ಬೀದರ್: ಮಾ. 15ರಿಂದ ನಗರದ ಬಿವಿಬಿ ಕಾಲೇಜಿನಲ್ಲಿ ಬೈಲೂರ ನಿಷ್ಕಲ ಮಂಟಪದ ನಿಜಗುಣಪ್ರಭು ಸ್ವಾಮೀಜಿ ಅವರು ‘ಭವ್ಯ ಭಾರತದ ಬಸವಣ್ಣ’ ಪ್ರವಚನ ನಡೆಸಿಕೊಡಲಿದ್ದು, ಅದನ್ನು ಯಶಸ್ವಿಗೊಳಿಸಲು ಒಕ್ಕೊರಲಿನ ಪ್ರಯತ್ನ ಮಾಡಬೇಕೆಂದು ನಗರದ ಬಸವಕೇಂದ್ರದಲ್ಲಿ ಮಂಗಳವಾರ ಸಂಜೆ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು.

ಎನ್ಎಸ್ಎಸ್ಕೆ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ ಮಾತನಾಡಿ, ವಚನ ಸಾಹಿತ್ಯ ಜಗತ್ತಿನ ಶ್ರೇಷ್ಠ ಸಾಹಿತ್ಯ. ಶರಣ ಸಂಸ್ಕೃತಿ ಉಳಿಸಿ ಬೆಳೆಸಲು ಪ್ರವಚನ ಸೂಕ್ತ ವೇದಿಕೆ ಎಂದರು.

ಬಸವಕೇಂದ್ರದ ಬೆಳ್ಳಿ ಮಹೋತ್ಸವದ ಅಂಗವಾಗಿ ತಿಂಗಳಿಡಿ ಪ್ರವಚನ ಹಮ್ಮಿಕೊಂಡಿರುವುದು ಶ್ಲಾಘನಾರ್ಹ ಕೆಲಸ. ನಿಜಗುಣಪ್ರಭು ಸ್ವಾಮೀಜಿ ಅತ್ಯಂತ ವೈಚಾರಿಕ, ವೈಜ್ಞಾನಿಕ ವಿಚಾರಗಳನ್ನು ಹೇಳುತ್ತಾರೆ. ಜಿಲ್ಲೆಯ ಪ್ರಗತಿಪರ ಚಿಂತಕರು, ವಿಚಾರವಾದಿಗಳು ಪ್ರವಚನಕ್ಕೆ ಆಗಮಿಸಿ ಯಶಸ್ವಿಗೊಳಿಸಬೇಕೆಂದು ಕೋರಿದರು.

ಇದೇ ವೇಳೆ ಭಿತ್ತಿಪತ್ರ, ಕರಪತ್ರಗಳನ್ನು ಬಿಡುಗಡೆಗೊಳಿಸಿದರು. ಹುಲಸೂರ ಗುರುಬಸವೇಶ್ವರ ಸಂಸ್ಥಾನ ಮಠದ ಶಿವಾನಂದ ಸ್ವಾಮೀಜಿ ಮಾತನಾಡಿ, ಜಿಲ್ಲೆಯಲ್ಲಿ ಶರಣ ಸಂಸ್ಕೃತಿ ಪಸರಿಸಲು ಬಸವ ಕೇಂದ್ರ ಸಾಕಷ್ಟು ಶ್ರಮಿಸಿದೆ ಎಂದರು.

ಡಾ. ರಜನೀಶ ವಾಲಿ, ಸಿದ್ದಯ್ಯ ಕಾವಡಿ ಮಠ, ರಾಜೇಂದ್ರಕುಮಾರ್ ಗಂದಗೆ, ಚಂದ್ರಕಾಂತ ಮಿರ್ಚೆ, ಶ್ರೀಕಾಂತ್ ಸ್ವಾಮಿ, ಶೀಲಾವತಿ ಶೀಲವಂತ, ಅರುಣಾ ಜಾಬಾ, ವಿದ್ಯಾ ಬಲ್ಲೂರ, ಕರುಣಾ ಶೆಟಕಾರ್, ಆರತಿ ಲಕ್ಕಶೆಟ್ಟಿ, ಶರಣಪ್ಪ ಮಿಠಾರೆ, ಸುರೇಶ್ ಚನಶೆಟ್ಟಿ, ನಾಗರಾಜ ಕರ್ಪೂರ್, ಪಂಪಾವತಿ ಪಾಟೀಲ, ಶ್ರೀದೇವಿ ಪಾಟೀಲ, ಶಿವಶಂಕರ್ ಟೋಕರೆ ಮತ್ತಿತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.