ಚಿಟಗುಪ್ಪ (ಹುಮನಾಬಾದ್): ‘ಜಾತೀಯತೆ ತೊಡೆದು ಹಾಕಲು 12ನೇ ಶತಮಾನದಲ್ಲೇ ಆರಂಭಿಸಿದ ಬಸವಣ್ಣ ಅವರ ತತ್ವ, ಆದರ್ಶಗಳನ್ನು ಯುವ ಪೀಳಿಗೆ ಉಳಿಸಲು ಮುಂದಾಗಬೇಕು’ ಎಂದು ಬಸವಕಲ್ಯಾಣ ಅನುಭವ ಮಂಟಪ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ಹೇಳಿದರು.

ತಾಲ್ಲೂಕಿನ ರಾಂಪೂರ ಗ್ರಾಮದಲ್ಲಿ ವಿಶ್ವಗುರು ಬಸವಣ್ಣನವರ ಮೂರ್ತಿ ಅನಾವರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ದುಡಿಯುವವರೇ ಬೇರೆ, ಅವರ ದುಡಿತದ ಫಲವನ್ನು ಅನುಭವಿಸುವವರೇ ಬೇರೆಯಾಗಿದ್ದ ಕಾಲದಲ್ಲಿ ಬೆವರು ಸುರಿಸಿ ದುಡಿಯುವವರೇ ನಿಜವಾದ ಶರಣರು ವ್ಯಾಖ್ಯಾನಿಸುವ ಮೂಲಕ ದುಡಿದು ಉಣ್ಣುವುದನ್ನು ಸಮಾಜದ ಪ್ರತಿಯೊಬ್ಬ ವ್ಯಕ್ತಿಗೂ ಕಾಯಕ ಕಡ್ಡಾಯ ಮಾಡಿದ ಕೀರ್ತಿ ಬಸವಣ್ಣನವರಿಗೆ ಸಲ್ಲುತ್ತದೆ’ ಎಂದರು.

ಖೇಳಗಿ ಶಿವಲಿಂಗೇಶ್ವರ ಸ್ವಾಮೀಜಿ ಮಾತನಾಡಿ , ‘ಸರ್ವರೂ ಒಂದಾಗಿ ಗ್ರಾಮದಲ್ಲಿ ಮೂರ್ತಿ ಅನಾವರಣ ಮಾಡಿರುವುದು ಖುಷಿ ತಂದಿದೆ. ಇಂದು ನಿಮ್ಮೂರಿನ ಗ್ರಾಮದಲ್ಲಿ ಸಮಾನತೆಯ ಸಮಾಜವನ್ನು ನೋಡಲು ತುಂಬಾ ಹೆಮ್ಮೆ ಎನಿಸುತ್ತದೆ’ ಎಂದರು.

ಗಂಗಾಭಿಂಕಾ ಪಾಟೀಲ, ಇಂದುಮತಿ ಗಾರಂಪಳ್ಳಿ, ಸುರೇಶ ಮಾಶೆಟ್ಟಿ, ರೇವಪ್ಪಾ ಪಾಟೀಲ, ಮನೋಜಕುಮಾರ ಕಾಂಬಳೆ, ರಾಮಶೆಟ್ಟಿ ಮೂಲಗೆ, ದಯಾನಂದ ಪಾಟೀಲ, ರಾಮಶೆಟ್ಟಿ ಪಾಟೀಲ, ಜಗದೀಶ್ ಮೂಲಗೆ, ರಾಜಶೇಖರ ದೇವಣಿ, ರಮೇಶ ಮಾಶೆಟ್ಟಿ, ರಾಜಕುಮಾರ ನೆಲ್ವಾರೆ, ಅಮರ ಜೋಳಗೆಪ್ಪಾ, ಕಾಶಿನಾಥ ಗಿರಿಗಿರಿ, ಗಣಪತಿ ಗಿರಿಗಿರಿ, ಸೋಮು ಪಾಟೀಲ, ದಿಲೀಪಕುಮಾರ ಹೂಗಾರ, ರೇವಣ್ಣಪ್ಪಾ ಗಿರಿಗಿರಿ, ಪ್ರಕಾಶ ಮಾಶೆಟ್ಟಿ, ಅನಂದ ಪಾಟೀಲ, ಸದಾನಂದ ಪಾಟೀಲ, ಮಾಹಾಂತೇಶ ಮೂಲೆಗೆ, ವೀರಶೆಟ್ಟಿ ಹಡಪದ, ರಮೇಶ ಸಲಗರ,ಕರಬಸಪ್ಪ ಕಟಗಿ, ಬಂಡೆಪ್ಪಾ ರೇಖಳಗಿ, ಭೀಮಷಾ ಹಜ್ಜರಗಿ ಸೇರಿದಂತೆ ಇತರರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260515-33-2071446060

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.