ಮಂಗಳವಾರ, ಫೆಬ್ರವರಿ 25, 2020
19 °C
ಬಸವ ಸೇವಾ ಪ್ರತಿಷ್ಠಾನದಿಂದ 204ನೇ ಬಸವ ಜೋತಿ ಕಾರ್ಯಕ್ರಮ

‘ಬಸವಣ್ಣನ ತತ್ವಗಳು ಜೀವನದಲ್ಲಿ ಅಳವಡಿಸಿಕೊಳ್ಳಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಮನಾಬಾದ್: ಬಸವಣ್ಣನವರ ತತ್ವ ಆದರ್ಶ ಮತ್ತು ಅವರ ವಿಚಾರಧಾರೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಸಮಾಜ ನಿರ್ಮಾಣಕ್ಕಾಗಿ ಶ್ರಮಿಸಬೇಕು ಎಂದು ಬಸವ ಸೇವಾ ಪ್ರತಿಷ್ಠಾನ ಡಾ.ಗಂಗಾಂಬಿಕೆ ಅಕ್ಕನವರು ಹೇಳಿದರು.

ಪಟ್ಟಣದ ಹೌಸಿಂಗ ಬೋರ್ಡ್ ಕಾಲೊನಿಯ ವೀರಶೈವ ಕಲ್ಯಾಣ ಮಂಟಪದಲ್ಲಿ ಬಸವಸೇವಾ ಪ್ರತಿಷ್ಠಾನದಿಂದ ಬುಧವಾರ ನಡೆದ 204ನೇ ಬಸವ ಜೋತಿ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಅಣ್ಣ ಬಸವಣ್ಣನವರು 12ನೇ ಶತಮಾನದಲ್ಲಿ ಶಿಕ್ಷಣದಿಂದ ವಂಚಿತರಾದ ತಳಸಮುದಾಯದ ಜನರಿಗೆ ಶರಣ ತತ್ವ ಮತ್ತು ಚಿಂತನಾ ಗೋಷ್ಠಿಗಳ ಮೂಲಕ ಶಿಕ್ಷಣದ ಜ್ಞಾನ ನೀಡಿದ್ದಾರೆ ಎಂದರು.

ಬಸವಣ್ಣನವರು ಲಿಂಗಾಯತ ಧರ್ಮ ಸ್ಥಾಪಿಸಿ ನಮಗೆ ನೀಡಿರುವಂತಹ ಅಮೂಲ್ಯವಾದ ವಚನ ಸಾಹಿತ್ಯದ ಮೌಲ್ಯಗಳನ್ನು ಜೀವನದಲ್ಲಿ ಪಾಲಿಸಿಕೊಂಡು ಬರಬೇಕು ಎಂದು ತಿಳಿಸಿದರು.

ಮಲ್ಲಿಕಾರ್ಜುನ ಸಂಗಮಕರ ಮಾತನಾಡಿ, ಜೀವನದಲ್ಲಿ ಬರುವಂತಹ ಸುಖ ಮತ್ತು ದುಃಖವನ್ನು ಪ್ರತಿಯೂಬ್ಬರು ಸಮಾನವಾಗಿ ಸ್ವೀಕರಿಸಬೇಕು. ವಚನ ಸಾಹಿತ್ಯ ಓದುವುದರ ಮೂಲಕ ಪರಿಹಾರ ಕಂಡುಕೊಳ್ಳಬೇಕು ಎಂದರು.

ಡಾ.ಸೋಮನಾಥ ಯಳವಾರ, ಬಸವತೀರ್ಥಪ್ಪ ಮಂಠಾಳೆ, ಶರಣಪ್ಪ ಚಿಮಕೊಡ, ಡಾ.ಎಸ್.ಎಸ್.ಕಲ್ಮಠ, ಸತೀಷ ಮಂಠಾಳೆ, ಅಶೋಕ ಮಠಪತಿ, ಅಶೋಕ ತುಪ್ಪದ ಇದ್ದರು. ಮಹಾದೇವ ಹವ್ಲಾದಾರ್ ಸ್ವಾಗತಿಸಿದರು. ಬಸವರಾಜ ಚಿಮ್ಮಕೊಡ ನಿರೂಪಿಸಿದರು, ಬಸವರಾಜ ರುದ್ರವಾಡಿ ವಂದಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)