ಬಸವಕಲ್ಯಾಣ: ‘ನಗರದ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದ್ದು ಹಣ ಪಡೆಯುವುದಕ್ಕೆ ದೊಡ್ಡ ಬಾಕ್ಸ್ ಇಟ್ಟಿರುತ್ತಾರೆ. ಈ ಬಗ್ಗೆ ಶೀಘ್ರದಲ್ಲಿ ವಿಡಿಯೊ ವೈರಲ್ ಮಾಡಲಿದ್ದೇನೆ’ ಎಂದು ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಆರೋಪಿಸಿದ್ದಾರೆ.

ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ‘ನಗರಸಭೆ ಸಿಬ್ಬಂದಿಯವರಿಗೆ ಅನೇಕ ತಿಂಗಳುಗಳಿಂದ ವೇತನ ನೀಡಲಾಗಿಲ್ಲ. ಎಷ್ಟೇ ಹೇಳಿದರೂ ಈ ಬಗ್ಗೆ ಸಂಬಂಧಿತರು ಕ್ರಮ ತೆಗೆದುಕೊಂಡಿಲ್ಲ. ಬೇಸಿಗೆ ಇದ್ದರೂ ಶಾಸಕರು ನೀರಿನ ಸಮಸ್ಯೆಯ ಚರ್ಚೆಗೆ ಸಭೆ ನಡೆಸಿಲ್ಲ. ನಗರದ ದೊಡ್ಡದಾಗಿರುವ ಮತ್ತು ಐತಿಹಾಸಿಕವಾದ ತ್ರಿಪುರಾಂತ ಕೆರೆ ಒಡೆದಿದ್ದರೂ ಇದುವರೆಗೆ ದುರುಸ್ತಿ ಕೈಗೊಳ್ಳಲಾಗಿಲ್ಲ. ಸ್ಥಳೀಯ ನಗರ ಯೋಜನಾ ಪ್ರಾಧಿಕಾರವನ್ನು ನಗರಾಭಿವೃದ್ಧಿ ಪ್ರಾಧಿಕಾರವನ್ನಾಗಿ ಮೇಲ್ದರ್ಜೆಗೆ ಏರಿಸುವುದಕ್ಕೆ ಯಾರೂ ಪ್ರಯತ್ನಿಸುತ್ತಿಲ್ಲ’ ಎಂದರು.

‘ನಗರದ ಬಸವಣ್ಣನವರ ಪರುಷಕಟ್ಟೆಗಾಗಿ ಶಾಸಕರು ₹2.50 ಕೋಟಿ ಒದಗಿಸುತ್ತೇನೆ ಎಂದಿದ್ದರು. ಆ ಹಣ ಎಲ್ಲಿ ಹೋಯಿತು. ಪರುಷಕಟ್ಟೆ ಅಭಿವೃದ್ಧಿಗೆ ಇದುವರೆಗೆ ವಿವಿಧ ಮೂಲಗಳಿಂದ ಬಿಡುಗಡೆಯಾದ ಅನುದಾನ, ಅಲ್ಲಿ ಏನೇನು ಕೆಲಸ ನಡೆದಿದೆ ಎಂಬುದರ ಬಗ್ಗೆ ಹಾಗೂ ಅಲ್ಲಿನ ಮೊದಲಿನ ಕಟ್ಟಡ ತೆರವುಗೊಳಿಸಿ ಬರೀ ಬಟ್ಟೆಯ ಶೆಡ್ ಹಾಕುವುದಕ್ಕೆ ಯಾರು ಯಾರಿಗೆ ಅನುಮತಿ ನೀಡಿದರು ಎಂಬುದರ ಕುರಿತು ಪೂರ್ಣ ಮಾಹಿತಿಯನ್ನು ಶಾಸಕರು ಜನತೆಯ ಎದುರಿಗೆ ಬಿಚ್ಚಿಡಬೇಕು. 10 ಎಕರೆಯಲ್ಲಿ ನಿರ್ಮಿಸುತ್ತಿರುವ ಶಿವಸೃಷ್ಟಿಯ ನೀಲನಕ್ಷೆ ಜನರೆದುರಿಗೆ ಪ್ರದರ್ಶಿಸಬೇಕು' ಎಂದು ಆಗ್ರಹಿಸಿದರು.

‘ವಿಜಯಸಿಂಗ್ ಅವರು ಇಲ್ಲಿನ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಆಗಿದ್ದು ಶಾಸಕರು ಅವರ ಬಗ್ಗೆಯಾಗಲಿ, ಸಿದ್ದರಾಮಯ್ಯ, ಖರ್ಗೆ ಅವರ ಕುರಿತಾಗಲಿ ಏನೇ ಇಲ್ಲಸಲ್ಲದನ್ನು ಮಾತನಾಡಿದರೂ ಅವರು ಉತ್ತರಿಸುವುದೇ ಇಲ್ಲ. ಕಾಂಗ್ರೆಸ್ ಕಾರ್ಯಕರ್ತರು ಸಹ ಸುಮ್ಮನಿರುತ್ತಾರೆ. ಇದರಿಂದಾಗಿ ಕಾಂಗ್ರೆಸ್- ಬಿಜೆಪಿ ಮಧ್ಯೆ ಒಳ ಒಪ್ಪಂದವಾಗಿದೆಯೇ ಎಂಬ ಸಂಶಯ ಬರುವಂತಾಗಿದೆ. ಶೀಘ್ರದಲ್ಲಿ ಎಚ್.ಡಿ.ದೇವೇಗೌಡ ಮತ್ತು ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಇಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆ ನಡೆಯಲಿದೆ. ಬಿಜೆಪಿ- ಜೆಡಿಎಸ್ ಮಧ್ಯೆ ಹೊಂದಾಣಿಕೆ ಇದ್ದು ಜೆಡಿಎಸ್ ಗಾಗಿ ಈ ವಿಧಾನಸಭಾ ಕ್ಷೇತ್ರ ಬಿಟ್ಟುಕೊಡಬೇಕು ಎಂದು ಒತ್ತಾಯಿಸಲಾಗುತ್ತದೆ’ ಎಂದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260503-33-364084408

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.