ಬಸವಕಲ್ಯಾಣ: ತಾಲ್ಲೂಕಿನಲ್ಲಿ ಮುಂಗಾರು ಬಿತ್ತನೆಗೆ ಕೈಗೊಳ್ಳುವ ಸಿದ್ಧತೆ ಅಂತಿಮಗೊಂಡಿದ್ದು ಮೃಗಶಿರಾ ಮಳೆ ಬರುವುದೇ ತಡ ಜಮೀನಿನಲ್ಲಿ ಬೀಜ ಚೆಲ್ಲಬೇಕು ಎಂಬ ಧಾವಂತದಲ್ಲಿ ರೈತಾಪಿ ವರ್ಗ ಇದ್ದಂತಿದೆ. ಸೋಯಾ ಅವರೆ ಬೀಜಕ್ಕೆ ಅಧಿಕ ಬೇಡಿಕೆಯಿದೆ.

ಈ ಸಲ ಅಧಿಕಮಾಸ (ಧೊಂಡ್ಯಾ ತಿಂಗಳು) ಬಂದಿದೆ. ಹೀಗಾಗಿ ಈ ತಿಂಗಳಲ್ಲಿ ಕೌಟುಂಬಿಕ ಕಾರ್ಯಕ್ರಮ ನಡೆಸಬಾರದು ಎಂಬ ಸಂಪ್ರದಾಯವಿದೆ. ಹೀಗಾಗಿ ಕಳೆದ ಹದಿನೈದು ದಿನಗಳಿಂದ ಮದುವೆ ಇತ್ಯಾದಿ ಯಾವುದೇ ಕಾರ್ಯಕ್ರಮಗಳು ಇದ್ದಿರಲಿಲ್ಲವಾದ್ದರಿಂದ ರೈತರೆಲ್ಲ ಕೃಷಿ ಚಟುವಟಿಕೆಗಳ ಕಡೆಯೇ ಲಕ್ಷ್ಯ ಕೇಂದ್ರೀಕರಿಸಿದ್ದರು. ನೇಗಿಲು, ಕುಂಟೆ ಹೊಡೆದು ಜಮೀನು ಹದಮಾಡಿದ್ದಾರೆ. ಕಸಕಡ್ಡಿ ಆಯ್ದು ತೆಗೆಯಲಾಗಿದೆ. ತಿಪ್ಪೆಗೊಬ್ಬರ ಹೊಲದಲ್ಲಿ ಹರಡಿ ಬಿತ್ತನೆ ಪೂರ್ವದ ಕೃಷಿ ಚಟುವಟಿಕೆಗಳನ್ನು ಮುಗಿಸಲಾಗಿದೆ.

ತಾಲ್ಲೂಕಿನ ಸರಹದ್ದಿನಲ್ಲಿರುವ ಮುಲ್ಲಾಮಾರಿ ಮೇಲ್ದಂಡೆ ಯೋಜನೆಯ ಜಲಾಶಯ ಮತ್ತು ಬೆಣ್ಣೆತೊರೆ ನದಿಯ ಬ್ಯಾರೇಜ್ಗಳಿಂದ ಕೆಲ ಊರುಗಳಿಗೆ ಮಾತ್ರ ಅನುಕೂಲ ಆಗಿದ್ದು ಉಳಿದೆಡೆ ಮಳೆ ಆಧಾರಿತ ಕೃಷಿಯನ್ನೇ ರೈತರು ಅವಲಂಬಿಸಿದ್ದಾರೆ. ತೊಗರಿಯ ನಾಡು ಕಲಬುರ್ಗಿಯ ಪಕ್ಕದ ಈ ತಾಲ್ಲೂಕಿನಲ್ಲೂ ಮೊದಲು ತೊಗರಿ ಬೆಳೆಯುವ ವಾಡಿಕೆಯಿತ್ತು. ಕೆಲ ವರ್ಷಗಳಿಂದ ಸೋಯಾ ಅವರೆ ಬಿತ್ತನೆ ಕ್ಷೇತ್ರ ಅಧಿಕವಾಗಿದೆ. ಎಣ್ಣೆಕಾಳು ಬೆಳೆಯುವ ಕ್ಷೇತ್ರ 46815 ಹೆಕ್ಟೇರ್ ಗಳಷ್ಟಿದ್ದು ಅದರಲ್ಲಿ ಸೋಯಾ ಅವರೆ ಬಿತ್ತನೆ ಕ್ಷೇತ್ರವೇ 46500 ಹೆಕ್ಟೇರ್ ನಷ್ಟಿದೆ.

ಬೇಸಿಗೆಯ ಬಿಸಿಲು ಎಂದಿಲ್ಲದಂತೆ ಪ್ರಖರವಾಗಿತ್ತು. ಆದರೂ, ಹಿಂದಿನ ವರ್ಷ ಮಳೆ ಅಧಿಕ ಪ್ರಮಾಣದಲ್ಲಿ ಸುರಿದಿದ್ದರಿಂದ ನೀರಿನ ಅಭಾವ ಕಾಡಲಿಲ್ಲ. ಚುಳಕಿನಾಲಾ ಜಲಾಶಯ ಹಾಗೂ ಮುಲ್ಲಾಮಾರಿ ಮೇಲ್ದಂಡೆ ಯೋಜನೆಯ ಖೇರ್ಡಾ (ಬಿ) ಜಲಾಶಯ, ತ್ರಿಪುರಾಂತ ಕೆರೆ, ಬೆಟಬಾಲ್ಕುಂದಾ ಕೆರೆ, ಮೋರಖಂಡಿ ಮತ್ತು ತಳಭೋಗ ಕೆರೆಗಳಲ್ಲಿ ಇನ್ನೂ ಅರ್ಧಕ್ಕಿಂತ ಹೆಚ್ಚಿನ ನೀರಿನ ಸಂಗ್ರಹವಿದೆ. ಬಾವಿ, ಕೊಳವೆ ಬಾವಿಗಳು ಸಹ ಬತ್ತಿಲ್ಲ. ಹೀಗಾಗಿ ಅಲ್ಪಸ್ವಲ್ಪ ಮಳೆ ಸುರಿದರೂ ಬಿತ್ತನೆ ಕೈಗೊಂಡು ಮುಂದೆ ಮಳೆ ಕೆಲಕಾಲ ಕೈಕೊಟ್ಟರೂ ಬಾವಿಗಳ ನೀರು ಉಪಯೋಗಿಸಬಹುದು ಎಂಬ ಯೋಚನೆ ಇದೆ ಎಂದು ಅನೇಕ ಕೃಷಿಕರು ಹೇಳಿದ್ದಾರೆ.

‘ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜದ ಅಭಾವವಿಲ್ಲ. ಗ್ರಾಮಗಳಲ್ಲಿ ಬೀಜ ವಿತರಿಸಲಾಗುತ್ತಿದ್ದು ರೈತ ಸಂಪರ್ಕ ಕೇಂದ್ರಗಳಲ್ಲಿ ನಂತರದಲ್ಲಿ ವಿತರಣಾ ಕಾರ್ಯ ನಡೆಯಲಿದೆ. ಈ ಕಾರಣ ಬಸವಕಲ್ಯಾಣ, ಕೊಹಿನೂರ ಕೇಂದ್ರಗಳಲ್ಲಿ ಬೀಜ ವಿತರಿಸಲಾಗಿಲ್ಲ’ ಎಂದು ಸಹಾಯಕ ಕೃಷಿ ನಿರ್ದೇಶಕ ಗೌತಮ ಹೇಳಿದ್ದಾರೆ.

‘ಖಾಸಗಿ ಕೇಂದ್ರಗಳಿಂದ ಬೀಜ, ರಸಗೊಬ್ಬರ ಖರೀದಿಸುವವರು ಅಧಿಕೃತ ಬಿಲ್ ಪಡೆದುಕೊಳ್ಳಬೇಕು. ನಿಗದಿಗಿಂತ ಹೆಚ್ಚಿನ ಹಣ ಪಡೆದರೆ ಕೃಷಿ ಇಲಾಖೆ ಕಚೇರಿಗೆ ದೂರು ಸಲ್ಲಿಸಬೇಕು’ ಎಂದು ಸಹ ಎಚ್ಚರಿಸಿದ್ದಾರೆ.

ಬಿತ್ತನೆ ಬೀಜಗಳ ವಿತರಣೆ ಆರಂಭಗೊಂಡಿದೆ. ನೂಕುನುಗ್ಗಲು ಆಗಬಾರದು ಎಂಬ ಕಾರಣಕ್ಕೆ ಪ್ರಥಮ ಹಂತದಲ್ಲಿ ಗ್ರಾಮಗಳ ವ್ಯಾಪ್ತಿಯಲ್ಲಿ ಬೀಜ ಕೊಡಲಾಗುತ್ತಿದೆ
ಗೌತಮ ಕೃಷಿ ಸಹಾಯಕ ನಿರ್ದೇಶಕ

ಬಿತ್ತನೆಗೆ ಹೊಲಗಳಲ್ಲಿ ನೇಗಿಲು ಕುಂಟೆ ಹೊಡೆದು ಸಿದ್ಧತೆ ಮಾಡಿಕೊಳ್ಳಲಾಗಿದೆ. ಅನೇಕ ರೈತರು ಸೋಯಾ ಅವರೆ ಮತ್ತಿತರೆ ಬೀಜಗಳನ್ನೂ ಖರೀದಿಸಿದ್ದಾರೆ
ಪ್ರಶಾಂತ ಲಕಮಾಜಿ ಕೊಹಿನೂರ ಗ್ರಾಮದ ರೈತ

ಬಸವಕಲ್ಯಾಣ ತಾಲ್ಲೂಕಿನಲ್ಲಿ ಬಿತ್ತನೆ ಗುರಿ ಬೆಳೆ;ವಿಸ್ತೀರ್ಣ(ಹೆಕ್ಟೇರ್) ಸೋಯಾ ಅವರೆ;46500 ತೊಗರಿ;35600 ಉದ್ದು;3300 ಹೆಸರು;4700 ಮುಂಗಾರು ಹಂಗಾಮಿಗೆ ಕೃಷಿ ಇಲಾಖೆ ತಯಾರಿ ಬೀಜದ ದಾಸ್ತಾನು;15450 ಕ್ವಿಂಟಾಲ್ ರೈತ ಸಂಪರ್ಕ ಕೇಂದ್ರಗಳು;6 ಹೆಚ್ಚುವರಿ ಮಾರಾಟ ಕೇಂದ್ರಗಳು;20

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.