಳುತ್ತಾರೆ.

ಸಿದ್ದೇಶ್ವರ ದೇವಸ್ಥಾನಕ್ಕೆ ಆವರಣಗೋಡೆ ನಿರ್ಮಿಸಬೇಕು. ಎದುರಿನ ಕೆರೆಯಲ್ಲಿ ಮುಳ್ಳುಕಂಟೆಗಳು, ಹುಲ್ಲು ಬೆಳೆದಿದೆ. ಹೂಳು ತುಂಬಿದ್ದರಿಂದ ಸಾಕಷ್ಟು ನೀರು ಸಂಗ್ರಹಗೊಳ್ಳುತ್ತಿಲ್ಲ. ಗ್ರಾಮಸ್ಥರು ಇದರಲ್ಲಿ ಕಸಕಡ್ಡಿ ಬೀಸಾಡುತ್ತಿರುವುದರಿಂದ ತಿಪ್ಪೆಯಂತಾಗಿದ್ದು ಇನ್ನೂ ಕೆಲ ವರ್ಷಗಳಲ್ಲಿ ಇದು ಮುಚ್ಚಿಯೂ ಹೋಗಬಹುದು. ಈ ಕಾರಣ ತಕ್ಷಣವೇ ಹೂಳು ತೆಗೆಯಬೇಕು. ದೋಣಿ ವಿಹಾರಕ್ಕೆ ಇಲ್ಲಿನ ಪರಿಸರ ಅನುಕೂಲಕರ ಆಗಿರುವುದರಿಂದ ಹೆಚ್ಚಿನ ನೀರು ಸಂಗ್ರಹಿಸಿ ಈ ವ್ಯವಸ್ಥೆಯೂ ಕೈಗೊಳ್ಳಬೇಕು ಎಂಬುದು ಸಹ ಊರಿನ ಜನರ ಆಗ್ರಹವಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-33-1627592053

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.