ಬಸವಕಲ್ಯಾಣ: ನಗರದ ಬಸವೇಶ್ವರ ದೇವಸ್ಥಾನದ ಜಾತ್ರೆ ಅಂಗವಾಗಿ ಭಾನುವಾರ ಉಚಿತ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರ ಜರುಗಿತು.

ನರರೋಗದಂಥ ಗಂಭೀರ ಕಾಯಿಲೆಗೆ ಸಂಬಂಧಿಸಿದಂತೆ ಹೆಚ್ಚಿನವರು ತಪಾಸಣೆ ಮಾಡಿಸಿಕೊಂಡರು. ಸೊಲ್ಲಾಪುರದ ವಳಸಂಗಕರ್ ಆಸ್ಪತ್ರೆಯ ಡಾ.ಅಶ್ವಿನ್ ವಳಸಂಗಕರ್ ಅವರಂಥ ಪ್ರಸಿದ್ಧ ನರರೋಗ ತಜ್ಞರು ತಪಾಸಣೆ ನಡೆಸಿದ್ದರಿಂದ ಸಹಜವಾಗಿ ಇಂಥವರ ಸಂಖ್ಯೆ ಹೆಚ್ಚಿತು.

ನರರೋಗ 109, ಹೃದಯಬೇನೆ 38, ಮೂತ್ರಪಿಂಡ 16, ಕೀಲುಮೂಳೆ ಸಮಸ್ಯೆ 85 ಹಾಗೂ ಇತರೆ ರೋಗಗಳಿಂದ ಬಳಲುತ್ತಿದ್ದ ನೂರಾರು ಜನ ತಪಾಸಣೆ ಮಾಡಿಸಿಕೊಂಡರು. 94 ಜನರು ರಕ್ತದಾನ ಮಾಡಿದರು.

ಶಿಬಿರ ಉದ್ಘಾಟಿಸಿ ಮಾತನಾಡಿದ ಸಿದ್ದಬಸವ ಕಬೀರ ಸ್ವಾಮೀಜಿ, ‘ವೈದ್ಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ’ ಎಂದರು.

ಡಾ.ಅಶ್ವಿನ್ ವಳಸಂಗಕರ್ ಮಾತನಾಡಿ, ‘ಬಸವಣ್ಣನವರ ಕಾರ್ಯಕ್ಷೇತ್ರವಾದ ಕಲ್ಯಾಣ ನನಗೆ ಅತ್ಯಂತ ಗೌರವದ ಪುಣ್ಯತಾಣವಾಗಿದೆ. ಇಲ್ಲಿನ ಶಿಬಿರದಲ್ಲಿ ಸೇವೆ ಮಾಡಿರುವುರು ಸಂತಸ ತಂದಿದೆ’ ಎಂದರು.

ಡಾ.ಶಂಕರಗೌಡ ಹೊಸಗೌಡ್ರು, ಡಾ.ಪ್ರವೀಣಕುಮಾರ ಮಹೇಂದ್ರಕರ, ಡಾ.ಜಿ.ಎಸ್.ಭುರಳೆ, ಬಸವೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಅನಿಲಕುಮಾರ ರಗಟೆ, ಬಸವರಾಜ ಬಾಲಿಕಿಲೆ, ಜ್ಯೋತಿ ತೂಗಾವೆ ಮಾತನಾಡಿದರು.

ಬಸವೇಶ್ವರ ದೇವಸ್ಥಾನ ವಿಶ್ವಸ್ಥ ಸಮಿತಿ ಅಧ್ಯಕ್ಷ ಶಶಿಕಾಂತ ದುರ್ಗೆ, ಮಲ್ಲಿಕಾರ್ಜುನ ಕುರಕೋಟೆ, ಜಗನ್ನಾಥ ಖೂಬಾ, ಅಶೋಕ ನಾಗರಾಳೆ, ಸುನಿಲ ರಾಯವಾಡೆ ಉಪಸ್ಥಿತರಿದ್ದರು. ವೈದ್ಯರಾದ ಡಾ.ನಾಗರಾಜ ಕೋಡ್ಲಿ, ಡಾ.ಕೈಲಾಸ ಬನ್ನಾಳೆ, ಡಾ.ಶ್ರೀನಿವಾಸ ಕಳ್ಳಿಗುಡ್ಡ, ಡಾ.ಅಜಯ ಕುರಕೋಟೆ, ಡಾ.ಸದಾನಂದ ಪಾಟೀಲ, ಡಾ.ಪೃಥ್ವಿರಾಜ ಬಿರಾದಾರ, ಡಾ.ಸಂದೀಪ ರಂಗದಾಳ, ಡಾ.ಧನರಾಜ ಚಂದನಕೇರೆ, ಡಾ.ಶರಣ ಸುಲೇಪೆಟ್, ಡಾ.ಶ್ರೀಧರ, ಡಾ.ಸ್ಮಿತಾ ಕಳ್ಳಿಗುಡ್ಡ ರೋಗಿಗಳ ತಪಾಸಣೆ ನಡೆಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260413-33-735897828

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.