ಬಸವಕಲ್ಯಾಣ: ನಗರದ ಧರ್ಮಪ್ರಕಾಶ ಓಣಿಯಲ್ಲಿ ಐದಾರು ದಿನಕ್ಕೊಮ್ಮೆ ನಳಗಳಿಗೆ ನೀರು ಬಿಡುತ್ತಿದ್ದು ಇದರಿಂದ ನಿವಾಸಿಗಳು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಜಿಲ್ಲಾಧಿಕಾರಿಗಳಿಗೆ ಓಣಿ ನಿವಾಸಿ ಹಾಗೂ ಸಮಾಜ ಕಾರ್ಯಕರ್ತರಾದ ಧನರಾಜ ರಾಜೋಳೆ ದೂರು ಸಲ್ಲಿಸಿದ್ದಾರೆ.

‘ಇದು ಕೊಳಚೆ ಪ್ರದೇಶವಾಗಿದೆ. ಹೀಗಾಗಿ ಅನೇಕ ಮನೆಗಳಲ್ಲಿ ನಳಗಳಿಲ್ಲ. ಕೆಲವರು ಓಣಿಯಲ್ಲಿನ ಟ್ಯಾಂಕ್ಗೆ ಹೋಗಿ ನೀರು ತರುತ್ತಾರೆ. ಟ್ಯಾಂಕ್ ಕೂಡ ಒಂದೇ ಇದೆ. ಕೆಲವೊಂದು ಸಲ ವಿದ್ಯುತ್ ಸಮಸ್ಯೆಯಿಂದ ನೀರು ಬರುವುದಿಲ್ಲ. ಅನೇಕ ಸಲ ಬೇಕೆಂತಲೇ ಸರಿಯಾದ ಸಮಯಕ್ಕೆ ನೀರು ಬಿಡುವುದಿಲ್ಲ. ಬೆಳಿಗ್ಗೆ, ಮಧ್ಯಾಹ್ನ, ಮಧ್ಯರಾತ್ರಿ ಯಾವಾಗಬೇಕಾದರೂ ನೀರು ಬಿಡಲಾಗುತ್ತದೆ. ಇದರಿಂದ ತೀರ ಕಷ್ಟ ಅನುಭವಿಸಬೇಕಾಗಿದೆ’ ಎಂದು ದೂರಿದ್ದಾರೆ.

‘ಬೇಸಿಗೆ ಇರುವುದರಿಂದ ಹೆಚ್ಚಿನ ನೀರು ಬೇಕಾಗುತ್ತದೆ. ಆದರೆ, ಅಲ್ಪಸ್ವಲ್ಪ ಮಾತ್ರ ನೀಡು ಬಿಟ್ಟು ವಿದ್ಯುತ್ ಇಲ್ಲ ಎಂದು ಹಾಗೂ ಇತರೆ ಸಬೂಬು ಹೇಳಲಾಗುತ್ತದೆ’ ಎಂದಿದ್ದಾರೆ.

ಈ ಬಗ್ಗೆ ನಗರಸಭೆ ಆಯುಕ್ತರು ಹಾಗೂ ಇತರೆ ಸಂಬಂಧಿತರಿಗೆ ಸಾಕಷ್ಟು ಸಲ ಮನವಿ ಸಲ್ಲಿಸಿದ್ದರೂ ಪ್ರಯೋಜನ ಆಗಿಲ್ಲ. ಆದ್ದರಿಂದ ಜಿಲ್ಲಾಧಿಕಾರಿಗಳು ಸ್ವತಃ ಓಣಿಗೆ ಬಂದು ಪರಿಶೀಲನೆ ನಡೆಸಬೇಕು. ಸಮಸ್ಯೆಯನ್ನು ಶೀಘ್ರದಲ್ಲಿ ಬಗೆಹರಿಸಬೇಕು ಎಂದು ಒತ್ತಾಯಿಸಲಾಗಿದೆ. ಓಣಿಯ ಇತರರು ಸಹ ಮನವಿಪತ್ರದಲ್ಲಿ ಸಹಿ ಮಾಡಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260504-33-991181725

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.