ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲಾ ಮಕ್ಕಳ ದತ್ತು ಪಡೆದ ಶಿಕ್ಷಕರು

ಇಲ್ಲಾಳದ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಆದರ್ಶ
Last Updated 23 ಜೂನ್ 2022, 4:07 IST
ಅಕ್ಷರ ಗಾತ್ರ

ಬಸವಕಲ್ಯಾಣ: ತಾಲ್ಲೂಕಿನ ಇಲ್ಲಾಳದ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರು ಒಂದೊಂದು ತರಗತಿಯ ಮಕ್ಕಳನ್ನು ದತ್ತು ಪಡೆದು ಅವರ ಶೈಕ್ಷಣಿಕ ಖರ್ಚನ್ನು ಭರಿಸಲು ನಿರ್ಧರಿಸಿದ್ದಾರೆ.

ಶಾಲೆಯಲ್ಲಿ ನಡೆದ ದತ್ತು ಕಾರ್ಯಕ್ರಮದಲ್ಲಿ ಆರ್ಥಿಕವಾಗಿ ಹಿಂದುಳಿದ ಮತ್ತು ಕಲಿಕೆಯಲ್ಲಿ ಹಿಂದೆ ಇರುವಂತಹ ಮಕ್ಕಳನ್ನು ದತ್ತು ಪಡೆಯಲಾಯಿತು.

ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಪುಂಡಲೀಕ್ ಬಸನಾಯಕ ಮಾತನಾಡಿ,‘ದತ್ತು ಪಡೆಯುವುದು ಮತ್ತು ದಾನ ನೀಡುವುದು ಉತ್ತಮ ಕಾರ್ಯ. ಹಿಂದಿನ ಕಾಲದಲ್ಲಿ ತೋಳ್ಬಲ ಶ್ರೇಷ್ಠವಾಗಿತ್ತು. ಆದರೆ, ಇಂದು ಜ್ಞಾನಬಲದಿಂದ ಏನು ಬೇಕಾದರೂ ಸಾಧಿಸಬಹುದು’ ಎಂದು ಅವರು ಹೇಳಿದರು.

ರೇಣುಕಾ ಪಾಟೀಲ ಮಾತನಾಡಿ, ‘ಪರಸ್ಪರ ಸಹಕಾರದಿಂದ ಮಾತ್ರ ಸರ್ವರ ಅಭಿವೃದ್ಧಿ ಸಾಧ್ಯ. ಶೈಕ್ಷಣಿಕವಾಗಿ ಪ್ರಗತಿ ಹೊಂದಿದರೆ ಮಾತ್ರ ಎಲ್ಲರೂ ಮುಂದೆ ಬರುತ್ತಾರೆ’ ಎಂದರು.

ರಾಮಶೆಟ್ಟಿ, ವಿಜಯಲಕ್ಷ್ಮಿ ಮಾತನಾಡಿದರು.

ಸಿ.ಆರ್.ಪಿ ಬಾಲಕೃಷ್ಣ ಪಾಟೀಲ, ಮುಖ್ಯಶಿಕ್ಷಕ ಆರ್.ಬಿ.ಹಣಮಂತ, ಮಹಾದೇವ ಮದಲವಾಡಾ, ಶಾಂತಾಬಾಯಿ, ಶಶಿ ಇಲ್ಲಾಳ ಪಾಲ್ಗೊಂಡಿದ್ದರು. ಅಂಜಪ್ಪ ಸ್ವಾಗತಿಸಿದರು.

ರಾಮಚಂದ್ರ ವಂದಿಸಿದರು. ಪಾಲಕರು, ಗಣ್ಯರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT