ಭಾಲ್ಕಿ: ‘ಅಪ್ಪಟ ದೇಶಪ್ರೇಮಿ ಆಗಿದ್ದ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರನ್ನು ಯುವಕರು ತಮ್ಮ ನಿಜವಾದ ರೋಲ್ ಮಾಡೆಲ್ ಎಂದು ಸ್ವೀಕರಿಸಬೇಕು’ ಎಂದು ಹಿರೇಮಠದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಹೇಳಿದರು.

ತಾಲ್ಲೂಕಿನ ಕರಡ್ಯಾಳದ ಚನ್ನಬಸವೇಶ್ವರ ಗುರುಕುಲ ಶಿಕ್ಷಣ ಸಮುಚ್ಛಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಜಯಂತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಬಾಲ್ಯದಿಂದಲೇ ದೇಶಪ್ರೇಮ ಮೈಗೂಡಿಸಿಕೊಂಡು ಸ್ವಾತಂತ್ರ್ಯ ಸಂಗ್ರಾಮಕ್ಕೆ ಚಿಕ್ಕ ವಯಸ್ಸಿನಲ್ಲಿ ತಮ್ಮನ್ನು ಅರ್ಪಿಸಿಕೊಂಡು ಪ್ರಾಣತೆತ್ತ ಮಹಾನ್ ಹೋರಾಟಗಾರ ಭಗತ್ಸಿಂಗ್ ಅವರು ಒಬ್ಬ ವ್ಯಕ್ತಿಯಾಗಿರದೆ ಒಂದು ಶಕ್ತಿಯಾಗಿದ್ದರು ಎಂದು ಹೇಳಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಮಾಜ ಸದೃಢವಾಗಲು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಭಗತ್ಸಿಂಗ್ ಅವರ ಆದರ್ಶಗಳನ್ನು ಯುವ ಸಮೂಹ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಇಂದಿನ ಯುವಜನರಿಗೆ ತಮ್ಮ ತಂದೆ, ತಾಯಿ ಹೆಸರು ಹೊರತುಪಡಿಸಿ ಅಜ್ಜಿ, ತಾತ, ಮುತ್ತಾತರ ಹೆಸರು ಕೇಳಿದರೆ ಗೊತ್ತಿರುವುದಿಲ್ಲ. ಆದರೆ ಶೌರ್ಯ ಮತ್ತು ತ್ಯಾಗದ ಕಾರಣದಿಂದಾಗಿ ಭಗತ್ ಸಿಂಗ್ ಅವರ ಹೆಸರು ಇಂದಿಗೂ ಲಕ್ಷಾಂತರ ಯುವಜನರ ಮನದಲ್ಲಿ ನೆಲೆಸಿದೆ ಎಂದು ತಿಳಿಸಿದರು.

ಜಲಿಯನ್ ವಾಲಾಬಾಗ್ ಹತ್ಯಾಕಾಂಡದಿಂದ ಪ್ರೇರೇಪಿತರಾಗಿ ಸ್ವಾತಂತ್ರ್ಯಕ್ಕಾಗಿ ಹೋರಾಡಿ ತಮ್ಮ ಜೀವನವನ್ನು ದೇಶಕ್ಕೆ ಅರ್ಪಿಸಿದ ಭಗತ್ ಸಿಂಗ್ ಅವರನ್ನು 1931ರ ಮಾರ್ಚ್ 23ರಂದು ನೇಣಿಗೇರಿಸಲಾಯಿತು ಎಂದು ವಿವರಿಸಿದರು.

ಅನುಭವ ಮಂಟಪದ ಸಂಚಾಲಕ ಶಿವಾನಂದ ಸ್ವಾಮೀಜಿ, ವಿದ್ಯಾರ್ಥಿ ರೇಣುಕಾಚಾರ್ಯ ಮಾತನಾಡಿದರು.

ಪಿಯುಸಿ ಪ್ರಥಮ ವರ್ಷದ ವಿದ್ಯಾರ್ಥಿ ಸಾಹಿಲ್ ದೇಶ ಭಕ್ತಿಗೀತೆ ಹಾಡಿದರು. ಶಂಕರಲಿಂಗ ಸ್ವಾಮೀಜಿ, ನಿವೃತ್ತ ಎಂಜಿನಿಯರ್ ಸಿದ್ದಯ್ಯ ಕಾವಡಿಮಠ, ಅಧೀಕ್ಷಕ ಗಣಪತಿ ಭೂರೆ, ಬಿಎಸ್ಸಿ ಪ್ರಾಚಾರ್ಯ ಕಿರಣ ಸಜ್ಜನಶೆಟ್ಟಿ, ಉಪ ಪ್ರಾಚಾರ್ಯ ಸಿದ್ದರಾಮ ಗೊಗ್ಗಾ, ಲಚಮಾರೆಡ್ಡಿ, ರವಿ ಬಿರಾದಾರ, ಯಶವಂತ ಎಂ.ಭೋಸಲೆ, ಪ್ರಶಾಂತ ರೆಡ್ಡಿ, ಸಂದೀಪ ಬಿರಾದಾರ, ಮಧುಕರ್ ಗಾಂವಕರ್, ರಾಜಕುಮಾರ ಕಾದೇಪುರೆ ಸೇರಿದಂತೆ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.