ಭಾಲ್ಕಿ: ಎರಡು ಎಕರೆ ಭೂಮಿಯಲ್ಲಿ ಕಲ್ಲಂಗಡಿ ಹಣ್ಣು ಬೆಳೆದು ಕೇವಲ 65 ದಿನಗಳಲ್ಲಿ 5 ಲಕ್ಷ ನಿವ್ವಳ ಆದಾಯ ಗಳಿಸಿದ್ದಾರೆ ತಾಲ್ಲೂಕಿನ ಹಲಬರ್ಗಾ ಗ್ರಾಮದ ರೈತ ಶಿವಶಂಕರ ಪ್ರಭಾ. ಕೃಷಿಯಲ್ಲಿ ಶ್ರದ್ದೆಯಿಟ್ಟು ದುಡಿದಲ್ಲಿ ಭೂಮಿ ತಾಯಿ ರೈತರ ಕೈ ಹಿಡಿಯುತ್ತಾಳೆ ಎಂಬುದನ್ನು ತೋರಿಸಿದ್ದಾರೆ.

ದಿನದಿಂದ ದಿನಕ್ಕೆ ಸೂರ್ಯನ ಪ್ರಖರತೆ ಹೆಚ್ಚಾಗುತ್ತಿದ್ದು, ಸಹಜವಾಗಿ ಜನರು ಹೊಟ್ಟೆ ಮತ್ತು ದೇಹವನ್ನು ಸೂರ್ಯನ ಶಾಖದಿಂದ ತಂಪಾಗಿರಿಸಲು ಕಲ್ಲಂಗಡಿ ಸೇರಿದಂತೆ ಹಣ್ಣುಗಳ ಮೊರೆ ಹೋಗುತ್ತಿದ್ದಾರೆ. ಈ ವರ್ಷ ಸುರಿದ ಅತಿಯಾದ ಮಳೆ ಮತ್ತು ಚಳಿಯ ಕಾರಣ ನಿರೀಕ್ಷಿತ ಪ್ರಮಾಣದಲ್ಲಿ ಕಲ್ಲಂಗಡಿ, ಕರಬೂಜ ಬೆಳೆ ಬೆಳೆದಿಲ್ಲ. ಆದರೆ ಕಲ್ಲಂಗಡಿ ಹಣ್ಣು ರೈತರ ಕೈ ಬಿಟ್ಟಿಲ್ಲ.

ಕಳೆದ ಡಿಸೆಂಬರ್ ತಿಂಗಳ ಕೊನೆಯ ವಾರದಲ್ಲಿ ಎರಡು ಎಕರೆ ಹೊಲದಲ್ಲಿ ರೈತ ವಿನಾಯಕ ಪಾಟೀಲ ಅವರ ನರ್ಸರಿಯಿಂದ ಪ್ರತಿ ಸಸಿಗೆ ₹2ರಂತೆ 12 ಸಾವಿರ ಸಸಿಗಳನ್ನು ಖರೀದಿಸಿದ್ದೇನೆ. ಪ್ರತಿ ಎಕರೆಯಲ್ಲಿ ಆರು ಸಾವಿರ ಸಸಿಗಳನ್ನು ನೆಡಲಾಗಿದೆ ಎಂದು ಕೃಷಿಕ ಶಿವಕುಮಾರ ತಿಳಿಸಿದರು.

ಎರಡು ಎಕರೆಯ ಬೆಳೆಗೆ ಸುಮಾರು ₹1.20 ಲಕ್ಷ ಖರ್ಚು ತಗುಲಿದೆ. ಕಲ್ಲಂಗಡಿ ಸಸಿ ನಾಟಿಗೂ ಮೊದಲು ಭೂಮಿ ಹದ ಮಾಡಿ ಗೊಬ್ಬರ ನೀಡಿದ್ದೆ. ಸಸಿಯಿಂದ ಸಸಿಗೆ 2 ಅಡಿ, ಸಾಲಿನಿಂದ ಸಾಲಿಗೆ 6 ಅಡಿ ಅಂತರದಲ್ಲಿ ಗಿಡಗಳನ್ನು ನಾಟಿ ಮಾಡಿದ್ದೇನೆ. ದಿಬ್ಬ ಮಾಡಿ ಪ್ಲಾಸ್ಟಿಕ್ ಮಲ್ಚಿಂಗ್ ಅಳವಡಿಸಿದ್ದರಿಂದ ಹೆಚ್ಚಿನ ಕಳೆ ಬಂದಿಲ್ಲ. ಸಸಿ ನೆಡುವ ಜಾಗದಲ್ಲಿ ಪ್ಲಾಸ್ಟಿಕ್ ಹಾಳೆಗೆ ರಂಧ್ರ ಕೊರೆದು ಗೊಬ್ಬರ ನೀಡಿದ ಮೂರು ದಿನಗಳ ಬಳಿಕ ಅಲ್ಲಿ ಸಸಿ ನಾಟಿ ಮಾಡಿದ್ದೇನೆ ಎನ್ನುತ್ತಾರೆ ರೈತ ಶಿವಶಂಕರ.

ಒಂದು ಕಲ್ಲಂಗಡಿ ಹಣ್ಣು ಸರಾಸರಿ 2 ರಿಂದ 4 ಕೆ.ಜಿ ತೂಕ ಹೊಂದಿದೆ. ಕಲ್ಲಂಗಡಿ ಬೆಳೆಯ ಒಟ್ಟು 2 ಕಟಿಂಗ್ ನಿಂದ ಪ್ರತಿ ಎಕರೆಗೆ ಸುಮಾರು 17 ಟನ್ ಹಣ್ಣು ಇಳುವರಿ ಪಡೆದಿದ್ದೇನೆ. ಕಲ್ಲಂಗಡಿ ಬೆಳೆಯನ್ನು ಹೈದರಾಬಾದ್ ಮಾರುಕಟ್ಟೆಯಲ್ಲಿ ಕೆಜಿ.ಗೆ ₹21ರಂತೆ ಮಾರಾಟ ಮಾಡಿದ್ದೇನೆ. ಈಗ ಎರಡು ವಾರಗಳಿಂದ ಕೆಜಿ.ಗೆ ₹10 ರಿಂದ ₹12ಕ್ಕೆ ಮಾರಾಟ ನಡೆಯುತ್ತಿದೆ.

34 ಟನ್ ಕಲ್ಲಂಗಡಿ ಬೆಳೆ ಮಾರಾಟದಿಂದ ಸುಮಾರು ಸುಮಾರು ₹7 ಲಕ್ಷ ರೂಪಾಯಿ ಸಿಕ್ಕಿದೆ. ಇನ್ನು ಖರ್ಚು, ವಾಹನ ಸಾಗಾಟ, ಕಾರ್ಮಿಕರ ಖರ್ಚು ಸೇರಿದಂತೆ ₹2 ಲಕ್ಷ ವ್ಯಯ ಮಾಡಲಾಗಿದೆ. ಹಾಗಾಗಿ 60 ರಿಂದ 65 ದಿನಗಳಲ್ಲಿ ಸುಮಾರು ₹5 ಲಕ್ಷ ನಿವ್ವಳ ಲಾಭ ದೊರೆತಿದೆ ಎಂದು ರೈತ ಸಂತಸ ಹಂಚಿಕೊಂಡರು.

ಕೇವಲ ಮಳೆಯಾಶ್ರಿತ ಬೆಳೆಗಳನ್ನು ಬೆಳೆಯದೆ ತೋಟಗಾರಿಕೆ ಬೆಳೆಗಳನ್ನು ಬೆಳೆದು ಆರ್ಥಿಕ ಸ್ಥಿತಿಯನ್ನು ಉತ್ತಮಪಡಿಸಿಕೊಳ್ಳಬಹುದು.
–ಶಿವ–ಶಂಕರ, ಪ್ರಭಾ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.