ಭಾಲ್ಕಿ: ಪಟ್ಟಣದ ಚನ್ನಬಸವಾಶ್ರಮದಲ್ಲಿ ಶನಿವಾರ ಬಸವ ಜಯಂತಿ, ವಚನ ಜಾತ್ರೆ-2026, ಚನ್ನಬಸವ ಪಟ್ಟದ್ದೇವರ 27ನೇ ಸ್ಮರಣೋತ್ಸವ, ಬಸವಲಿಂಗ ಪಟ್ಟದ್ದೇವರ ಅಮೃತ ಮಹೋತ್ಸವ ಅಂಗವಾಗಿ ಆಯೋಜಿಸಿದ್ದ ಬೈಕ್ ಮತ್ತು ಕಾರ್ ರ್ಯಾಲಿಗೆ ಗುರುಬಸವ ಪಟ್ಟದ್ದೇವರ ನೇತೃತ್ವದಲ್ಲಿ ಯುವ ಮುಖಂಡ ಪ್ರಸನ್ನ ಖಂಡ್ರೆ ಬಸವ ಧ್ವಜ ಹಾರಿಸುವ ಮೂಲಕ ಚಾಲನೆ ನೀಡಿದರು.

ಚನ್ನಬಸವಾಶ್ರಮದಿಂದ ಆರಂಭ ಗೊಂಡ ರ್ಯಾಲಿ ಅಂಬೇಡ್ಕರ್ ವೃತ್ತ, ಬೊಮ್ಮಗೊಂಡೇಶ್ವರ ವೃತ್ತ, ಹಿರೇಮಠ ಗಲ್ಲಿ, ಚವಡಿ, ಗಡಿ ಮೂಲಕ, ಲೆಕ್ಚರ್ ಕಾಲೊನಿ, ಭೀಮ ನಗರ, ಸುಬಾಷ ಚೌಕ್, ಸರಾಫ್ ಬಜಾರ್, ಗಾಂಧಿ ಚೌಕ್, ಬಸವೇಶ್ವರ ವೃತ್ತ ಮೂಲಕ ಸಾಗಿ ಚನ್ನಬಸವಾಶ್ರಮದಲ್ಲಿ ಸಮಾವೇಶಗೊಂಡಿತ್ತು.

ಬಸವೇಶ್ವರ ಮಹಾರಾಜ ಕೀ ಜೈ, ವಿಶ್ವಗುರು ಬಸವಣ್ಣನವರಿಗೆ ಜಯವಾಗಲಿ, ಚನ್ನಬಸವ ಪಟ್ಟದ್ದೇವರಿಗೆ ಜಯವಾಗಲಿ ಎಂಬ ಘೋಷಣೆಗಳು ಮುಗಿಲು ಮುಟ್ಟುವಂತಿದ್ದವು.

ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಮಾತನಾಡಿ, ರ್ಯಾಲಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು, ಪುರುಷರು ಸ್ವಯಂ ಪ್ರೇರಣೆಯಿಂದ ಪಾಲ್ಗೊಂಡಿದ್ದು ಅತೀವ ಸಂತಸ ಉಂಟು ಮಾಡಿದೆ. ಅಮೃತ ಮಹೋತ್ಸವದ ಎಲ್ಲ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಭಕ್ತರು ಭಾಗವಹಿಸಬೇಕು ಕೋರಿದರು.

ಸಮಿತಿ ಅಧ್ಯಕ್ಷ ಯೋಗೇಶ ಅಷ್ಟೂರೆ, ಪ್ರಮುಖರಾದ ಚನ್ನಬಸವಣ್ಣ ಬಳತೆ, ಶಿವು ಲೋಖಂಡೆ, ವಿಲಾಸ ಬಕ್ಕಾ, ಜಗದೀಶ ಖಂಡ್ರೆ, ಜೈರಾಜ ಪಾತ್ರೆ, ಪ್ರಕಾಶ ಮಾಶಟ್ಟೆ, ಡಾ.ಅಮೀತ ಅಷ್ಟೂರೆ, ಚಂದ್ರಶೇಖರ ವಂಕೆ, ಉಮಾಕಾಂತ ವಾರದ, ಚಂದ್ರಶೇಖರ ಎಮ್ಮೆ, ಚಂದ್ರಕಾಂತ ಬಿರಾದಾರ, ಕಿರಣಕುಮಾರ ಖಂಡ್ರೆ, ಓಂಕಾರ ಕನಶೆಟ್ಟೆ, ಕಪಿಲ್ ಕಲ್ಯಾಣೆ, ಸಂಗಮೇಶ ವಾಲೆ, ಶುಭಾಂಗಿ ಬಳತೆ, ಸುನೀತಾ ಮೆನಕೇರಿ, ದೀಪಾ ಅಷ್ಟೂರೆ, ಮಲ್ಲಮ್ಮ ಪಾಟೀಲ, ಪಾರ್ವತಿ ಧುಮನಸೂರೆ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260419-33-1691251734

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.