ಬಸವಕಲ್ಯಾಣ (ಬೀದರ್ ಜಿಲ್ಲೆ): ನಗರದ ಬಸವೇಶ್ವರ ದೇವಸ್ಥಾನದ ಜಾತ್ರೆಯ ಕೊನೆಯ ದಿನ ಗುರುವಾರ ಬೆಳಿಗ್ಗೆ 6 ಗಂಟೆಗೆ ತೇರು ಎಳೆಯುವಾಗ ಗಾಲಿಗೆ ಸಿಲುಕಿ ಇಬ್ಬರಿಗೆ ಗಾಯಗಳಾಗಿದ್ದು ಒಬ್ಬರ ಸ್ಥಿತಿ ಗಂಭೀರವಾಗಿದೆ.

ಧನರಾಜ ಚಾಕೂರೆ ಮತ್ತು ರಿಷಬ್ ಎನ್ನುವವರ ಕಾಲುಗಳು ಕಲ್ಲಿನ ಗಾಲಿಯಲ್ಲಿ ಸಿಲುಕಿಕೊಂಡಿದ್ದರಿಂದ ಗಾಯಗಳಾಗಿವೆ. ತೇರು ಮುಂದಕ್ಕೆ ಸಾಗುವಾಗ ಇವರು ಆಯತಪ್ಪಿ ಬಿದ್ದಿದ್ದರಿಂದ ಗಾಲಿಗಳು ಕಾಲುಗಳ ಮೇಲಿನಿಂದ ಹೋಗಿವೆ.

ಧನರಾಜ ಎಂಬುವರ ಎರಡೂ ಕಾಲುಗಳ ಮೊಳಕಾಲಿನಿಂದ ಕೆಳಗಿನ ಭಾಗ ನುಜ್ಜುಗುಜ್ಜಾಗಿದೆ. ಹೀಗಾಗಿ ಸ್ಥಳದಲ್ಲಿ ರಕ್ತ ಚೆಲ್ಲಿದೆ. ಇವರನ್ನು ಬಸವಕಲ್ಯಾಣದ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ. ಇನ್ನೊಬ್ಬರನ್ನು ಇಲ್ಲಿಯೇ ಉಪಚರಿಸಲಾಗುತ್ತಿದೆ.

ತೇರು ಮುಂದಕ್ಕೆ ಎಳೆಯುವಾಗ ಈ ಘಟನೆ ಸಂಭವಿಸಿದ್ದರಿಂದ ಕೆಲಕಾಲ ತೇರನ್ನು ನಿಲ್ಲಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದಾಗ ಮತ್ತೆ ಹಿಂದಕ್ಕೆ ತಂದು ಮೊದಲಿನ ಸ್ಥಳದಲ್ಲಿ ನಿಲ್ಲಿಸಲಾಯಿತು. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದಾಗ ಪೊಲೀಸರ ಅಧಿಕಾರಿಗಳು ಭೇಟಿ ನೀಡಿದರು. ಜನಜಂಗುಳಿ ನೆರೆದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.