ಬಸವಕಲ್ಯಾಣ: ನಗರ ಮತ್ತು ಸುತ್ತಲಿನ ಗ್ರಾಮಗಳ ವ್ಯಾಪ್ತಿಯಲ್ಲಿ ಬುಧವಾರ ಬಿರುಗಾಳಿ, ಆಲಿಕಲ್ಲು ಸಹಿತ ಮಳೆ ಸುರಿದಿದ್ದು ಕಾರ್ಮೋಡ ಕವಿದಿದ್ದರಿಂದ ಹಗಲಲ್ಲೇ ಕತ್ತಲು ಆವರಿಸಿತ್ತು. ಅನೇಕ ಮರಗಳು ಧರೆಗುರುಳಿದವು.

ಬೆಳಿಗ್ಗೆ ಪ್ರಖರ ಬಿಸಿಲು ಬಿದ್ದಿತ್ತು. 8 ಗಂಟೆಗೆ ವಾತಾವರಣದಲ್ಲಿ ಬದಲಾಯಿತು. 80 ವರ್ಷದ ಪ್ರಭುಶೆಟ್ಟೆಪ್ಪ ಅವರು, ‘ಹಗಲ್ಲಿನಲ್ಲಿ ಈ ರೀತಿ ಒಮ್ಮೇಲೆ ಕತ್ತಲು ಕವಿದಿರುವುದು ನನ್ನ ಜೀವಮಾನದಲ್ಲಿ ಎಂದೂ ಕಂಡಿರಲಿಲ್ಲ’ ಎಂದು ಹೇಳಿದರು.

ಬಿರುಗಾಳಿ ಜೋರಾಗಿದ್ದರಿಂದ ನಗರ ಪ್ರದೇಶದಲ್ಲಿಯೇ 50ಕ್ಕೂ ಅಧಿಕ ಗಿಡ–ಮರಗಳು ನೆಲಕ್ಕುರುಳಿದವು. ಮುಖ್ಯ ರಸ್ತೆ ಮತ್ತು ಇತರೆ ಕಡೆ ಮರಗಳು ಕೆಳಗೆ ಬಿದ್ದಿದ್ದರಿಂದ ಮತ್ತು ಕೆಲವೆಡೆ ಕೊಂಬೆಗಳು ಕಡಿದು ಬಿದ್ದಿದ್ದರಿಂದ ವಾಹನ ಸಂಚಾರಕ್ಕೆ ಕೆಲಕಾಲ ಅಡೆತಡೆ ಆಯಿತು. ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದರಿಂದ ತೊಂದರೆ ಆಯಿತು.

ನಗರಸಭೆ ಹಾಗೂ ಇತರೆ ಸಂಬಂಧಿತ ಇಲಾಖೆಯವರು ತಕ್ಷಣ ಬಿದ್ದ ಮರಗಳನ್ನು ತೆರವುಗೊಳಿಸಿದರು. ಶಾಸಕ ಶರಣು ಸಲಗರ ಕೆಲವೆಡೆ ಎದುರು ನಿಂತುಕೊಂಡು ತೆರವಿಗೆ ಅಧಿಕಾರಿಗಳಿಗೆ ಸೂಚಿಸಿದರು.

ಮುಖ್ಯ ಬಸ್ ನಿಲ್ದಾಣ ರಸ್ತೆ, ಸೀತಾ ಕಾಲೊನಿ ಹನುಮಾನ ದೇವಸ್ಥಾನದ ಆವರಣ, ಟೂರಿಸ್ಟ್ ಲಾಡ್ಜ್ ಎದುರಲ್ಲಿ, ತಾಲ್ಲೂಕು ಪಂಚಾಯಿತಿ ಕಚೇರಿ ಆವರಣ, ತ್ರಿಪುರಾಂತ ಮಡಿವಾಳ ವೃತ್ತ, ಶರಣ ಹರಳಯ್ಯ ವೃತ್ತ ಮತ್ತಿತರೆಡೆ ಮರಗಳು ನೆಲಕ್ಕುರುಳಿದ್ದವು. ತಾಲ್ಲೂಕಿನ ಕಿಟ್ಟಾ, ನಾರಾಯಣಪುರ ಗ್ರಾಮದ ವ್ಯಾಪ್ತಿಯಲ್ಲಿಯೂ ಮರಗಿಡಗಳ ಕೊಂಬೆಗಳು ಕಡಿದು ಬಿದ್ದಿವೆ ಎಂದು ಗ್ರಾಮಸ್ಥರಾದ ಮಂಜುನಾಥರೆಡ್ಡಿ, ಮಾರುತಿ ಕಿಟ್ಟಾ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260528-33-1688960183

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.