ಭಾಲ್ಕಿ: ‘ಪಟ್ಟಣದ ಚನ್ನಬಸವಾಶ್ರಮದಲ್ಲಿ ಬಸವಣ್ಣನವರ ಜಯಂತಿ, ಚನ್ನಬಸವ ಪಟ್ಟದ್ದೇವರ 27ನೇ ಸ್ಮರಣೋತ್ಸವ, ವಚನ ಜಾತ್ರೆ-2026 ಹಾಗೂ ಬಸವಲಿಂಗ ಪಟ್ಟದ್ದೇವರ ಅಮೃತ ಮಹೋತ್ಸವ ನಿಮಿತ್ತ ಏಪ್ರಿಲ್ 1 ರಿಂದ 20 ರವರೆಗೆ ಪ್ರತಿದಿನ ಸಂಜೆ 6 ಗಂಟೆಗೆ ಬಸವ ದರ್ಶನ ಪ್ರವಚನ ನಡೆಯಲಿದೆ’ ಎಂದು ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ಹೇಳಿದರು.

ಪಟ್ಟಣದ ಹಿರೇಮಠದಲ್ಲಿ ಬಸವ ದರ್ಶನ ಪ್ರವಚನದ ಕರಪತ್ರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

‘ಬಸವತತ್ವ ಪ್ರಸಾರ ಮಾಡುವ ಮೂಲ ಉದ್ದೇಶದಿಂದ ಹಂದಿಗುಂದದ ಶಿವಾನಂದ ಸ್ವಾಮೀಜಿ ಅವರಿಂದ ಬಸವ ದರ್ಶನ ಪ್ರವಚನ ಏರ್ಪಡಿಸಲಾಗಿದೆ. ಧರ್ಮ ಕಾರ್ಯಕ್ಕಾಗಿ ದುಡಿದವರಿಗೆ ದೇವರ ಕರುಣೆ ಆಗುತ್ತದೆ. ಬಸವಗುರುವಿನ ಕರುಣೆ ಆಗಬೇಕಾದರೆ ನಾವು ಬಸವಕಾರ್ಯಕ್ಕೆ ದುಡಿಯುವುದನ್ನು ಕಲಿಯಬೇಕು. ಬಸವತತ್ವ ಪ್ರಸಾರದ ಕಳಕಳಿ ನಮ್ಮಲ್ಲಿ ಇರಬೇಕು. ನಮ್ಮ ಕೌಟುಂಬಿಕ ಕಾರ್ಯಕ್ಕಾಗಿ ನಾವು ಎಲ್ಲರಿಗೆ ಹೇಗೆ ಪ್ರೀತಿಯಿಂದ ಆಮಂತ್ರಿಸುತ್ತೇವೆಯೋ ಅದೇ ರೀತಿ ಈ ಕಾರ್ಯಕ್ಕೆ ತಾವೆಲ್ಲರೂ ಸಮಯ ನೀಡಿದರೆ ಈ ಕಾರ್ಯಕ್ರಮ ಯಶಸ್ವಿಯಾಗುತ್ತದೆ’ ಎಂದು ಹೇಳಿದರು.

ಕಲಬುರಗಿಯ ಹಿರಿಯ ಸಾಹಿತಿ ಡಾ.ಕಲ್ಯಾಣರಾವ್ ಪಾಟೀಲ ಮಾತನಾಡಿದರು.

ಕಿತ್ತೂರು ರಾಣಿ ಪ್ರಶಸ್ತಿಗೆ ಆಯ್ಕೆಯಾದ ಮಲ್ಲಮ್ಮ ಆರ್.ಪಾಟೀಲರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಪ್ರವಚನ ಸೇವಾ ಸಮಿತಿ ಅಧ್ಯಕ್ಷೆ ಪಂಕಜಾ ಶಿವು ಲೋಖಂಡೆ, ರೇಖಾ ಮಹಾಜನ, ರೇಖಾಬಾಯಿ ಅಷ್ಟೂರೆ, ನಿರ್ಮಲಾ ಪಾಟೀಲ, ಶಾರದಾಬಾಯಿ ಹುಣಜೆ, ಸುನೀತಾ ಮಮ್ಮಾ, ರುದ್ರಾಣಿ ಬಕ್ಕಾ, ಸುವರ್ಣಾ ಬಲ್ಲೂರೆ, ಪ್ರೇಮಲಾ ತೊಂಡಾರೆ, ವನೀತಾ ಪಾಟೀಲ, ಬಸಮ್ಮತಾಯಿ, ಶಂಭುಲಿಂಗ ಕಾಮಣ್ಣ, ನಾಗಶೆಟ್ಟೆಪ್ಪ ಲಂಜವಾಡೆ, ಗುಂಡಪ್ಪ ಸಂಗಮಕರ, ಶಾಂತಯ್ಯ ಸ್ವಾಮಿ, ರಾಜು ಜುಬರೆ, ಮಲ್ಲಿಕಾರ್ಜುನ ಹುಣಜೆ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260324-33-258463883

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.